Home News ನಂದಿಧ್ವಜ ಸಮೇತ ಬಸವಣ್ಣನ ಮುತ್ತಿನ ಪಲ್ಲಕ್ಕಿ ಉತ್ಸವ

ನಂದಿಧ್ವಜ ಸಮೇತ ಬಸವಣ್ಣನ ಮುತ್ತಿನ ಪಲ್ಲಕ್ಕಿ ಉತ್ಸವ

0
Sidlaghatta basava jayanti celebration

ಶಿಡ್ಲಘಟ್ಟ ನಗರದಲ್ಲಿ ಬುಧವಾರ ನಡೆದ ಬಸವ ಜಯಂತಿ ಸಮಾರಂಭದಲ್ಲಿ ವಿದ್ಯುತ್ ದೀಪಾಲಂಕೃತ ಮುತ್ತಿನ ಪಲ್ಲಕ್ಕಿಯಲ್ಲಿದ್ದ ಉತ್ಸವ ಮೂರ್ತಿಯು ನಂದಿಧ್ವಜ ಸಮೇತ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮನೆಗಳ ಮುಂದೆ ಉತ್ಸವ ಮೂರ್ತಿಗೆ ಪೂಜೆಯನ್ನು ನೆರವೇರಿಸಿದರು. ವಿವಿಧ ಜನಪದ ಕಲೆಗಳು ಜನರ ಮನ ಸೆಳೆಯಿತು.

ನಗರದ ಅರಳೇಪೇಟೆ ಬಸವೇಶ್ವರ ದೇವಾಲಯದ ಆವರಣದಲ್ಲಿ ಬಸವ ಜಯಂತಿ ಪ್ರಯುಕ್ತ ವೀರಗಾಸೆ, ಕರಡಿ ಮಜಲು, ನಾಸಿಕ್ ಡೋಲ್, ಚಿಟ್ಟಿಮೇಳ ಮತ್ತು ನಾದಸ್ವರ ಕಲಾವಿದರು ಕಲೆಯ ಸುಧೆಯನ್ನೇ ಹರಿಸಿದರು.

“ದಕ್ಷಬ್ರಹ್ಮನು ತನ್ನ ಗಂಡನಾದ ಶಿವನಿಗೆ ಯಜ್ಞದಲ್ಲಿ ಆವಿರ್ಭಾಗವನ್ನು ನೀಡಲಿಲ್ಲವೆಂದು ದಾಕ್ಷಾಯಿಣಿ ಯಜ್ಞಕುಂಡದಲ್ಲಿ ಬಿದ್ದು ದೇಹತ್ಯಾಗ ಮಾಡುತ್ತಾಳೆ. ಶಿವನು ಪ್ರಳಯಕಾಲದ ಭೈರವನಾಗಿ ಉಗ್ರವಾಗಿ ತಾಂಡವನೃತ್ಯ ಮಾಡುತ್ತಾ ಹಣೆ ಬೆವರು ತೆಗೆದು ನೆಲಕ್ಕೆ ಅಪ್ಪಳಿಸಿದ. ಆಗ ಜನಿಸಿದವನೇ ಗಂಡುಗಲಿ ವೀರಭದ್ರ. ದಕ್ಷಬ್ರಹ್ಮನ ಯಾಗ ಶಾಲೆಗೆ ಹೋಗಿ ಅವನ ತಲೆಯನ್ನು ವೀರಭದ್ರ ಚಂಡಾಡುತ್ತಾನೆ. ಈ ಸಂದರ್ಭದಲ್ಲಿ ವೀರಭದ್ರನು ತೋರಿದ ಪ್ರತಾಪವನ್ನು ಕಲೆಯಲ್ಲಿ ಕಟ್ಟಿಕೊಡುವ ಪ್ರಕಾರಕ್ಕೆ ವೀರಗಾಸೆ ಎನ್ನುತ್ತಾರೆ’ ಎಂದು ಜನಪದ ಕಲಾತಂಡದ ಹಿರಿಯರಾದ ಜಯಣ್ಣ ವಿವರಿಸಿದರು.

“ಈ ಕಲಾವಿದರನ್ನು ಲಿಂಗದವೀರರು ಎಂದೂ ಕರೆಯುತ್ತಾರೆ. ಊರಿಗೆ ಕರೆಸಿ ವೀರಭದ್ರನ ಬಗ್ಗೆ ಕಥೆ ಹೇಳಿಸುವುದರಿಂದ ಊರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ” ಎಂದು ಅವರು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version