ಓಂ ಶಕ್ತಿ ಅಮ್ಮನವರ ಗಂಜಿ ಪೂಜಾ ಮಹೋತ್ಸವ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ಹೃದಯಭಾಗದಲ್ಲಿರುವ ಗ್ರಾಮದೇವತೆ ಶ್ರೀ ಗಂಗಮ್ಮದೇವಿ ದೇವಾಲಯದಲ್ಲಿ ಶನಿವಾರ ಭಗವತಿ ಜ್ಞಾನಾಕ್ಷಿ ಶ್ರೀ ರಾಜರಾಜೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಓಂ ಶಕ್ತಿ (Om Shakti) ಅಮ್ಮನವರ ಗಂಜಿ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ದೇವಾಲಯದಲ್ಲಿ ಅಮ್ಮನವರಿಗೆ ಪೂರ್ಣಕುಂಭದೊಂದಿಗೆ ವಸ್ತ್ರ ಮತ್ತು ಮಡಲಕ್ಕಿ ಸೇವೆ, ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿ, ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.

ಅಮ್ಮನವರ ಪಲ್ಲಕ್ಕಿಯನ್ನು ದೇವಾಲಯದಿಂದ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಗಾಂಧಿನಗರದಲ್ಲಿನ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಅಮ್ಮನವರಿಗೆ ಮಡಲಕ್ಕಿ ಸೇವೆ, ಭಕ್ತರಿಗೆ ಪಾನಕ ಮತ್ತು ಹೆಸರುಬೇಳೆ ವಿತರಿಸಲಾಯಿತು.

ಮೆರವಣಿಗೆಯಲ್ಲಿ ಕೃತಕ ಆನೆ, ಕೋಲಾಟ, ತಮಿಳುನಾಡು ಪಂಬುವಾದ್ಯ, ಕೇರಳದ ಚಂಡೆವಾದ್ಯ, ಪಂಡರಿ ಭಜನೆ, ಡೊಳ್ಳು ಕುಣಿತ, ಮಂಗಳ ವಾದ್ಯ, ಹಲಗೆ ವಾದ್ಯ ವಿಶೇಷ ಆಕರ್ಷಣೆಯಾಗಿತ್ತು. ಗ್ರಾಮದೇವತೆ ಶ್ರೀ ಗಂಗಮ್ಮದೇವಿ ದೇವಾಲಯದಿಂದ ಕಾಮಾಟಿಗರಪೇಟೆ, ಅಶೋಕ ರಸ್ತೆ, ಕೋಟೆ ವೃತ್ತ, ಟಿ.ಬಿ.ರಸ್ತೆ, ಹಳೆ ಆಸ್ಪತ್ರೆ ರಸ್ತೆ, ಕೆಮ್ಮಣ್ಣನ ಬಾಗಿಲು, ಗಾಂಧಿ ನಗರ, ಮುನೇಶ್ವರ ದೇವಾಲಯ, ಉಲ್ಲೂರುಪೇಟೆ, ಅಶೋಕ ರಸ್ತೆಯ ಮೂಲಕ ಮೆರವಣಿಗೆ ದೇವಾಲಯವನ್ನು ತಲುಪಿತು.

“ಊರಿನ ಕ್ಷೇಮಾಭಿವೃದ್ಧಿ ಹಾಗೂ ಶ್ರೇಯಸ್ಸನ್ನು ಕೋರಿ ಓಂ ಶಕ್ತಿ ಅಮ್ಮನವರ ಗಂಜಿ ಪೂಜಾ ಮಹೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಈ ಪೂಜಾ ಮಹೋತ್ಸವದಲ್ಲಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರೆಲ್ಲರೂ ಭಾಗವಹಿಸಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ” ಎಂದು ಭಗವತಿ ಜ್ಞಾನಾಕ್ಷಿ ಶ್ರೀ ರಾಜರಾಜೇಶ್ವರಿ ಸೇವಾ ಟ್ರಸ್ಟ್ ನ ವಸಂತ್ ಕುಮಾರ್ ತಿಳಿಸಿದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!