Home News ಸಮೀಕ್ಷೆಯಲ್ಲಿ “ವೀರಶೈವ ಲಿಂಗಾಯತ” ಎಂದಷ್ಟೆ ಬರೆಸಲು ಮನವಿ

ಸಮೀಕ್ಷೆಯಲ್ಲಿ “ವೀರಶೈವ ಲಿಂಗಾಯತ” ಎಂದಷ್ಟೆ ಬರೆಸಲು ಮನವಿ

0
Caste Survey Veerashaiva Lingayat Registration

Sidlaghatta : ರಾಜ್ಯ ಸರ್ಕಾರ ನಡೆಸುವ ಶೈಕ್ಷಣಿಕ ಸಾಮಾಜಿಕ ಜನಗಣತಿ ವೇಳೆ ವೀರಶೈವ ಲಿಂಗಾಯತರು ಧರ್ಮ ಕಲಂನಲ್ಲಿ ಹಿಂದೂ ಎಂದು, ಜಾತಿ ಕಲಂನಲ್ಲಿ “ವೀರಶೈವ ಲಿಂಗಾಯತ” ಎಂದು ಮಾತ್ರ ಬರೆಸುವಂತೆ ಶ್ರೀಬಸವೇಶ್ವರ ಸೇವಾ ಮತ್ತು ಅಭಿವೃದ್ದಿ ಟ್ರಸ್ಟ್‌ ನ ಅಧ್ಯಕ್ಷ ಬಿ.ಸಿ.ನಂದೀಶ್ ಕುಲಬಾಂಧವರಲ್ಲಿ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮದ ಕಲಂನಲ್ಲಿ ಹಿಂದೂ, ಜಾತಿ ಕಲಂನಲ್ಲಿ “ವೀರಶೈವ ಲಿಂಗಾಯತ” ಎಂದು ಮಾತ್ರ ನಮೂದಿಸಿ. ಉಪ ಜಾತಿ ಕಲಂನಲ್ಲಿ ಈ ಭಾಗದಲ್ಲಿ ಕರೆಯುವ ಗೌಡ ಲಿಂಗಾಯತ, ಬಣಜಿಗ ಲಿಂಗಾಯತ, ರೆಡ್ಡಿ ಲಿಂಗಾಯತ ಎಂಬಿತ್ಯಾದಿ ಉಪ ಜಾತಿಗಳನ್ನು ನಮೂದು ಮಾಡಿ ಅಥವಾ ಖಾಲಿ ಬಿಡುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.

ಯಾವುದೆ ರೀತಿಯ ಗೊಂದಲಕ್ಕೆ ಒಳಗಾಗಬೇಡಿ, ಗಣತಿದಾರರು ಕೇಳುವ ಎಲ್ಲ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿ, ಮುಖ್ಯವಾಗಿ ಧರ್ಮ ಮತ್ತು ಜಾತಿ ಕಲಂನಲ್ಲಿ ಸ್ಪಷ್ಟವಾಗಿ ಬರೆಸಿ ಎಂದು ಮನವಿ ಮಾಡಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version