Sidlaghatta : ಶಿಡ್ಲಘಟ್ಟದ BGS PU ಕಾಲೇಜಿನಲ್ಲಿ ಆಯೋಜಿಸಿದ್ದ ಶಿಡ್ಲಘಟ್ಟ 500 ಎಂಬ ಕೈಪಿಡಿಯನ್ನು ಬಿಡುಗಡೆ ಮಾಡಿ ಶ್ರೀ ಶ್ರೀ ಮಂಗಳನಾಥ ಸ್ವಾಮಿಯವರು ಇಂದಿನ ಯುವಜನತೆ ಪ್ರಾಚೀನ ಇತಿಹಾಸವನ್ನು ತಿಳಿದು ಮುಂದಿನ ಪೀಳಿಗೆಗೆ ಪಸರಿಸುವ ಕೆಲಸ ಮಾಡಬೇಕಿದೆ. ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಪ್ರಾಚೀನ ಇತಿಹಾಸ ಮರೆಯಬಾರದು, ಆಧುನಿಕ ತಂತ್ರಜ್ಞಾನದಿಂದಲೇ ಪ್ರಾಚೀನ ಇತಿಹಾಸ ಸೃಷ್ಟಿಸಿ ಪಸರಿಸುವ ಕಾರ್ಯವಾಗಬೇಕು ಇದರ ಮೂಲಕ ನಮ್ಮ ಪುರಾತನ ಪರಂಪರೆ ಉಳಿಯಬೇಕು ಹಾಗೂ ಸ್ವಾತಂತ್ರ್ಯ ಹೋರಾಟದ ಬಲಿದಾನಗಳು ನಮಗೆ ಸ್ಪೂರ್ತಿಯಾಗಬೇಕು ಇತಿಹಾಸ ಸಂರಕ್ಷಣೆ, ಪ್ರಸರಣಕ್ಕೆ ನಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದರು.
ಶಾಸಕ ಬಿ.ಎನ್ ರವಿಕುಮಾರ್ ಅವರು ಶಿಡ್ಲಘಟ್ಟ 500ವರ್ಷದ ಶುಭಾಶಯ ಕೋರಿ, ನಮ್ಮ ಶಿಡ್ಲಘಟ್ಟ ತಾಲ್ಲೂಕಿನ 500 ವರ್ಷದ ಇತಿಹಾಸ ಇಂದಿನ ಯುವಜನರಿಗೆ, ಶಾಲಾಕಾಲೇಜು ಮಕ್ಕಳಲ್ಲಿ ಇತಿಹಾಸ ಪ್ರಜ್ಞೆ ಬೆಳಸಬೇಕು, ಹಾಗೂ ತಾಲ್ಲೂಕಿನ ಇತಿಹಾಸ ಪ್ರತಿಯೊಂದು ಕಾಲೇಜುಗಳಲ್ಲಿ ತಿಳಿಸುವ ಕಾರ್ಯವಾಗಬೇಕು ಎಂದರು.
ಶಿಡ್ಲಘಟ್ಟದ ಇತಿಹಾಸ ಎಷ್ಟು ಹಳೆಯದು?
ಶಾಸನ ತಜ್ಞರಾದ ಶ್ರೀ ಕೆ. ಧನಪಾಲ್ ಅವರು ಶಿಡ್ಲಘಟ್ಟ 500 ಎಂಬುದು 2026ಕ್ಕೆ ಶಿಡ್ಲಘಟ್ಟ ಊರು ಸ್ಥಾಪನೆಯಾಗಿ 500ವರ್ಷವಾಗಿದೆ ಇದನ್ನು ಸಿಡಿಲೇಗೌಡರ ನೆನಪಿಗೆ ಶಿಡ್ಲಘಟ್ಟ ಎಂದು ಕರೆಯಲಾಗಿದೆ, ಶಿಡ್ಲಘಟ್ಟ ತಾಲ್ಲೂಕು ಸುಮಾರು ಮೂರು ಸಾವಿರ ವರ್ಷಗಳಿಂದಲೂ ಜನವಸತಿ ಹೊಂದಿದ ಪ್ರದೇಶ ಎಂಬುದಕ್ಕೆ ಇಲ್ಲಿ ಬೃಹತ್ ಶಿಲಾಯುಗದ ಅವಶೇಷಗಳು ಸಿಕ್ಕಿವೆ, ಇತಿಹಾಸ ಕಾಲದಲ್ಲಿ ಗಂಗರ 6ನೇ ಶತಮಾನದ ತಾಮ್ರಪತ್ರ ಸಿಕ್ಕಿದೆ ನಂತರ ನೊಳಂಬರು, ಚೋಳರು, ಹೊಯ್ಸಳರು ಆಳ್ವಿಕೆ ಮಾಡಿ ಇಲ್ಲಿ ದೇವಾಲಯಗಳು, ಕೆರೆಕಟ್ಟೆಗಳನ್ನು ಕಟ್ಟಿ ಅಭಿವೃದ್ಧಿ ಮಾಡಿದ್ದಾರೆ ಇವುಗಳಿಂದಲೇ ಅಂದಿನ ಜನರ ಜೀವನ, ಸಾಮಾಜಿಕ ಕಾರ್ಯಗಳು, ಧಾರ್ಮಿಕ ಪರಂಪರೆ ಮುಂತಾದ ವಿಷಯವನ್ನು ತಿಳಿಯಬಹುದು. ಹಿಂದಿನವರು ಬಿಟ್ಟುಹೋದ ಪುರಾತನ ಪರಂಪರೆ ಇಂದು ಮುಂದೆ ಎಲ್ಲರೂ ನೋಡುವಂತಾಗಬೇಕು ಇದರಿಂದ ಮಾತ್ರ ನಮ್ಮ ಅಸ್ತಿತ್ವ ಸಾಧ್ಯ ಎಂದರು.
ತಾಲ್ಲೂಕಿನ ಇತಿಹಾಸ ಆಸಕ್ತರಾದ ಅಪ್ಪೆಗೌಡನಹಳ್ಳಿ ತ್ಯಾಗರಾಜ್ ಅವರು ನಮ್ಮ ಶಿಡ್ಲಘಟ್ಟ ಸ್ಥಾಪನೆಯಾಗಿ ಐನೂರು ವರ್ಷವಾಗಿದೆ ಇದರ ಆರಂಭ ಇಂದಿನ ಕಾರ್ಯಕ್ರಮ ಇದು ಇಡೀ ವರ್ಷ ಕಾರ್ಯಕ್ರಮ ಮಾಡಿ ನಮ್ಮ ಶಿಡ್ಲಘಟ್ಟ ಇತಿಹಾಸ ಮನೆಮನೆಗೂ ತಲುಪಿಸುವ ಕಾರ್ಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಷಫಿ ಅಹಮದ್ ಅವರು, ಪ್ರಾಂಶುಪಾಲರಾದ ಮಹದೇವ ಕೆ, ಇತಿಹಾಸ ಅಕಾಡೆಮಿ ಸದಸ್ಯರಾದ ಶಶಿಕುಮಾರ ನಾಯ್ಕ, ಮೋಹನ್ ಕುಮಾರ್, ಸಾದಲಿ ನಾಗೇಶ್, ಭಕ್ತರಹಳ್ಳಿ ನಾಗೇಶ್, ಕೇಶವಮೂರ್ತಿ ಭಾರ್ಗವ, ಬಾಲುಚಂದ್ರಶೇಖರ್, ಅಶ್ವಿನಿ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳಿದ್ದರು
In English: Sri Sri Mangalanatha Swamiji released the handbook “Sidlaghatta 500” at BGS PU College, Sidlaghatta, marking 500 years since the town’s founding in 2026, and urged young people to learn ancient history and pass it on. MLA B.N. Ravikumar said the taluk’s history should be taught in every college. Epigraphist K. Dhanapal said the taluk has been inhabited for about 3,000 years, citing megalithic remains and a 6th-century Ganga copper plate. The event was organised with the Karnataka Itihasa Academy; local history enthusiast Appegowdanahalli Tyagaraj called for a year-long programme.








