Home News ಬೆಂಕಿಗೆ ಸೈಕಲ್ ಶಾಪ್ ಬಸ್ಮ, ಆರ್ಥಿಕ ನೆರವು

ಬೆಂಕಿಗೆ ಸೈಕಲ್ ಶಾಪ್ ಬಸ್ಮ, ಆರ್ಥಿಕ ನೆರವು

0
Sidlaghatta Fire Accident

ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಜಾಕಿರ್ ಹುಸೇನ್ ಅವರ ಕುಟುಂಬಕ್ಕೆ ಜೀವನಾಧಾರವಾಗಿದ್ದ ಸೈಕಲ್ ಶಾಪ್ ಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿದೆ. ಅವರಿಗೆ ನೆರವಾಗುವ ಉದ್ದೇಶದಿಂದ ಶ್ರೀ ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ದಿ ಟ್ರಸ್ಟ್ ನ ಅಧ್ಯಕ್ಷ ಮೇಲೂರು ಬಿ.ಎನ್.ರವಿಕುಮಾರ್ ಆರ್ಥಿಕ ನೆರವು ನೀಡಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್ ತಿಳಿಸಿದರು.

  ಆಕಸ್ಮಿಕ ಬೆಂಕಿಯಿಂದ ಸೈಕಲ್ ಶಾಪ್ ಕಳೆದುಕೊಂಡಿರುವ ಜಾಕಿರ್ ಹುಸೇನ್ ರವರಿಗೆ ನೆರವು ನೀಡಿ ಅವರು ಮಾತನಾಡಿದರು.

 ನಗರಸಭೆ ವತಿಯಿಂದಲೂ ಸೈಕಲ್ ಶಾಪ್ ನ ಮಾಲೀಕರಾದ ಜಾಕಿನ್ ಜಾಕಿರ್ ಹುಸೇನ್ ರವರಿಗೆ ಸಹಾಯಧನ ನೀಡುತ್ತೇವೆ ಎಂದರು.

 ಜೆಡಿಎಸ್ ಮುಖಂಡ ಬಿ.ಎನ್.ಸಚಿನ್ ಮಾತನಾಡಿ, ಪ್ರತಿನಿತ್ಯ ದುಡಿದು ಜೀವನ ನಡೆಸುವವರಿಗೆ ಏಕಾಏಕಿ ತೊಂದರೆಯಾದಾಗ  ಬಹಳ ಕಷ್ಟವಾಗುತ್ತದೆ. ಜಾಕೀರ್ ಹುಸೇನ್ ಅವರಿಗೆ ನೆರವಾಗುವ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ನ ಅಧ್ಯಕ್ಷ ಮೇಲೂರು ಬಿ.ಎನ್.ರವಿಕುಮಾರ್ ಅವರು ಸಹಾಯಧನ ನೀಡಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಇನ್ನೂ ಹೆಚ್ಚು ಸಹಾಯ ಬೇಕಾದಲ್ಲಿ ನೆರವು ನೀಡುವುದಾಗಿ ಭರವಸೆ ನೀಡಿದರು.

 ಸೈಕಲ್ ಶಾಪ್ ಮಾಲೀಕ ಜಾಕೀರ್ ಹುಸೇನ್ ಮಾತನಾಡಿ, ರಾತ್ರಿ ಒಂದು ಗಂಟೆ ಸಮಯದಲ್ಲಿ ಅಂಗಡಿಗೆ ಬೆಂಕಿ ತಗುಲಿ ಸಂಪೂರ್ಣ ಸೈಕಲ್ ಶಾಪ್ ಬೆಂಕಿಗೆ ಆಹುತಿಯಾಗಿದ್ದು ಸುಮಾರು ಅರುವತ್ತು ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸುರೇಶ್, ವೆಂಕಟಸ್ವಾಮಿ, ಮುಖಂಡರಾದ ರಮೇಶ್, ಅಸೀಫ್, ನಂದು, ನವೀನ್, ನಿಜಾಮ್, ಅನ್ಸರ್, ಬಾಲು, ಸಫೀಉಲ್ಲಾ, ಲಕ್ಷ್ಮೀನಾರಾಯಣ(ಲಚ್ಚಿ), ಟಿಪ್ಪು ಸೆಕ್ಯುಲರ್ ಸೇನೆಯ ಮೌಲಾ ಹಾಜರಿದ್ದರು. 

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version