Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಶಾಸಕ ಬಿ.ಎನ್. ರವಿಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಕ್ಕಳಿಗೆ ನಾವು ಕೊಡಬಹುದಾದ ಉತ್ತಮ ಆಸ್ತಿ ಎಂದರೆ ಆರೋಗ್ಯ. ಅವರು ಆರೋಗ್ಯವಂತರಾಗಿ ಇದ್ದಾಗ ಮಾತ್ರ ಬಲಿಷ್ಠ ದೇಶ ಕಟ್ಟಲು ಸಾಧ್ಯ. ಹೀಗಾಗಿ ಯಾವುದೇ ರೋಗರುಜಿನೆ ಬಾರದಂತೆ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಮಿಸ್ಬಾ ಅವರು ಮಾತನಾಡಿ, “ಶಿಡ್ಲಘಟ್ಟ ತಾಲ್ಲುಕಿನಲ್ಲಿ ಹಬ್ಬದ ರಿತಿಯಲ್ಲಿ ಪೊಲಿಯೋ ಲಸಿಕೆ ಹಾಕಿಸುವ ಕಾರ್ಯಕ್ರಮ ಆಚರಿಸುತ್ತಿರುವುದನ್ನು ಕಂಡಾಗ ಆರೋಗ್ಯಕ್ಕೆ ನೀವು ಕೊಡುವ ಪ್ರಾಮುಖ್ಯತೆ ಅರಿವಾಗುತ್ತದೆ” ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, “ಶಿಡ್ಲಘಟ್ಟ ತಾಲ್ಲುಕಿನಾದ್ಯಂತ 106 ಬೂತ್ ಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ 26 ಬೂತ್ ಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ 80 ಬೂತ್ ಗಳನ್ನು ಸ್ಥಾಪಿಸಿ, ಪ್ರತಿ ಬೂತ್ ಗಳಲ್ಲಿಯೂ 250 ಮಕ್ಕಳಿಗೆ ಲಸಿಕೆ ಹಾಕುವ ಗುರಿ ನೀಡಲಾಗಿದೆ. ತಾಲ್ಲೂಕಿನಾದ್ಯಂತ 24,500 ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ. ಮೊದಲ ದಿನ ಶೇ 95 ರಷ್ಟು ಲಸಿಕೆ ಹಾಕಲಾಗುತ್ತದೆ. ಎರಡು ದಿನ ಮನೆಮನೆಗೆ ತೆರಳಿ ಲಸಿಕೆ ಹಾಕಲಾಗುತ್ತದೆ” ಎಂದು ಮಾಹಿತಿ ನೀಡಿದರು.
ತಾಲ್ಲುಕು ಪಂಚಾಯಿತಿ ಇಒ ಜಿ.ಮುನಿರಾಜ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ರಮೇಶ್, ಉಪಾಧ್ಯಕ್ಷ ಶಿವಾನಂದ್, ಸದಸ್ಯರಾದ ಆರ್.ಎ. ಉಮೇಶ್, ರವಿಪ್ರಸಾದ್, ಸಿ.ಕೆ.ಗಜೇಂದ್ರ ಬಾಬು. ಎಂ.ಜೆ.ಶ್ರೀನಿವಾಸ್, ತಿರುಮಲೇಶ್, ಸವಿತಾ ಗೋಪಾಲ, ಭಾಗ್ಯಮ್ಮ, ಪಿಡಿಓ ಶಾರದಾ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಮನೋಹರ್. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನವತಾಜ್, ವೈದ್ಯಾಧಿಕಾರಿ ಡಾ. ರಮೇಶ್, ಆಯುಷ್ ವೈದ್ಯ ಡಾ.ವಿಜಯಕುಮಾರ್, ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಗ್ರಾಮದ ಬಿ.ಕೆ ಶ್ರೀನಿವಾಸ್, ಧರ್ಮೇಂದ್ರ, ಶ್ರೀನಿವಾಸ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.