ಪೌರ ಕಾರ್ಮಿಕರ ದಿನಾಚರಣೆ

- Advertisement -
- Advertisement -

Sidlaghatta : ರಾಜ್ಯ ಪೌರ ಸೇವಾ ಸಹಕಾರ ಸಂಘ ಹಾಗೂ ಶಿಡ್ಲಘಟ್ಟ ನಗರಸಭೆ ವತಿಯಿಂದ ನಗರದ ಚಿಂತಾಮಣಿ ರಸ್ತೆಯಲ್ಲಿರುವ ನಗರಸಭೆ ಉದ್ಯಾನವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ಅವರು ಮಾತನಾಡಿದರು.

ಪೌರಸೇವಾ ಕಾರ್ಮಿಕರ ವಿಮೆಗಾಗಿ 8 ಲಕ್ಷ ರೂ, ಸುರಕ್ಷತಾ ಸಾಮಗ್ರಿ ಸಾಧನ ಸಲಕರಣೆ ಖರೀದಿಗೆ 15 ಲಕ್ಷ ರೂ, ನಿವೇಶನ ಖರೀದಿಗೆ 28 ಲಕ್ಷ ರೂ, ಆರೋಗ್ಯ ಹಾಗೂ ಗೃಹನಿರ್ಮಾಣಕ್ಕೆ 17 ಲಕ್ಷ ರೂ, ನಗರೋತ್ಥಾನ ನಾಲ್ಕನೇ ಹಂತದ ಯೋಜನಾ ನಿಧಿಯಲ್ಲಿ ಪೌರಸೇವಾ ಕಾರ್ಮಿಕರ ಅಭಿವೃದ್ಧಿಗಾಗಿ 87 ಲಕ್ಷ ರೂಗಳನ್ನು ಮೀಸಲಿಟ್ಟಿದ್ದೇವೆ ಎಂದರು.

ಎಲ್ಲರ ಆರೋಗ್ಯ ಸುಧಾರಣೆಗೆ ಶ್ರಮಿಸುವ ಪೌರಕಾರ್ಮಿಕರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಅಗತ್ಯವಿರುವ ಸುರಕ್ಷತಾ ಪರಿಕರಗಳ ವಿತರಣೆ ಹಾಗೂ ಆರೋಗ್ಯ ತಪಾಸಣೆ ಕಾಲ ಕಾಲಕ್ಕೆ ನಡೆಸಲಾಗಿದೆ. ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಪ್ರತಿಯೊಬ್ಬ ಪೌರಕಾರ್ಮಿಕರಿಗೂ ಸಮಸ್ತ್ರ ಮತ್ತು ಕುಕ್ಕರ್ ನೀಡಿದ್ದು, ಊಟದ ವ್ಯವಸ್ಥೆ ಮಾಡಿದ್ದಾರೆ. ಪೌರ ಕಾರ್ಮಿಕರ ಶ್ರಮ ಹಾಗೂ ವೃತ್ತಿಯನ್ನು ಪ್ರತಿಯೊಬ್ಬ ನಾಗರಿಕರು ಗೌರವಿಸುವಂತಹ ಕೆಲಸವಾಗಬೇಕು ಎಂದರು.

ನಗರಸಭೆ ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, ಯಾರೂ ದಿನಗೂಲಿ ನೌಕರಾಗುಳಿಯಬಾರದು ಎಂದು ಸರ್ಕಾರ ಎಲ್ಲ ಪೌರಕಾರ್ಮಿಕರನ್ನೂ ಖಾಯಂ ನೌಕರರನ್ನಾಗಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಉಳಿದ ವಾಟರ್ ಮನ್ ಗಳೂ ಖಾಯಂ ನೌಕರರಾಗಲಿದ್ದಾರೆ. ಖಾಯಂ ಪೌರಕಾರ್ಮಿಕರರ ಸರ್ಕಾರ ಪ್ರೋತ್ಸಾಹಧನ ಎರಡು ಸಾವಿರ ರುಗಳನ್ನು ನೀಡಿದೆ. ಅದಲ್ಲದೆ ಪ್ರೋತ್ಸಾಹಕವಾಗಿ ಅವರ ಖಾತೆಗಳಿಗೆ ವಿಶೇಷ ಭತ್ಯೆ 7000 ರೂ ಜಮೆ ಮಾಡಲಾಗಿದೆ.

ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರದ ಜೊತೆಗೆ ಮೊಟ್ಟೆ ಕೂಡ ಕೊಡಲಿದ್ದೇವೆ. ಎಲ್ಲ ಪೌರಕಾರ್ಮಿಕರಿಗೆ ಆರೋಗ್ಯ ಇಲಾಖೆ ಹಾಗೂ ಎಂ.ವಿ.ಜೆ ಆಸ್ಪತ್ರೆ ಸಹಯೋಗದಲ್ಲಿ ಮಾಸ್ಟರ್ ಚೆಕ್ ಅಪ್ ಮಾಡಿಸಿದ್ದು, ಹೆಪಾಟಟಿಸ್ ಬಿ ಚುಚ್ಚುಮದ್ದನ್ನು ಸಹ ಕೊಡಿಸಿರುವುದಾಗಿ ಹೇಳಿದರು.

ನಗರಸಭೆ ಸದಸ್ಯ ಎಲ್.ಅನಿಲ್ ಕುಮಾರ್ ಮಾತನಾಡಿ, ಪೌರಕಾರ್ಮಿಕರು ಕಡ್ಡಾಯವಾಗಿ ಸುರಕ್ಷತಾ ಸಾಧನಗಳನ್ನು ಬಳಸಬೇಕು. ದುರಭ್ಯಾಸ ದುಶ್ಚಟಗಳಿಂದ ದೂರವಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಪೌರಕಾರ್ಮಿಕರಿಗೆ ಕಾರ್ಯಾಗಾರದ ಅಗತ್ಯವಿದ್ದು, ನಗರಸಭೆ ವತಿಯಿಂದ ಆಯೋಜಿಸುವಂತೆ ವಿನಂತಿಸಿದರು.

ಪೌರಕಾರ್ಮಿಕರಿಗಾಗಿ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಶೀಲ್ಡ್, ಪದಕಗಳು ಹಾಗೂ ಬಹುಮಾನಗಳನ್ನು ನೀಡಲಾಯಿತು. ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಪೌರಸೇವಾ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಮುರಳಿ, ನಗರಸಭೆ ಸದಸ್ಯರಾದ ಎಲ್.ಅನಿಲ್‌ಕುಮಾರ್, ಕೃಷ್ಣಮೂರ್ತಿ, ಪದ್ಮಿನಿ ಕಿಶನ್, ಸುರೇಶ್, ಚಿತ್ರಾ ಮನೋಹರ್, ಆಶಿಯಾ ಸುಲ್ತಾನ, ನಾರಾಯಣಸ್ವಾಮಿ, ಶಿವಮ್ಮ, ವೆಂಕಟಸ್ವಾಮಿ, ಅಕ್ರಂ, ಎಸ್.ರಾಘವೇಂದ್ರ, ಮುಖಂಡರಾದ ಎಸ್.ಎಂ.ರಮೇಶ್, ವ್ಯವಸ್ಥಾಪಕ ನಾಗರಾಜ್ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!