Home News ಭಾರತ್ Scouts ಮತ್ತು Guides ಸಂಸ್ಥೆಯಿಂದ ಯೋಗೋತ್ಸವ ಕಾರ್ಯಕ್ರಮ

ಭಾರತ್ Scouts ಮತ್ತು Guides ಸಂಸ್ಥೆಯಿಂದ ಯೋಗೋತ್ಸವ ಕಾರ್ಯಕ್ರಮ

0
Sidlaghatta Bharat Scouts and Guides Yoga

Sidlaghatta : ಭಾರತ್ Scouts ಮತ್ತು Guides ಶಿಡ್ಲಘಟ್ಟ ಸ್ಥಳೀಯ ಸಂಸ್ಥೆ ಮತ್ತು ತಾಲ್ಲೂಕು ಆಯುಷ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಯೋಗ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜೂನ್ 21ರಂದು ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವ ತಯಾರಿಗಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ತಾಲ್ಲೂಕು ಮಟ್ಟದ ಯೋಗೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಯುಷ್ ವೈದ್ಯ ಡಾ. ಕೆ. ವಿಜಯ್ ಕುಮಾರ್, ಚಿಕ್ಕವಯಸ್ಸಿನಿಂದ ಯೋಗಭ್ಯಾಸವನ್ನು ಮಾಡುವುದರಿಂದ ಸದೃಢ ದೇಹ ಮತ್ತು ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ನಿರಂತರವಾಗಿ ಯೋಗವನ್ನು ಅಭ್ಯಾಸ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಉದ್ದೇಶ ಮತ್ತು ಆಶಯವನ್ನು ತಿಳಿಸುತ್ತಾ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಚಿಕ್ಕಬಳ್ಳಾಪುರ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ, ಸಿ ಬಿ ಪ್ರಕಾಶ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಸೂಚನೆಯಂತೆ ಹಾಗೂ ಶಿಕ್ಷಣ ಇಲಾಖೆಯ ಆದೇಶದಂತೆ ಆಯುಷ್ ಇಲಾಖೆಯ ಸಹಯೋಗದಲ್ಲಿ ಇಡೀ ರಾಜ್ಯದ್ಯಂತ ಸ್ಕೌಟ್ ಮತ್ತು ಗೈಡ್ಸ್, ವಿದ್ಯಾರ್ಥಿಗಳಿಗಾಗಿ ಒಂದು ವಾರಗಳ ಕಾಲ ಯೋಗೋತ್ಸವ ಕಾರ್ಯಕ್ರಮದ ಮೂಲಕ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಯೋಗದ ಅವಶ್ಯಕತೆಯನ್ನು ತಿಳಿಸುವುದು ಮತ್ತು ಭಾರತದ ಭವಿಷ್ಯಕ್ಕಾಗಿ ಸದೃಢ ಪ್ರಜೆಗಳನ್ನು ನಿರ್ಮಾಣ ಮಾಡಲು ಸಹಕಾರಿಯಾಗುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಪ್ರತಿದಿನ ಸರಳ ಯೋಗ ಅಭ್ಯಾಸಗಳನ್ನು ಮಾಡುವುದರ ಮೂಲಕ ತಾವು ಆರೋಗ್ಯವಂತರಾಗಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಸಹಕರಿಸಬೇಕೆಂದು ನುಡಿದರು.

ಬಿಜಿಎಸ್ ವಿದ್ಯಾಸಂಸ್ಥೆಯ ಸಂಸ್ಥೆಯ ಪ್ರಾಂಶುಪಾಲ ಕೆ. ಮಹದೇವ್, ಇಂತಹ ಕಾರ್ಯಕ್ರಮಗಳ ಮೂಲಕ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳಿಗಿಂತ ಶಿಸ್ತು ಮತ್ತು ಸೇವೆಯಲ್ಲಿ ಸದಾ ಮುಂದಿರಬೇಕೆಂದು ತಿಳಿಸಿದರು.

ಯೋಗ ಶಿಕ್ಷಕರಾದ ರವಿಕುಮಾರ್, ಶಿವಕುಮಾರ್ ರವರಿಂದ ಯೋಗಭ್ಯಾಸವನ್ನು ಕಲಿಸಲಾಯಿತು. ಶಾಲೆಯ ಸ್ಕೌಟ್ ಗೈಡ್ ಶಿಕ್ಷಕ ಮಂಜುನಾಥ್ ಬಡಿಗೇರ್, ಎನ್‌.ಸಿ,ಸಿ ಶಿಕ್ಷಕ ರಮೇಶ್ ಹಾಗೂ ಬುಲ್ ಬುಲ್, ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version