Home News ಶಿಡ್ಲಘಟ್ಟಕ್ಕೂ ವ್ಯಾಪಿಸಿದ ವಕ್ಫ್ ಆಸ್ತಿ ಪ್ರಕರಣ

ಶಿಡ್ಲಘಟ್ಟಕ್ಕೂ ವ್ಯಾಪಿಸಿದ ವಕ್ಫ್ ಆಸ್ತಿ ಪ್ರಕರಣ

0

Belluti, Sidlaghatta : ರಾಜ್ಯಾದ್ಯಂತ ರೈತ ಸಮುದಾಯದಲ್ಲಿ ತಲ್ಲಣ ಮೂಡಿಸಿರುವ ವಕ್ಫ್ ಆಸ್ತಿ ವಿಚಾರವು ಶಿಡ್ಲಘಟ್ಟಕ್ಕೂ ವ್ಯಾಪಿಸಿದೆ. ತಾಲ್ಲೂಕಿನ ಬೆಳ್ಳೂಟಿ ಗೇಟ್‌ ನಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಶ್ರೀಗುಟ್ಟಾಂಜನೇಯಸ್ವಾಮಿ ದೇವಾಲಯದ ಜಾಗದ ಪಹಣಿಯಲ್ಲೂ ಖಬರಸ್ಥಾನ್ ವಕ್ಫ್ ಸ್ವತ್ತು ಎಂದು ನಮೂದು ಆಗಿದೆ.

ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಬೆಳ್ಳೂಟಿ ಗೇಟ್‌ನಲ್ಲಿನ ಸರ್ವೆ ನಂಬರ್ 6 ರ ಜಮೀನಿನಲ್ಲಿ ಶ್ರೀ ಗುಟ್ಟಾಂಜನೇಯಸ್ವಾಮಿ ದೇವಾಲಯವಿದ್ದು ಈ ಪೂರಾ ಜಮೀನಿನ ಪಹಣಿಯಲ್ಲಿ ಖಬರಸ್ಥಾನ್ ವಕ್ಫ್ ಸ್ವತ್ತು ಎಂದು ನಮೂದಾಗಿದೆ.

Sidlaghatta Belluti Sri Guttanjaneyaswamy temple Waqf Property

ಗೆಜೆಟ್ ನೋಟಿಫಿಕೇಷನ್ ಆಗಿರುವಂತೆ ಶ್ರೀಗುಟ್ಟಾಂಜನೇಯಸ್ವಾಮಿ ದೇವಾಲಯಕ್ಕೆ 1.08 ಎಕರೆ ಜಮೀನು ಸೇರಬೇಕಿದ್ದು ಸರ್ವೆ ನಂಬರ್ 6ರ 1.30 ಎಕರೆ ಪೈಕಿ 1.08 ಎಕರೆ ಜಮೀನಿನ ಪಹಣಿಯಲ್ಲಿ ಶ್ರೀಗುಟ್ಟಾಂಜನೇಯಸ್ವಾಮಿ ದೇವಾಲಯ ಎಂದು ನಮೂದು ಮಾಡಬೇಕೆಂದು ಬೆಳ್ಳೂಟಿ ಗ್ರಾಮಸ್ಥರು ಕಳೆದ ಅಕ್ಟೋಬರ್ ತಿಂಗಳಲ್ಲಿ ತಹಶೀಲ್ದಾರ್‌ ಗೆ ಅರ್ಜಿ ಸಲ್ಲಿಸಿದ್ದಾರೆ.

ಗ್ರಾಮಸ್ಥರ ಮನವಿ ಅರ್ಜಿಯ ಆಧಾರದಲ್ಲಿ ಶಿಡ್ಲಘಟ್ಟದ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಶ್ರೀಗುಟ್ಟಾಂಜನೇಯಸ್ವಾಮಿ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು ಸಿ ದರ್ಜೆಯ ದೇವಾಲಯವಾಗಿದೆ. ನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು ಇಲ್ಲಿ ಒಂದು ಕಲ್ಯಾಣ ಮಂಟಪವೂ ಇದೆ.

ಸರ್ವೆ ನಂಬರ್ 6 ರಲ್ಲಿನ 1.30 ಎಕರೆ ಜಮೀನು ಭೂ ಮಾಪನ ಇಲಾಖೆಯ ದಾಖಲೆಗಳಲ್ಲಿನ ಮೂಲ ಟಿಪ್ಪಣಿ ಪುಸ್ತಕದಲ್ಲಿರುವಂತೆ ಬೀಳು ಭೂಮಿಯಾಗಿದ್ದು ಗ್ರಾಮಸ್ಥರ ಕೋರಿಕೆಯಂತೆ ಸಾರ್ವಜನಿಕರ ಹಿತದೃಷ್ಟಿಯಿಂದ 1.08 ಎಕರೆ ಜಮೀನಿನಲ್ಲಿ ಶ್ರೀಗುಟ್ಟಾಂಜನೇಯಸ್ವಾಮಿ ದೇವಾಲಯ ಎಂದು ಪಹಣಿಯಲ್ಲಿ ದಾಖಲಿಸುವಂತೆ ಮನವಿ ಮಾಡಿ ಅಕ್ಟೋಬರ್ 10 ರಂದು ಪತ್ರ ಬರೆದಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version