Home News ರೇಷನ್ ಪಡೆಯಲು E-KYCಯನ್ನು ತಪ್ಪದೆ ಮಾಡಿಸಬೇಕು

ರೇಷನ್ ಪಡೆಯಲು E-KYCಯನ್ನು ತಪ್ಪದೆ ಮಾಡಿಸಬೇಕು

0
Ration Card E-kyc

ಜಿಲ್ಲೆಯಲ್ಲಿ ಪಡಿತರ ಚೀಟಿದಾರರ ಇ-ಕೆವೈಸಿಯನ್ನು ತಪ್ಪದೆ ಮಾಡಿಸಬೇಕು, ಶೇ 90 ರಷ್ಟು ಗುರಿಯನ್ನು ಮುಟ್ಟುವ ಪ್ರಯತ್ನವನ್ನು ಎಲ್ಲ ಪಡಿತರ ನ್ಯಾಯ ಬೆಲೆ ಅಂಗಡಿಗಳ ಮಾಲೀಕರು ಮಾಡಲೇಬೇಕೆಂದು ಆಹಾರ ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸವಿತ ತಿಳಿಸಿದರು.

ತಾಲ್ಲೂಕಿನ ಚಿಂತಾಮಣಿ ಮಾರ್ಗದ ಬೂದಾಳ ಬಳಿ ಇರುವ ಮಲ್ಲಿಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿಡ್ಲಘಟ್ಟ ತಾಲ್ಲೂಕು ಸರ್ಕಾರಿ ಪಡಿತರ ವಿತರಕರ ಸಮಾವೇಶ, ಕ್ಯಾಲೆಂಡರ್ ಬಿಡುಗಡೆ, ಗುರ್ತಿನ ಚೀಟಿ ವಿತರಣೆ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ಇ-ಕೆವೈಸಿ ಆಗದ ಪಡಿತರ ಚೀಟಿಗಳನ್ನು ರದ್ದು ಮಾಡುವ ಚಿಂತನೆಯನ್ನು ಸರಕಾರ ನಡೆಸಿದೆ, ಹಾಗಾಗಿ ಇ-ಕೆವೈಸಿಯು ಮುಖ್ಯವಾಗಲಿದ್ದು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಜನವರಿ 10 ರವರೆಗೂ ಅವಕಾಶ ನೀಡಿತ್ತಾದರೂ ಇನ್ನೂ ಅಹ ಅವಕಾಶ ಇದೆ ಎಂದರು.

ಪಡಿತರದಾರರು ಸಕಾಲಕ್ಕೆ ಸೂಕ್ತ ದಾಖಲೆಗಳನ್ನು ನೀಡಿ ಹೆಬ್ಬಟ್ಟನ್ನು ನೀಡದೆ ಇದ್ದಲ್ಲಿ ಇ ಕೆವೈಸಿ ಮಾಡಿಸದಿದ್ದಲ್ಲಿ ಅಂತಹವರಿಗೆ ಪಡಿತರ ಬೇಕಿಲ್ಲ ಇಲ್ಲವೇ ಅವರು ಮೃತಪಟ್ಟಿರಬಹುದು, ವಲಸೆ ಹೋಗಿರಬಹುದು ಎಂದು ನಿರ್ಧರಿಸಲಾಗುತ್ತದೆ.

ಈ ನಿಟ್ಟಿನಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಪ್ರಾಮಾಣಿಕವಾಗಿ ಇ ಕೆವೈಸಿಯನ್ನು ಮಾಡಿಸಲು ಮನವಿ ಮಾಡಿದರು.

ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಬಾಕಿ ಇರುವ ಕಮೀಷನ್ ಹಣವನ್ನು ಈ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡಲು ಸರಕಾರ ಒಪ್ಪಿದ್ದು ಈ ಬಗ್ಗೆ ರಾಜ್ಯ ಮಟ್ಟದ ಅಧಿಕಾರಿಗಳ ಬಳಿ ಸಂಘದ ಪದಾಧಿಕಾರಿಗಳ ನಿಯೋಗದೊಂದಿಗೆ ಮಾತನಾಡಿದ್ದೇನೆ ಎಂದರು.

ಸಂಘದ ವಾರ್ಷಿಕ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು. ಸಂಘದ ಎಲ್ಲ ಪದಾಕಾರಿಗಳಿಗೂ ಗುರುತಿನ ಕಾರ್ಡನ್ನು ವಿತರಿಸಲಾಯಿತು.

ಪಡಿತರ ವಿತರಕರ ಸಂಘದ ತಾಲ್ಲೂಕು ಅಧ್ಯಕ್ಷ ಐ.ನಾರಾಯಣಸ್ವಾಮಿ, ಉಪಾಧ್ಯಕ್ಷ ಆನೆಮಡಗು ಸದಾಶಿವರೆಡ್ಡಿ, ಬಿ.ಕೆ.ವೇಣು, ಸೊಣ್ಣೇನಹಳ್ಳಿ ಮುನಿರಾಜು, ಆಂಜನೇಯರೆಡ್ಡಿ, ಶಿವಾನಂದ, ಆಹಾರ ಶಿರಸ್ತೇದಾರ್ ಧನಲಕ್ಷ್ಮಿ, ಫುಡ್ ಮನೋಹರ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version