ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿದ ಶಾಲಾ ಬಸ್: 30 ಮಕ್ಕಳು ಸುರಕ್ಷಿತ

- Advertisement -
- Advertisement -

Sidlaghatta : ತಾಲ್ಲೂಕಿನ ಅಮ್ಮಗಾರಹಳ್ಳಿ ಗೇಟ್ ಬಳಿ ಶಾಲಾ ಬಸ್ ಅಪಘಾತಕ್ಕೀಡಾಗುವ ಹಂತದಲ್ಲಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಬಸ್‌ನಲ್ಲಿದ್ದ ಸುಮಾರು 30 ಮಕ್ಕಳು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿದ್ದಾರೆ.

ಹನುಮಂತಪುರ ಗೇಟ್ ಸಮೀಪದ ಬಿಜಿಎಸ್ ಪಬ್ಲಿಕ್ ಶಾಲೆಗೆ ತೆರಳುತ್ತಿದ್ದ ಬಸ್, ದಿಬ್ಬೂರಹಳ್ಳಿಯಿಂದ ಮಕ್ಕಳನ್ನು ಹತ್ತಿಸಿಕೊಂಡು ಅಮ್ಮಗಾರಹಳ್ಳಿ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಮ್ಮಗಾರಹಳ್ಳಿ ಗೇಟ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಅನ್ನು ಹಿಂದಿಕ್ಕಲು (ಓವರ್ ಟೇಕ್) ಚಾಲಕ ಮುಂದಾದ ವೇಳೆ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕೃಷಿ ಹೊಂಡದ ಬದುವಿನತ್ತ ವಾಲಿದೆ.

ಮಳೆ ಸುರಿದಿದ್ದರಿಂದ ರಸ್ತೆ ಹಾಗೂ ಸುತ್ತಮುತ್ತಲಿನ ನೆಲ ತೇವವಾಗಿತ್ತು ಎನ್ನಲಾಗಿದೆ. ಬಸ್ ರಸ್ತೆ ಬದಿಯಲ್ಲಿದ್ದ ಮರಗಳಿಗೆ ಡಿಕ್ಕಿ ಹೊಡೆದು ನಿಂತಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಬಸ್‌ನಲ್ಲಿದ್ದ ಎಲ್ಲ ಮಕ್ಕಳು ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪೋಷಕರಿಂದ ಆಕ್ರೋಶ

ಚಾಲಕನ ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಘಟನೆಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಶಾಲಾ ವಾಹನಗಳ ಸುರಕ್ಷತಾ ನಿಯಮಗಳ ಪಾಲನೆಗೆ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

In English: A school bus carrying around 30 children narrowly escaped a major accident near Ammagarahalli Gate in Sidlaghatta taluk, with all children safe and uninjured. The bus, ferrying students from Dibburahalli to BGS Public School near Hanumanthapura Gate, lost control when the driver attempted to overtake a KSRTC bus near Ammagarahalli Gate and veered toward the edge of a farm pond, on a road made slippery by rain. A bigger disaster was averted when the bus came to a stop after hitting roadside trees. Parents have blamed the driver’s overspeeding and reckless driving, demanding action against him and stricter enforcement of school vehicle safety rules.

ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾಗಿದ್ದ ಇಂತಹುದೇ ಮತ್ತೊಂದು ರಸ್ತೆ ಅಪಘಾತದ ಬಗ್ಗೆ ಎನ್‌ಎಚ್-234ರಲ್ಲಿ ಕಾರು-ಬೈಕ್ ಡಿಕ್ಕಿ: ದ್ವಿಚಕ್ರ ವಾಹನ ಸವಾರ ಸಾವು ಎಂಬ ವರದಿಯನ್ನೂ ಓದಿ.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -