Home News ಕಿಡಿಗೇಡಿಗಳಿಟ್ಟ ಬೆಂಕಿಗೆ ಮಾವಿನ ಮರಗಳ ನಾಶ

ಕಿಡಿಗೇಡಿಗಳಿಟ್ಟ ಬೆಂಕಿಗೆ ಮಾವಿನ ಮರಗಳ ನಾಶ

0
Sidlaghatta S Venkatapura Mango Trees Burnt

ಕಿಡಿಗೇಡಿಗಳು ಇಟ್ಟ ಬೆಂಕಿಯು ಬೆಳೆದು ನಿಂತು ಫಸಲು ನೀಡುತ್ತಿದ್ದ ಮಾವಿನ ಮರಗಳನ್ನು ಬಲಿತೆಗೆದುಕೊಂಡಿದೆ.

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲಿಸ್ ಠಾಣೆ ವ್ಯಾಪ್ತಿಯ ಇ-ತಿಮ್ಮಸಂದ್ರ ಗ್ರಾಮ ಪಂಚಾಯಿತಿಯ ಎಸ್.ವೆಂಕಟಾಪುರದ ಮುನಿನರಸಿಂಹಯ್ಯ ಹಾಗೂ ಗೋಪಾಲ್ ಎನ್ನುವವರಿಗೆ ಸೇರಿದ ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿವೆ.

ಸುಮಾರು 12 ಎಕರೆ ಪ್ರದೇಶದಲ್ಲಿ ಮಾವಿನ ಮರಗಳನ್ನು ಹಾಕಿದ್ದು ಫಸಲು ಬಿಡುತ್ತಿವೆ. ಯಾರೋ ಕಿಡಿಗೇಡಿಗಳು ಜಮೀನಿನಲ್ಲಿನ  ಒಣಗಿದ ಹುಲ್ಲಿಗೆ ಬೆಂಕಿಯಿಟ್ಟಿದ್ದು ಆ ಬೆಂಕಿಯು ಮಾವಿನ ಮರಗಳಿಗೆ ಆವರಿಸಿದೆ. ಸುಮಾರು 15ಕ್ಕೂ ಹೆಚ್ಚುಮರಗಳು ಸುಟ್ಟಿವೆ. ದಿಬ್ಬೂರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version