Home News ತಮಿಳುನಾಡಿನ ವಿಶೇಷ ವಿಭಾಗದ ಮುಖ್ಯಸ್ಥೆಯಾದ ಶಿಡ್ಲಘಟ್ಟದ ವಿದ್ಯಾರ್ಥಿನಿ

ತಮಿಳುನಾಡಿನ ವಿಶೇಷ ವಿಭಾಗದ ಮುಖ್ಯಸ್ಥೆಯಾದ ಶಿಡ್ಲಘಟ್ಟದ ವಿದ್ಯಾರ್ಥಿನಿ

0
Shilpa Prabhakar Satish Tirunelveli District collector M K Stalin Special Officer Tamilnadu Sidlaghatta Sri Saraswati Convent Alumni

ಶಿಡ್ಲಘಟ್ಟ ನಗರದ ಶ್ರೀಸರಸ್ವತಿ ಕಾನ್ವೆಂಟ್ ನ ಹಳೆಯ ವಿದ್ಯಾರ್ಥಿನಿ ಶಿಲ್ಪಾ ಪ್ರಭಾಕರ್ ಸತೀಶ್ ಅವರನ್ನು ತಮಿಳುನಾಡಿನ ಸರ್ಕಾರ ವಿಶೇಷ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಪ್ರಭಾಕರ್ ಅವರ ಮಗಳಾದ ಐ.ಎ.ಎಸ್ ಅಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್ ಅವರನ್ನು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಚುನಾವಣಾ ಪ್ರವಾಸದ ಸಂದರ್ಭದಲ್ಲಿ ಜನರು ಮಂಡಿಸಿದ 100 ದಿನಗಳ ಕುಂದುಕೊರತೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವ ವಿಶೇಷ ವಿಭಾಗದ ಮುಖ್ಯಸ್ಥರಾಗಿ ಪ್ರಸ್ತುತ ಡಿಎಂಕೆ ಸರ್ಕಾರ ನೇಮಿಸಿದೆ.

ವಿಧಾನಸಭಾ ಚುನಾವಣೆಗೆ ಮುನ್ನ, ಡಿಎಂಕೆ ನಾಯಕ ತನ್ನ ‘ಉಂಗಲ್ ತೊಗುಟಿಯಿಲ್ ಸ್ಟಾಲಿನ್’ (ನಿಮ್ಮ ಕ್ಷೇತ್ರದಲ್ಲಿ ಸ್ಟಾಲಿನ್) ಕಾರ್ಯಕ್ರಮದ ಮೂಲಕ ಜನರಿಂದ ಅರ್ಜಿಗಳನ್ನು ಸ್ವೀಕರಿಸಿದ್ದರು. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 100 ದಿನಗಳಲ್ಲಿ ಈ ಅರ್ಜಿಗಳನ್ನು ಪರಿಹರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದರು.

1981 ಆಗಸ್ಟ್ 31 ಜನಿಸಿದ ಶಿಲ್ಪಾ ಅವರ ತಂದೆ ಪ್ರಭಾಕರ್ ಶಿಡ್ಲಘಟ್ಟದಲ್ಲಿ ಸರ್ಕಲ್ ಇನ್ಸ್ ಪೆಕ್ಟರಾಗಿದ್ದುದ್ದರಿಂದ ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಗರದ ಶ್ರೀಸರಸ್ವತಿ ಕಾನ್ವೆಂಟ್ ನಲ್ಲಿ ಪೂರೈಸಿದ್ದರು. ನಂತರ ಪ್ರೌಢ ಶಿಕ್ಷಣವನ್ನು ಮತ್ತು ಪದವಿಪೂರ್ವ ಶಿಕ್ಷಣವನ್ನು ನ್ಯಾಷನಲ್ ಕಾಲೇಜ್ನಲ್ಲಿ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಲ್.ಎಲ್.ಬಿ ಪದವಿ ಪಡೆದರು. ಇದಾದ ಬಳಿಕ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 46ನೇ ಸ್ಥಾನದೊಂದಿಗೆ ಉತ್ತೀರ್ಣರಾದರು. 2018ರಲ್ಲಿ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು.

ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ತಮಿಳುನಾಡಿನ ಅಂಗನವಾಡಿ ಕೇಂದ್ರಗಳನ್ನು ದೇಶದಲ್ಲಿಯೇ ಮಾದರಿ ಅಂಗನವಾಡಿ ಮಾಡಲು ನಿರ್ಧರಿಸಿ ತಮ್ಮ ಮೂರು ವರ್ಷದ ಹೆಣ್ಣುಮಗುವನ್ನು ಅಂಗನವಾಡಿಗೆ ಸೇರಿಸುವ ಮೂಲಕ ಸುದ್ದಿಯಾಗಿದ್ದರು.

 2013 ರ ಜನವರಿಯಲ್ಲಿ ಶ್ರೀಸರಸ್ವತಿ ಕಾನ್ವೆಂಟ್ ನ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಲ್ಪಾ ಪ್ರಭಾಕರ್ ಸತೀಶ್ ಅವರನ್ನು ಸನ್ಮಾನಿಸಲಾಗಿತ್ತು. ಆ ಸಂದರ್ಭದಲ್ಲಿ ಅವರು ತಮ್ಮನ್ನು ಬಾಲ್ಯದಲ್ಲಿ ರೂಪಿಸಿದ ಶಿಕ್ಷಕರನ್ನು ನೆನೆದು, ತಾನು ಬಾಲ್ಯವನ್ನು ಕಳೆದ ಊರಿನಲ್ಲಿ, ವ್ಯಕ್ತಿತ್ವವನ್ನು ರೂಪಿಸಿದ ಶಿಕ್ಷಕರ ಕೈಲೇ ಗೌರವಿಸಲ್ಪಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version