Bhaktarahalli, Sidlaghatta : ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ವಿಜಯಪುರ ವತಿಯಿಂದ ಭಕ್ತರಹಳ್ಳಿಯ ಬಿಎಂಬಿ ಪ್ರೌಢಶಾಲೆಯಲ್ಲಿ ಬುಧವಾರ “ಅರಣ್ಯ, ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣೆ” ಎಂಬ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ನಿವೃತ್ತ ಡಿ.ಎಫ್.ಓ ಸೀನಿಯರ್ ಚಂದ್ರಶೇಖರ್ ಆಚಾರ್, ತರಬೇತಿ ನೀಡುತ್ತಾ ಮಾತನಾಡಿ, ವಿದ್ಯಾರ್ಥಿಗಳು ಪರಿಸರವನ್ನ ಸಂರಕ್ಷಿಸಬೇಕು, ವನ್ಯಜೀವಿಗಳನ್ನ ರಕ್ಷಿಸಬೇಕು, ಇಲ್ಲವಾದಲ್ಲಿ ಪ್ರಕೃತಿ ಅಸಮತೋಲನ ಉಂಟಾಗುತ್ತದೆ. ಇದರಿಂದ ಬಹಳಷ್ಟು ತೊಂದರೆಗಳು ಉಂಟಾಗಿ ಜಾಗತಿಕ ತಾಪಮಾನ ವ್ಯತ್ಯಾಸವಾಗುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಇದನ್ನ ರಕ್ಷಿಸುವ ಹೊಣೆಗಾರಿಕೆಯನ್ನು ಸ್ವೀಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸೀನಿಯರ್ ಚೇಂಬರ್ ನ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಎಂ ಶಿವಕುಮಾರ್ ಮಾತನಾಡಿ, ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ವೃಕ್ಷವು ರಕ್ಷತಿ ರಕ್ಷಿತಃ, ವೃಕ್ಷಗಳನ್ನ ವನ್ಯಜೀವಿಗಳನ್ನ ರಕ್ಷಿಸುವ ಕಾರ್ಯಕ್ಕೆ ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.
ಬಿ ಎಂ ವಿ ಶಾಲೆಯ ಅಧ್ಯಕ್ಷ ಮುನೇಗೌಡ ಮಾತನಾಡಿ, ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದರು.
ಸೀನಿಯರ್ ಛೇಂಬರ್ ವಿಜಯಪುರ ಲೀಜನ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ನಾವು ಮರ, ಗಿಡ, ಪರಿಸರದೊಂದಿಗೆ ಇದರೊಂದಿಗೆ ಜಲಸಂಪನ್ಮೂಲಗಳನ್ನು ಸಹ ಸಂರಕ್ಷಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿ ಎಂ ವಿ ಶಾಲೆಯ ಕಾರ್ಯದರ್ಶಿ ಎಲ್.ಕಾಳಪ್ಪ, ಟ್ರಸ್ಟಿಗಳಾದ ಸಂತೆ ನಾರಾಯಣಸ್ವಾಮಿ, ಬಿ. ವೈ. ಅಶ್ವತ್ಥಪ್ಪ, ಸೀನಿಯರ್ ಚೇಂಬರ್ ನ ಕಾರ್ಯದರ್ಶಿ ಬಿ.ಚಿದಾನಂದ ಮೂರ್ತಿ, ಬೂದಿಗೆರೆ ಲೀಜನ್ ನ ಅಧ್ಯಕ್ಷ ಬಿ.ಎನ್. ವೆಂಕಟಪತಿ, ಶಾಲೆಯ ಮುಖ್ಯಶಿಕ್ಷಕರಾದ ಪಂಚಮೂರ್ತಿ, ವೆಂಕಟಮೂರ್ತಿ, ಶಿಕ್ಷಕರು, ಸುರಕ್ಷತಾ ಕಮಿಟಿಯ ಸದಸ್ಯರಾದ ಬಿ.ಎನ್.ದೇವರಾಜ್, ಪ್ರಶಾಂತ್, ನಂಜೇಗೌಡ ಹಾಜರಿದ್ದರು.