Home News ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರಗಳ ರಕ್ಷಣೆ

ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರಗಳ ರಕ್ಷಣೆ

0
Sidlaghatta Cows Rescue

Sidlaghatta : ನೆರೆಯ ಆಂದ್ರಪ್ರದೇಶದ ಕದಿರಿ ಭಾಗದ ಸಂತೆಗಳಿಂದ ಬೆಂಗಳೂರು ಗ್ರಾಮಾಂತರ ಭಾಗದ ಸೂಲಿಬೆಲೆ ಕಸಾಯಿಕಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಶಿಡ್ಲಘಟ್ಟ ಪೊಲೀಸರು ರಕ್ಷಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಮಾರು 2.75 ಲಕ್ಷ ರೂ ಬೆಲೆ ಬಾಳುವ 11 ಹಸುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು 11 ಹಸು ಸೇರಿದಂತೆ ಎರಡು ವಾಹನ ಹಾಗು ವಾಹನ ಚಾಲಕರನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡಿರುವ ಜಾನುವಾರುಗಳನ್ನು ಪೋಷಣೆಗಾಗಿ ಗೋಶಾಲೆಗೆ ಬಿಟ್ಟಿದ್ದಾರೆ.

ಶಿಡ್ಲಘಟ್ಟ ವೃತ್ತ ನಿರೀಕ್ಷಕ ಬಿ.ಎಸ್.ನಂದಕುಮಾರ್, ಅಪರಾಧ ವಿಭಾಗದ ಸಿಬ್ಬಂಧಿಗಳಾದ ಸಿ.ಹೆಚ್. ನಂದಕುಮಾರ್, ಚನ್ನಕೇಶವ, ನಟರಾಜನ್, ಚಂದಪ್ಪಯಲಿಗಾರ್, ಮೈಲಾರಪ್ಪ, ಜೀಪ್ ಚಾಲಕ ಅಂಬರೀಶ್.ಎನ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version