Home News ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕಗಳ ಉದ್ಘಾಟನೆ

ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕಗಳ ಉದ್ಘಾಟನೆ

0
Sidlaghatta Raita Sangha hasiru sene village units inauguration

Sidlaghatta : ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ವಿಚಾರದಲ್ಲಿ ರೈತರ ಭೂಸ್ವಾಧೀನಕ್ಕೆ ಬರುವ ಅಧಿಕಾರಿಗಳು ಗ್ರಾಮಕ್ಕೆ ಬರದ ಹಾಗೆ ದಿಗ್ಭಂಧನೆ ಮಾಡಿ. ದೇವಸ್ಥಾನ, ಚಾವಡಿ ಅಥವಾ ದನದ ಕೊಟ್ಟಿಗೆಯಲ್ಲಿ ಅವರನ್ನು ಕೂಡಿ ಹಾಕಿ. ಸರ್ಕಾರಗಳ ಲೂಟ್ ಮಾರೋ ಕಾರ್ಯಕ್ರಮಗಳ ಮೂಲಕ ರೈತರಿಗೆ ವಿಷಪ್ರಾಶನ ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು

ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ನಲ್ಲಿ ಬುಧವಾರ ರೈತ ಸಂಘ ಹಾಗೂ ಹಸಿರು ಸೇನೆಯ ಆರು ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೈತರನ್ನು ಕೃಷಿ ಭೂಮಿಯಿಂದ ಬೀದಿಗೆ ಹಾಕುವ ಕೆಲಸದಲ್ಲಿ ನಿರತರಾಗಿರುವ ರಾಜ್ಯ ಸರ್ಕಾರದ ಮಂತ್ರಿಗಳೆ, ನೀವು ತಿಪ್ಪರಲಾಗ ಹಾಕಿದರೂ ನಾವು ಭೂಮಿಯನ್ನು ಬಿಡುವುದಿಲ್ಲ. ಕರ್ನಾಟಕದಲ್ಲಿ ಎಲ್ಲೆಲ್ಲಿ ನೀವು ನೋಟಿಫಿಕೇಶನ್ ಮಾಡಿದ್ದೀರೋ ಅಲ್ಲಿಗೆಲ್ಲಾ ನಾವು ಬರುತ್ತೇವೆ. ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿವೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಹಣದಾಸೆಯಿಂದ ರೈತರನ್ನು ಒಕಲಬ್ಬಿಸುವ ದುಸ್ಸಾಹಸವನ್ನು ಸರ್ಕಾರ ಮಾಡುತ್ತಿದ್ದು ರೈತರು ಇದರ ವಿರುದ್ಧ ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಬೇಕು. ಅಗತ್ಯ ಬಿದ್ದಲ್ಲಿ ಜೈಲ್ ಭರೋ ಚಳುವಳಿ, ಕರ್ನಾಟಕ ವಿಧಾನಸಭೆಗೆ ಮುತ್ತಿಗೆ ಹಾಕಲು ತಯಾರಾಗಿರಬೇಕೆಂದು ಕರೆ ನೀಡಿದರು.

ಜಂಗಮಕೋಟೆ ಸುತ್ತಮುತ್ತಲಿನ 2820 ಅಧಿಕ ಎಕರೆ ಜಮೀನು ಕೈಗಾರಿಕೆ ಹೆಸರಿನಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಯಾರೂ ಅವಕಾಶ ಕೊಡಬಾರದು. ಈಗಾಗಲೇ ಕೈಗಾರಿಕೆಗಾಗಿ ಭೂ ಸ್ವಾಧೀನ ಮಾಡಿಕೊಂಡಿರುವ ಜಾಗಗಳನ್ನು ಕೆಲವು ಪ್ರಭಾವಿಗಳು ಅವರ ಮಕ್ಕಳ ಹಾಗೂ ಮೊಮ್ಮಕ್ಕಳ ಹೆಸರಿನಲ್ಲಿ ಪಡೆದು ಬಾಡಿಗೆ ನೀಡಿದ್ದಾರೆ. ಇವೆಲ್ಲವೂ ಬಹಿರಂಗಪಡಿಸಲಾಗುವುದು ಎಂದು ಹೇಳಿದರು.

ರೈತರು ಆರ್ಥಿಕವಾಗಿ ಸಬಲರಾಗಲು ಚಿಂತನೆ ಮಾಡಬೇಕು. ಯಾರು ಅವರ ಹಿತವನ್ನು ಕಾಪಾಡುತ್ತಾರೆ ಎಂಬುದನ್ನು ತಿಳಿಯಬೇಕು. ಮುಂಬರುವ 2028 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರೈತರು ಸಂಘಟಿತರಾಗಿ ರೈತರ ಹಿತವನ್ನು ಕಾಪಾಡುವ ಪ್ರತಿನಿಧಿಗಳನ್ನು ವಿಧಾನಸಭೆಗೆ ಕಳಿಸಬೇಕು. ಶಿಡ್ಲಘಟ್ಟ ಕ್ಷೇತ್ರದಲ್ಲಿ ಭಕ್ತರಹಳ್ಳಿ ಬೈರೇಗೌಡ ಅವರನ್ನು ಗೆಲ್ಲಿಸಿ ನಮ್ಮೊಂದಿಗೆ ವಿಧಾನಸಭಾ ಕಳುಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರಾಜ್ಯ ಸಂಘದ ಉಪಾಧ್ಯಕ್ಷ ಕೆಂಪೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಪ್ಪ, ಮಲ್ಲಯ್ಯ ಸ್ವಾಮಿ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಹೀರೆಬಲ್ಲ ಕೃಷ್ಣಪ್ಪ, ನಾಗಮಂಗಲ ತಮ್ಮಣ್ಣ, ರಮಣರೆಡ್ಡಿ, ಅಶ್ವಥ್ ನಾರಾಯಣ ಗೌಡ. ಎನ್. ಎಂ. ಅಜಿತ್ ಕುಮಾರ್, ಹೊಂಬೆಗೌಡ, ಎನ್.ಕೆ. ದೇವರಾಜ್, ಬಸವಾಪಟ್ಟಣ ನಾಗೇಂದ್ರ, ತಾದೂರು ಮೋಹನ್, ರಮೇಶ್, ಕೃಷ್ಣಮೂರ್ತಿ, ನಂಜುಂಡಪ್ಪ, ನಾರಾಯಣಸ್ವಾಮಿ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version