Home News ಸಿಇಟಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಬೇಸತ್ತು ಆತ್ಮಹತ್ಯೆ

ಸಿಇಟಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಬೇಸತ್ತು ಆತ್ಮಹತ್ಯೆ

0
Sidlaghatta CET Rank Student Suicide

Sidlaghatta : ಸಿಇಟಿ ಅರ್ಹತಾ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಿದ್ದಕ್ಕೆ ಬೇಸತ್ತು ಶಿಡ್ಲಘಟ್ಟ ನಗರದ ವಿದ್ಯಾರ್ಥಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಿಡ್ಲಘಟ್ಟ ನಗರದ ಮಹಬೂಬ್ ನಗರದ ವಾಸಿ ನಯಾಜ್ ಪಾಷ(18) ನಲ್ಲಿಮರದಹಳ್ಳಿ ಬಳಿಯ ಅಮ್ಮನಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ಯುವಕ.

ದ್ವಿತೀಯ ಪಿಯುಸಿ ಉತ್ತೀರ್ಣನಾಗಿದ್ದ ನಯಾಜ್ ಪಾಷ ಸಿಇಟಿ ಪರೀಕ್ಷೆ ಬರೆದಿದ್ದು ಸಿಇಟಿಯಲ್ಲಿ ನಿರೀಕ್ಷಿಸಿದಷ್ಟು ಅಂಕಗಳು ಬಾರದೆ, ರ್‍ಯಾಂಕ್ ಸಿಗಲಿಲ್ಲವಾದ್ದರಿಂದ ಬೇಸತ್ತು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೃತನ ತಂದೆ ರಿಯಾಜ್ ಪಾಷ ಈ ಕುರಿತು ದೂರು ನೀಡಿದ್ದು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version