Home News ಡಿಸೆಂಬರ್ 31ರಂದು ಶಿಡ್ಲಘಟ್ಟ ಬಂದ್ ಗೆ ಕನ್ನಡ ಸಂಘಟನೆಗಳ ನಿರ್ಧಾರ

ಡಿಸೆಂಬರ್ 31ರಂದು ಶಿಡ್ಲಘಟ್ಟ ಬಂದ್ ಗೆ ಕನ್ನಡ ಸಂಘಟನೆಗಳ ನಿರ್ಧಾರ

0
Sidlaghatta Bandh Protesting MES Belagavi Karnataka Flag Burning and Sangolli Rayanna Defacing

ಕರ್ನಾಟಕದಲ್ಲಿ MES ಸಂಘಟನೆಯ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಬಂದ್ ಗೆ (Sidlaghatta Bandh) ಶಿಡ್ಲಘಟ್ಟ ತಾಲ್ಲೂಕಿನ ಹಲವು ಸಂಘಟನೆಗಳು ಬೆಂಬಲ ನೀಡಿದ್ದು, ಶಿಡ್ಲಘಟ್ಟ ನಗರದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶನಿವಾರ ಡಿಸೆಂಬರ್ 31 ರ ಬಂದ್ ಕುರಿತಂತೆ ವಿವಿಧ ಸಂಘಟನೆಗಳು ನಡೆಸಿದ ಪೂರ್ವಭಾವಿ ಸಭೆಯಲ್ಲಿ ರೈತಪರ, ಕನ್ನಡಪರ ಇತರೆ ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಭಾಗವಹಿಸಿ ಚರ್ಚಿಸಿದರು.

 ಈ ಸಂದರ್ಭದಲ್ಲಿ ಡಾಲ್ಫಿನ್ ಅಶೋಕ್ ಮಾತನಾಡಿ, ಕರ್ನಾಟಕ ವಿರೋಧಿ ಮತ್ತು ಕನ್ನಡ ವಿರೋಧಿ ಚಟುವಟಿಕೆಗಳಲ್ಲಿ ಪದೇ ಪದೇ ತೊಡಗಿಸಿಕೊಂಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಯನ್ನು ಕರ್ನಾಟಕದಲ್ಲಿ ಸಂಪೂರ್ಣ ನಿಷೇಧಿಸಬೇಕು. ಕನ್ನಡ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ಜಲ, ನಮ್ಮ ಪರಿಸರ, ನಮ್ಮ ಭಾಷೆ ಪರಿಶುದ್ಧ ಮಾಡಿದ್ರೆ ಮುಂದಿನ ಪೀಳಿಗೆಗೆ ನಾವು ಏನನ್ನು ಕೊಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ನಾಡು, ನಮ್ಮ ಭಾಷೆ, ನಮ್ಮ ಜಲ ಅಂತ ಬಂದಾಗ ಪ್ರತಿಯೊಬ್ಬರು ಒಗ್ಗೂಡಿ ದಿಟ್ಟತನದಿಂದ ಹೋರಾಡಬೇಕು ಎಂದರು.

 ರೈತ ಸಂಘದ ಉಪಾಧ್ಯಕ್ಷ ವೀರಾಪುರ ಮುನಿ ಆಂಜಿನಪ್ಪ ಮಾತನಾಡಿ, ಕನ್ನಡ ಧ್ವಜವನ್ನು ಸುಟ್ಟರೆ ನಮ್ಮನ್ನೇ ಸುಟ್ಟಂತೆ. ಅದರ ವಿರುದ್ಧ ನಾವು ಧ್ವನಿ ಎತ್ತಲೇ ಬೇಕು, ಕನ್ನಡ ವಿಚಾರ ಅಂತ ಬಂದಾಗ ರೈತರಾಗಲಿ, ಯಾವುದೇ ಸಂಘಟನೆಯಾಗಲಿ ಕನ್ನಡಕ್ಕೆ ಹೋರಾಡಬೇಕು. ಅನ್ನ ತಿನ್ನೋರಿಗೆ ಅಷ್ಟೊಂದು ರೋಷ ಇರಬೇಕಾದರೆ ಅನ್ನ ಕೊಡುವ ರೈತನಿಗೆ ಅದರ ದುಪ್ಪಟ್ಟು ರೋಷ ಇರುತ್ತೆ.  ಪ್ರತಿಯೊಬ್ಬರು ಕನ್ನಡ ಉಳಿಸಲು ಪ್ರತಿಯೊಬ್ಬರು ಸಜ್ಜಾಗಬೇಕು ಎಂದರು

 ಬೀದಿಬದಿ ವ್ಯಾಪಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಇಲಿಯಾಜ್, ಟಿಪ್ಪು ಮೌಲಾ, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ತಾಲ್ಲೂಕು ಅಧ್ಯಕ್ಷ ಸುನಿಲ್, ದೇವರಾಜ್, ಕ್ರೆಸೆಂಟ್ ಶಾಲೆಯ ತಮೀಮ್ ಅನ್ಸಾರಿ ಹಾಜರಿದ್ದರು

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version