Home News ಎರಡು ತಲೆ ಆರು ಕಾಲಿನ ಕುರಿ ಮರಿ ಜನನ

ಎರಡು ತಲೆ ಆರು ಕಾಲಿನ ಕುರಿ ಮರಿ ಜನನ

0
Sidlaghatta Taluk Sheep Farming Two Headed Lamb

ಶಿಡ್ಲಘಟ್ಟ ತಾಲ್ಲೂಕಿನ ಕೋಟಗಲ್ ಗ್ರಾಮದ, ಗ್ರಾಮ ಪಂಚಾಯಿತಿ ಸದಸ್ಯ ಚಿನ್ನಕನ್ನಗಾರಿ ಕೆ.ಎಚ್. ಮಂಜುನಾಥ ಅವರ  ಮನೆಯಲ್ಲಿನ ಸಾಕಿದ ಕುರಿ ವಿಚಿತ್ರ ಮರಿಗೆ ಜನ್ಮ ನೀಡಿದೆ. ಅದಕ್ಕೆ ಎರಡು ತಲೆ ಆರು ಕಾಲಿದ್ದು ಅಚ್ಚರಿ ಮೂಡಿಸಿದೆ.

 ಮಂಜುನಾಥ್ ಮೂಲತಃ ಕುರಿಗಾಹಿ. ಸುಮಾರು ಕುರಿಗಳನ್ನು ಸಾಕುತ್ತಿದ್ದಾರೆ.  ಈ ಹಿಂದೆ ಇದೇ ಕುರಿ ಸಾಮಾನ್ಯ ಕುರಿಗಳಿಗೆ ಅಂದ್ರೆ ಒಂದು ದೇಹ, ಒಂದು ಮುಖ, ನಾಲ್ಕು ಕಾಲಿನ ಎರಡು ಕುರಿಮರಿಗಳಿಗೆ ಜನ್ಮ ನೀಡಿತ್ತು. ಆದರೆ ಈ ಬಾರಿ ದೇಹ ಅಂಟಿಕೊಂಡಿರುವ ಎರಡು ಕುರಿಮರಿಗೆ ಜನ್ಮ ನೀಡಿದೆ. ಕಳೆದ ಹತ್ತು ವರ್ಷಗಳಲ್ಲಿ ಇಂತಹ ಕುರಿಮರಿ ಜನನವಾಗಿರುವುದು, ಅಥವಾ ಸುತ್ತಮುತ್ತ ಈ ತರಹದ ಕುರಿಮರಿಯನ್ನ ಅವರು ನೋಡೆ ಇಲ್ಲ ಎನ್ನುತ್ತಾರೆ.  ಈ ಕುರಿ ರೂಪವನ್ನು ನೋಡಲು ಸುತ್ತಮುತ್ತಲಿನ ಸ್ಥಳೀಯ ಜನರು ಮುಗಿಬಿದ್ದಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version