News

ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್: 14 ವರ್ಷದೊಳಗಿನ ಸಿಂಗಲ್ಸ್, ಡಬಲ್ಸ್ ಪ್ರಶಸ್ತಿ ಗೆದ್ದ ಪುನೀತ್ ಮನೋಹರ್

Puneeth Manohar winner boys under 14 Fenesta Open national tennis championship New Delhi

Sidlaghatta : ರಾಷ್ಟ್ರಮಟ್ಟದ ಟೆನಿಸ್ ಅಂಗಳದಲ್ಲಿ ಶಿಡ್ಲಘಟ್ಟದ ಯುವ ಪ್ರತಿಭೆ ಪುನೀತ್ ಮನೋಹರ್ ಗಮನಾರ್ಹ ಸಾಧನೆ ಮಾಡಿದ್ದಾರೆ. ನವದೆಹಲಿಯ DLTA ಕಾಂಪ್ಲೆಕ್ಸ್‌ ನಲ್ಲಿ ನಡೆದ 31ನೇ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ ಷಿಪ್‌ ನಲ್ಲಿ 14 ವರ್ಷದೊಳಗಿನ ಬಾಲಕರ ವಿಭಾಗದ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಪ್ರಶಸ್ತಿ ಗೆದ್ದು ಅವಳಿ ಚಿನ್ನದ ಸಾಧನೆ ಮಾಡಿದ್ದಾರೆ.

ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮನೋಹರ್ ಅವರ ಪುತ್ರ ಪುನೀತ್ ಅವರ ಈ ಸಾಧನೆಯು ಸ್ಥಳೀಯ ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಬಾಲ್ಯದಲ್ಲಿಯೇ ಟೆನಿಸ್‌ ನಲ್ಲಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೆಲ್ಲುವ ಮೂಲಕ ಪುನೀತ್ ತಮ್ಮ ಕ್ರೀಡಾ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ಸಿಂಗಲ್ಸ್ ಫೈನಲ್‌ನಲ್ಲಿ ಏನಾಯಿತು?

ಸಿಂಗಲ್ಸ್ ವಿಭಾಗದ ಫೈನಲ್‌ ನಲ್ಲಿ ಎರಡನೇ ಶ್ರೇಯಾಂಕದ ಪುನೀತ್, ತೆಲಂಗಾಣದ ಐದನೇ ಶ್ರೇಯಾಂಕದ ಸತ್ಯ ಚಿಂತಾಗುಂಟ ಅವರನ್ನು 6–3, 6–2 ನೇರ ಸೆಟ್‌ ಗಳಿಂದ ಮಣಿಸಿ ಪ್ರಶಸ್ತಿ ಗೆದ್ದರು. ಪಂದ್ಯದ ಆರಂಭದಿಂದಲೇ ಸಂಯಮದ ಆಟ ಪ್ರದರ್ಶಿಸಿದ ಪುನೀತ್, ಎದುರಾಳಿಯ ಸವಾಲನ್ನು ಸಮರ್ಥವಾಗಿ ಎದುರಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರು.

ಡಬಲ್ಸ್ ಫೈನಲ್ ಫಲಿತಾಂಶವೇನು?

ಇದಕ್ಕೂ ಮುನ್ನ ನಡೆದ ಡಬಲ್ಸ್ ಫೈನಲ್‌ ನಲ್ಲಿ ಮಹಾರಾಷ್ಟ್ರದ ಆರವ್ ಚಲ್ಲಾನಿ ಅವರೊಂದಿಗೆ ಕಣಕ್ಕಿಳಿದ ಪುನೀತ್, ಪಂಜಾಬ್‌ ನ ಆದೇಶ್‌ಬೀರ್ ಗುಮಾನ್ ಮತ್ತು ಮಹಾರಾಷ್ಟ್ರದ ಸ್ಪರ್ಶ್ ಪಾಟೀಲ್ ಜೋಡಿಯನ್ನು 6–2, 6–2 ಸೆಟ್‌ ಗಳಿಂದ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಸಿಂಗಲ್ಸ್‌ ನಲ್ಲಿಯೂ ಜಯ ಸಾಧಿಸುವ ಮೂಲಕ ಚಾಂಪಿಯನ್‌ ಷಿಪ್‌ ನಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದರು.

ಅಖಿಲ ಭಾರತ ಟೆನಿಸ್ ಸಂಸ್ಥೆಯ (AITA) ಅಂಡರ್‌-14 ವಿಭಾಗದಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಪುನೀತ್, ರಾಷ್ಟ್ರೀಯ ಚಾಂಪಿಯನ್‌ ಷಿಪ್‌ ನಲ್ಲಿ ತೋರಿದ ಸಾಮರ್ಥ್ಯದ ಮೂಲಕ ಭರವಸೆಯ ಯುವ ಆಟಗಾರನಾಗಿ ಹೊರಹೊಮ್ಮಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.