Home News ಜಿಲ್ಲಾಧಿಕಾರಿಯಿಂದ ಜನ ಸ್ಪಂದನಾ ಕಾರ್ಯಕ್ರಮ

ಜಿಲ್ಲಾಧಿಕಾರಿಯಿಂದ ಜನ ಸ್ಪಂದನಾ ಕಾರ್ಯಕ್ರಮ

0
Sidlaghatta DC Janaspandana Program

Sidlaghatta : ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜನ ಸ್ಪಂದನಾ ಕಾರ್ಯಕ್ರಮ ನಡೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಆಶ್ರಯದಲ್ಲಿ ಶುಕ್ರವಾರ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಕೆಲವೊಂದು ಅರ್ಜಿಗಳನ್ನು ಸ್ಥಳದಲ್ಲೆ ಇತ್ಯರ್ಥಪಡಿಸಿದರೆ ಇನ್ನು ಕೆಲವೊಂದನ್ನು ಇತ್ಯರ್ಥಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಸಮಯದ ಗಡುವು ವಿಧಿಸಿದರು.

ಎಚ್‌.ಎನ್ ವ್ಯಾಲಿಯ ನೀರು ಶಿಡ್ಲಘಟ್ಟ ತಾಲ್ಲೂಕಿನ ಕೆರೆಗಳಿಗೆ ಹರಿಸುತ್ತಿಲ್ಲ. ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲ್ಲೂಕಿನ ಕೆರೆಗಳಿಗೆ ಮಾತ್ರವೇ ಹರಿಸಲಾಗುತ್ತಿದೆ. ಯಾವುದೋ ಕಾಣದ ಒತ್ತಡದಿಂದಾಗಿ ಇಲ್ಲಿನ ಕೆರೆಗಳಿಗೆ ನೀರನ್ನು ಬಿಡುತ್ತಿಲ್ಲ ಎಂದು ಹಸಿರು ಸೇನೆ ರೈತ ಸಂಘದ ರೈತರು ದೂರಿದರು.

ಜತೆಗೆ ಈ ಹಿಂದೆ ನೀರನ್ನು ಹರಿಸಲಾಗಿತ್ತಾದರೂ ಆಗ ಕಾಲುವೆ ಅಕ್ಕ ಪಕ್ಕದಲ್ಲಿ ದೊಡ್ಡ ದೊಡ್ಡ ಮೋಟಾರ್‌ ಗಳನ್ನು ಇಟ್ಟು ನೀರನ್ನು ತೋಟ ಹೊಲ ಬೃಹತ್ ಕೃಷಿ ಹೊಂಡಗಳಿಗೆ ಹರಿಸಿಕೊಂಡ ಪರಿಣಾಮ ಶಿಡ್ಲಘಟ್ಟದ ಕೆರೆಗಳಿಗೆ ಒಂದೇ ಒಂದು ಹನಿ ನೀರು ಸಹ ಬರಲಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿಲ್ಲ ಎಂದು ಅವಲತ್ತುಕೊಂಡರು.

ರೈತರ ಮನವಿ ಆಲಿಸಿದ ಜಿಲ್ಲಾಧಿಕಾರಿ ಅವರು ಎಚ್‌.ಎನ್ ವ್ಯಾಲಿ ಯೋಜನೆಯ ಎಂಜಿನಿಯರ್ ಅವರಿಗೆ ಕರೆ ಮಾಡಿ ವಿಷಯ ಪ್ರಸ್ತಾಪಿಸಿದಾಗ ಜುಲೈ ಅಂತ್ಯದೊಳಗೆ ಶಿಡ್ಲಘಟ್ಟದ ಕೆರೆಗಳಿಗೆ ನೀರನ್ನು ಹರಿಸುವುದಾಗಿ ಎಚ್‌.ಎನ್ ವ್ಯಾಲಿ ಯೋಜನೆಯ ಎಂಜಿನಿಯರ್ ಅವರು ಸ್ಪಷ್ಟಪಡಿಸಿದರು.

ಕೆರೆಗಳಿಗೆ ನೀರನ್ನು ತುಂಬಿಸುವುದಷ್ಟೆ ಅಲ್ಲ ಇತರೆ ಕೆಲವೊಂದು ಸಮಸ್ಯೆಗಳಿವೆ. ಹಾಗಾಗಿ ನಾಳೆ ಈ ರೈತರನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಡಿಸಿ ಅವರು ಎಂಜಿನಿಯರ್ ಅವರಿಗೆ ತಾಕೀತು ಮಾಡಿದರು.

ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಕ್ತಿಯೊಬ್ಬ ನಾನು ಅಶಕ್ತನಾಗಿದ್ದೇನೆ, ಏನೂ ಕೆಲಸ ಮಾಡಲು ಆಗುವುದಿಲ್ಲ. ಹೆಂಡತಿ ಮಕ್ಕಳೊಂದಿಗೆ ಗುಡಿಸಿಲಿನಲ್ಲಿ ವಾಸಿಸುತ್ತಿದ್ದೇನೆ, ವಿಕಲಚೇತನ ಮಾಶಾಸನದಿಂದಲೆ ಬದುಕು ನಡೆಸಲು ಆಗುತ್ತಿಲ್ಲ ಎಂದು ಡಿಸಿ ಬಳಿ ಕಷ್ಟವನ್ನು ಹೇಳಿಕೊಂಡರು.

ಮುಂಬರುವ ದಿನಗಳಲ್ಲಿ ಮನೆಗಳು ಮಂಜೂರು ಆದರೆ ಮೊದಲ ಆಧ್ಯತೆ ನಿನಗೆ ಕೊಡುವುದಾಗಿ ಭರವಸೆ ನೀಡಿದರಲ್ಲದೆ ನರೇಗಾ ಯೋಜನೆಯಡಿ ನಿನಗೆ ಕೆಲಸ ಕೊಡುತ್ತೇವೆ. ನಿನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿ ಸಾಕು ಎಂದು ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಅವರಿಗೆ ಈ ವ್ಯಕ್ತಿಗೆ ನರೇಗಾದಲ್ಲಿ ಕೆಲಸ ಕೊಡಿ ಎಂದು ಸೂಚಿಸಿದರು.

ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಕ್ತಿಯೊಬ್ಬ ನನಗೆ ಮಾತನಾಡಲು ಆಗುತ್ತಿಲ್ಲ. ಸಾಧನ ನೀಡಿದರೆ ಮಾತನಾಡಲು ಸಾಧ್ಯ ಎಂದು ಕೊಟ್ಟ ಅರ್ಜಿಯನ್ನು ಗಮನಿಸಿದ ಡಿಸಿ ಅವರು ಗಂಟಲಿನಲ್ಲಿ ಅಳವಡಿಸುವ ಸಾಧನವನ್ನು ಶೇ 3 ರ ಅನುದಾನದಲ್ಲಿ ಕೊಡಲು ಕ್ರಮ ಕೈಗೊಳ್ಳಿ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ಸೂಚಿಸಿದರು.

ಕಂದಾಯ, ಭೂಮಾಪನ, ನಗರಸಭೆ ಸೇರಿದಂತೆ ನಾನಾ ಇಲಾಖೆಗಳಿಗೆ ಸಂಬಂಧಿಸಿದ ಹಲವು ಅರ್ಜಿಗಳು ಸಲ್ಲಿಕೆಯಾದವು. ಸಿಇಒ ಪ್ರಕಾಶ್ ಜಿ. ನಿಟ್ಟಾಲಿ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಇಒ ನಾರಾಯಣ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version