Home News ನಗರಸಭೆಯಲ್ಲಿ ಆಡಳಿತ ಹದಗೆಟ್ಟಿದೆ ಎಂದು ಉಪಾಧ್ಯಕ್ಷರಿಂದಲೇ ಆರೋಪ!

ನಗರಸಭೆಯಲ್ಲಿ ಆಡಳಿತ ಹದಗೆಟ್ಟಿದೆ ಎಂದು ಉಪಾಧ್ಯಕ್ಷರಿಂದಲೇ ಆರೋಪ!

0
Sidlaghatta City Municipal council

Sidlaghatta : ಶಿಡ್ಲಘಟ್ಟ ನಗರಸಭೆಯಲ್ಲಿ (City Municipal council – CMC) ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಒಂದೆಡೆ ನಗರಸಭೆಗೆ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ವಿಫಲವಾಗಿದ್ದರೆ, ಮತ್ತೊಂದೆಡೆ ಅನುಭವದ ಕೊರತೆಯಿಂದಾಗಿ ನಗರದ ಒಟ್ಟಾರೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸದಿರುವುದರಿಂದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ನಗರಸಭೆಯ ಉಪಾಧ್ಯಕ್ಷ ಅಫ್ಸರ್ ಪಾಷ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆಯಲ್ಲಿ ಅಧಿಕಾರಿಯ ಮತ್ತು ಸಿಬ್ಬಂದಿಗಳ ಕೊರತೆಯಿಂದ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಆಡಳಿತದ ಅನುಭವದ ಕೊರತೆಯಿಂದ ಮೂಲಭೂತ ಸೌಲಭ್ಯಗಳಿಗಾಗಿ ನಾಗರಿಕರು ಪರದಾಡುವಂತಾಗಿದೆ ಎಂದರು.

ಮಾಜಿ ಶಾಸಕ ದಿವಂಗತ ಎಸ್ ಮುನಿಶಾಮಪ್ಪ ಅವರ ಕೃಪಾಶೀರ್ವಾದದಿಂದ ಸಾವಿರದ 1992 ರಿಂದ ರಾಜಕೀಯವನ್ನು ಆರಂಭಿಸಿರುವ ನಾನು ಅನೇಕ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿ ಸೇವೆ ಸಲ್ಲಿಸಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ನನ್ನ ರಾಜಕೀಯ ಏಳಿಗೆಯನ್ನು ಸಹಿಸದ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ನಾನು ಮಾಡಿರುವ ಸೇವೆಯನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡುವ ದೃಷ್ಟಿಕೋನದಿಂದ ಕಾರ್ಯಕ್ರಮವನ್ನು ರೂಪಿಸುತ್ತಿದ್ದೇನೆ ಎಂದರು.

ಶಿಡ್ಲಘಟ್ಟ ನಗರಸಭೆಯಲ್ಲಿ ಸಿಬ್ಬಂದಿಯ ಕೊರತೆಯಿಂದ ನಾಗರಿಕರು ಮೂಲಭೂತ ಸೌಲಭ್ಯಗಳಿಗಾಗಿ ಪರದಾಡುವಂತಾಗಿದೆ. ಸಿಬ್ಬಂದಿಗೆ ವೇತನ ನೀಡಲು ತೆರಿಗೆ ವಸೂಲಿ ಪ್ರಮಾಣ ಹೆಚ್ಚಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಅನುಭವದಿಂದ ಸಲಹೆ ನೀಡಿದರೂ ಸ್ವೀಕರಿಸುತ್ತಿಲ್ಲ. ನಗರದ ಪ್ರಮುಖ ಬೀದಿಗಳಲ್ಲಿ ನೈರ್ಮಲ್ಯದ ಪ್ರಮಾಣ ಹೆಚ್ಚಿದ್ದು, ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಶಿಡ್ಲಘಟ್ಟ ನಗರಸಭೆಯಲ್ಲಿ ಕೆಲವೊಂದು ಭ್ರಷ್ಟಾಚಾರಗಳು ನಡೆದಿದ್ದು ಅತಿ ಶೀಘ್ರದಲ್ಲೇ ಅದರ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.

ಸಿಲ್ಕ್ ಸೊಸೈಟಿ ಅಧ್ಯಕ್ಷ ಜಿ.ರೆಹಮಾನ್, ಮುಖಂಡರಾದ ಜಾಬಿರ್, ಫಕ್ರುದ್ದೀನ್, ಅಬ್ಜಲ್, ಸುಬಾನ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version