ಗುಣಮಟ್ಟದ ಹಾಲು ಪೂರೈಸಿದರೆ ಹಾಲು ಉತ್ಪಾದಕರ ಸಂಘಗಳ ಅಭಿವೃದ್ಧಿ ಸಾಧ್ಯ

- Advertisement -
- Advertisement -

Sidlaghatta : ರೈತರು ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿ ಸಾಧ್ಯವಾಗಲಿದ್ದು, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಬೈಯಪ್ಪನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಹೇಳಿದರು.

ತಾಲ್ಲೂಕಿನ ಬೈಯಪ್ಪನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ನಡೆದ 2025–26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಗುಡಿಬಂಡೆ ಶಿಬಿರದ ನಿರ್ದೇಶಕಿ ಎಂ. ಸುಮಾ ರವಿಚಂದ್ರನ್ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರಗಾಲದಿಂದ ಹಾಲು ಉತ್ಪಾದನೆ ಕುಂಠಿತವಾಗಿದ್ದು, ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟದಲ್ಲಿ ಚರ್ಚೆ ನಡೆಯುತ್ತಿದೆ ಎಂದರು. ಈ ವರ್ಷ ಒಕ್ಕೂಟದಿಂದ ಚಾಪ್ ಕಟರ್ ಹಾಗೂ ಮ್ಯಾಟ್‌ಗಳನ್ನು ನೀಡಲು ತೀರ್ಮಾನಿಸಲಾಗಿತ್ತಾದರೂ, ಒಕ್ಕೂಟ ನಷ್ಟದಲ್ಲಿರುವ ಕಾರಣ ನೀಡಲು ಸಾಧ್ಯವಾಗಿಲ್ಲ. ಮುಂದಿನ ವರ್ಷ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೈಯಪ್ಪನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಒಕ್ಕೂಟ ಹಾಗೂ ಇತರ ಸಂಸ್ಥೆಗಳಿಂದ ₹10 ಲಕ್ಷ ಸಹಾಯಧನ ದೊರೆಯಲಿದೆ. ಸಂಘದ ಎಲ್ಲ ಸದಸ್ಯರು ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಬೇಕು, ಹಸುಗಳಿಗೆ ವಿಮೆ ಹಾಗೂ ಸದಸ್ಯರಿಗೆ ಆರೋಗ್ಯ ವಿಮೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಯಿತು. ಸದಸ್ಯರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಒಕ್ಕೂಟದಿಂದ ₹1 ಲಕ್ಷ ಸಹಾಯಧನ ನೀಡಲಾಗುವುದು ಎಂದು ತಿಳಿಸಲಾಯಿತು.

ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ 14 ಹಾಲು ಉತ್ಪಾದಕರನ್ನು ಸಂಘದ ಕಾರ್ಯನಿರ್ವಹಣಾಧಿಕಾರಿ ಮೂಲಕ ಗುರುತಿಸಿ, ಹಸು ಖರೀದಿಸಲು ಒಕ್ಕೂಟದಿಂದ ತಲಾ ₹50 ಸಾವಿರ ಸಾಲ ನೀಡಲಾಗುವುದು. ಸಾಲವನ್ನು 20 ಕಂತುಗಳಲ್ಲಿ ಮರುಪಾವತಿಸಬೇಕು. ಹಸುಗಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡುವ ಮೂಲಕ ಹಾಲಿನ ಉತ್ಪಾದನೆ ಹೆಚ್ಚಿಸಬೇಕು ಎಂದು ಹೇಳಲಾಯಿತು.

ಸಭೆಯಲ್ಲಿ ಸಂಘದ 2025–26ನೇ ಸಾಲಿನ ವಾರ್ಷಿಕ ಆಡಿಟ್ ವರದಿ ಪರಿಶೀಲಿಸಿ ಅನುಮೋದಿಸಲಾಯಿತು. ನಿವ್ವಳ ಲಾಭ ಹಂಚಿಕೆ ಹಾಗೂ ಲೆಕ್ಕಪರಿಶೋಧನಾ ಪುಸ್ತಕಕ್ಕೂ ಒಪ್ಪಿಗೆ ಪಡೆಯಲಾಯಿತು. ಒಕ್ಕೂಟದ ಗುಡಿಬಂಡೆ ಶಿಬಿರದ ವಿಸ್ತರಣಾಧಿಕಾರಿ ಮೋಹನ್ ವರದಿ ಮಂಡಿಸಿದರು.

ಗ್ರಾಮದ ಮುಖಂಡ ಬಿ.ಸಿ. ನರಸಿಂಹರೆಡ್ಡಿ, ಸಂಘದ ಉಪಾಧ್ಯಕ್ಷೆ ವರಲಕ್ಷ್ಮಮ್ಮ, ನಿರ್ದೇಶಕರಾದ ಉಮಾದೇವಿ, ಮಂಜುಳಾ, ಯಶೋದಮ್ಮ, ಭಾಗ್ಯಮ್ಮ, ಶಾಂತಮ್ಮ, ಅನುಸೂಯ, ಅಮರಾವತಿ, ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ಮಮತಾ, ಹಾಲು ಪರೀಕ್ಷಕಿ ಬಿ.ಎಸ್. ರೂಪ ಹಾಗೂ ಸಂಘದ ಸದಸ್ಯರು ಇದ್ದರು.

In English: Farmers who supply quality milk will drive the development of milk producers’ cooperatives, benefiting themselves in the process, said Venkatalakshmamma, president of the Byyappanahalli Women’s Milk Producers Cooperative Society, at its 2025-26 annual general meeting. Chikkaballapura Milk Union director M. Suma Ravichandran Reddy said drought has hit milk production hard and the union is discussing a price hike, though planned chaff-cutter and mat distributions had to be postponed a year due to the union’s own losses. The society will get Rs 10 lakh in aid to build a proper building; members must get Yashasvini health cards and cattle/health insurance, with Rs 1 lakh support to a deceased member’s family. Fourteen farmers with a clean repayment record will get Rs 50,000 loans each (repayable in 20 instalments) to buy cows, and the annual audit report was reviewed and approved.

ಈ ವಾರವೇ ವರದಿಯಾಗಿದ್ದ ಇಂತಹುದೇ ಮತ್ತೊಂದು ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆಯ ಬಗ್ಗೆ ದಿಬ್ಬೂರಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ₹4.5 ಲಕ್ಷ ಆದಾಯ, ₹2 ಕೋಟಿ ಆ… ಎಂಬ ವರದಿಯನ್ನೂ ಓದಿ.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -