Home News ಸಿದ್ದರಾಮಯ್ಯ ಹೇಳಿಕೆ ವೀರಶೈವ ಸಮಾಜಕ್ಕೆ ಮಾಡಿದ ಅವಮಾನ – ಅಣ್ಣಮಲೈ

ಸಿದ್ದರಾಮಯ್ಯ ಹೇಳಿಕೆ ವೀರಶೈವ ಸಮಾಜಕ್ಕೆ ಮಾಡಿದ ಅವಮಾನ – ಅಣ್ಣಮಲೈ

Annamalai accuses Congress of cultivating caste antagonism in Karnataka

0
BJP leader Annamalai at a press conference criticizing Siddaramaiah's comments on Lingayat Chief Ministers and accusing the Congress party of cultivating caste antagonism in Karnataka.

Sidlaghatta : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿನ ಭ್ರಷ್ಟಾಚಾರಕ್ಕೆ ಲಿಂಗಾಯತ ಮುಖ್ಯಮಂತ್ರಿಗಳೇ ಕಾರಣ ಎನ್ನುವ ರೀತಿಯಲ್ಲಿ ಮಾತನಾಡಿರುವುದು ರಾಜ್ಯದ ಇಡೀ ವೀರಶೈವ ಜನಾಂಗಕ್ಕೆ ಮಾಡಿದ ಅವಮಾನ. ಕೂಡಲೇ ಅವರು ಕ್ಷಮೆ ಯಾಚಿಸಬೇಕೆಂದು ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರ ಜನ್ಮದಿನವನ್ನು ಇಡೀ ದೇಶ ಅತ್ಯಂತ ಶ್ರೇಷ್ಠ ರೀತಿಯಲ್ಲಿ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಲಿಂಗಾಯಿತರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ರಾಜಕಾರಣ ಏನೇ ಇರಲಿ ಒಂದು ಸಮುದಾಯದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಎಚ್ಚರಿಕೆ ಇರಬೇಕು ಎಂದ ಅವರು ಸಿದ್ದರಾಮಯ್ಯ ಅವರ ಹೇಳಿಕೆ ವಿಶ್ವಗುರು ಬಸವಣ್ಣನವರಿಗೆ ಮಾಡಿದ ಅವಮಾನ ಎಂದರು.

ಜಾತಿಗಳ ನಡುವೆ ವೈಷಮ್ಯ ಬೆಳೆಸುವುದು ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂ ಆಗಿ ಬಂದಿದೆ. ದೇಶದ ಇತಿಹಾಸವನ್ನು ನೋಡಿದಾಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿಯೂ ಅತಿ ಹೆಚ್ಚು ಕೋಮುಗಲಭೆಗಳು ನಡೆದಿವೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತವೆ.

“ರಿವರ್ಸ್ ಗೇರ್” ರಾಜಕಾರಣ :

ಕಾಂಗ್ರೆಸ್ ನವರದ್ದು “ರಿವರ್ಸ್ ಗೇರ್” ರಾಜಕಾರಣ. ಕಾಂಗ್ರೆಸ್ ಸರ್ಕಾರ ಅಸಾಂವಿಧಾನಿಕ ರೀತಿಯಲ್ಲಿ ಶೇ 4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಿತ್ತು. ರಾಜ್ಯ ಬಿಜೆಪಿ ಸರ್ಕಾರ ಅವರ ಬದಲಿಗೆ ಎಸ್‌ಸಿ, ಎಸ್‌ಟಿ, ಒಕ್ಕಲಿಗ, ಲಿಂಗಾಯತರಿಗೆ ಮೀಸಲಾತಿಯನ್ನು ಹೆಚ್ಚಿಸಿದೆ. ಮುಸ್ಲೀಮರನ್ನು ಇ.ಡಬ್ಲ್ಯೂ.ಎಸ್ ಗೆ ಸೇರಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಅವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ವಾಪಸ್ ಮುಸ್ಲೀಮರಿಗೆ ಶೇ 4 ರಷ್ಟು ಮೀಸಲಾತಿ ಕೊಡುತ್ತೇವೆಂದು ಹೇಳುತ್ತಿದ್ದಾರೆ. ಹಾಗಾದರೆ ಯಾರದ್ದನ್ನು ತೆಗೆದು ಅವರಿಗೆ ಕೊಡುತ್ತೀರ ಎಂಬುದು ನಮ್ಮ ಪ್ರಶ್ನೆ. ಕಾಂಗ್ರೆಸ್ ನವರು ಜಾತಿಯನ್ನು ಮಾತ್ರ ಇದುವರೆಗೂ ಸೇರಿಸಿಕೊಂಡು ಬಂದಿದ್ದಾರೆ, ಮೀಸಲಾತಿ ಹೆಚ್ಚಳ ಮಾಡಿದ್ದು ಮಾತ್ರ ಬಿಜೆಪಿ ಸರ್ಕಾರ ಎಂದರು.

ಏಷಿಯಾ ಪೆಸಿಫಿಕ್ ಪ್ರದೇಶಕ್ಕೆ ಸೇರಿವ ಎಲ್ಲಾ ದೇಶಗಳ ನಗರಗಳಲ್ಲಿ ಅತ್ಯಂತ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರ ನಮ್ಮ ಬೆಂಗಳೂರು. ದೇಶ ಮತ್ತು ರಾಜ್ಯ ಸುಭದ್ರವಾಗಿದ್ದರೆ ಮಾತ್ರ ಬೆಳವಣಿಗೆ, ಅಭಿವೃದ್ಧಿ ಸಾಧ್ಯ. ಅದಕ್ಕಾಗಿಯೇ ಕಳೆದ ವರ್ಷ ಕರ್ನಾಟಕಕ್ಕೆ ಅತಿ ಹೆಚ್ಚಿನ ವಿದೇಶಿ ಬಂಡವಾಳ ಹರಿದು ಬಂದಿದೆ.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡರಾದ ಸುರೇಂದ್ರ ಗೌಡ, ಆನಂದ ಗೌಡ ಹಾಜರಿದ್ದರು.


BJP demands apology from Siddaramaiah over comments on Lingayat Chief Ministers

Sidlaghatta : Leader of the Opposition in Karnataka, Siddaramaiah, has drawn criticism from BJP state election co-in-charge Annamalai for his recent comments regarding Lingayat Chief Ministers and corruption in the state. Annamalai demanded an apology from Siddaramaiah, stating that his words were an insult to the entire Veerashaiva community.

Speaking at a press conference, Annamalai stated that Siddaramaiah’s comments came at an inappropriate time, as the entire country was celebrating the birthday of Vishwaguru Basavanna. He also accused the Congress party of cultivating caste antagonism throughout its history, leading to communal riots during its time in power.

Annamalai further criticized the Congress party’s “reverse gear” politics, citing their unconstitutional decision to give 4% reservation to Muslims while the BJP government increased reservations for SC, ST, Okkaliga, and Lingayats. He questioned the Congress party’s plans to give back the 4% reservation to Muslims, asking who would lose their reservation as a result.

Finally, Annamalai emphasized the importance of security and stability for the growth and development of Karnataka, citing the recent influx of foreign investment into the state. The press conference was attended by several BJP leaders, including Seekal Ramachandra Gowda, former MLA M. Rajanna, and Surendra Gowda.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version