Home News ಡಿಸೆಂಬರ್ 2 ರಂದು ರಕ್ತದಾನ ಶಿಬಿರ

ಡಿಸೆಂಬರ್ 2 ರಂದು ರಕ್ತದಾನ ಶಿಬಿರ

0
Blood Donation Camp

Sidlaghatta : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಡಿಸೆಂಬರ್ 2 ರ ಶನಿವಾರ ಆಯೊಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ.ವಿ.ವೆಂಕಟೇಶ್ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಡಿಸೆಂಬರ್ 2 ರಂದು ಬೆಳಗ್ಗೆ 9 ರಿಂದ ಮದ್ಯಾಹ್ನ 3 ರವರೆಗೆ ರಕ್ತದಾನ ಶಿಬಿರ ನಡೆಸಲಿದ್ದು, ಕೇವಲ ಕಾಲೇಜು ವಿದ್ಯಾರ್ಥಿಗಳಲ್ಲದೆ ಆಸಕ್ತ ದಾನಿಗಳು, ನಾಗರಿಕರು, ಯುವ ಜನರು, ವಿವಿಧ ಸಂಘ ಸಂಸ್ಥೆಗಳವರು ಬಂದು ಭಾಗವಹಿಸಿ ರಕ್ತದಾನ ಮಾಡಬೇಕೆಂದು ಅವರು ಮನವಿ ಮಾಡಿದರು.

ಈಗಾಗಲೇ ಹಲವು ರೀತಿಯಲ್ಲಿ ಪ್ರಚಾರ ಕಾರ್ಯವನ್ನು ಕೈಗೊಳ್ಳಲಾಗಿದೆ. ರೈತ ಸಂಘಗಳು, ಕನ್ನಡ ಪರ ಸಂಘಟನೆಗಳು, ಕಾರ್ಮಿಕ, ಸೇವಾ ಸಂಸ್ಥೆಗಳನ್ನು ಸಂಪರ್ಕಿಸಿದ್ದು, ಅವರು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ರಕ್ತದಾನ ಶಿಬಿರದ ಸಂಘಟನಾ ಸಂಚಾಲಕ ಡಾ.ಷಫಿ ಅಹಮದ್ ಮಾತನಾಡಿ, ನಮ್ಮ ಭಾಗದಲ್ಲಿ ಆಸ್ಪತ್ರೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಬಹಳಷ್ಟಿದೆ. ಪ್ರಾಣವನ್ನು ಉಳಿಸುವ ಈ ಕಾರ್ಯದಲ್ಲಿ ನಮ್ಮ ವಿದ್ಯಾರ್ಥಿಗಳ ಜೊತೆ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಕೋರಿದರು.

ಎನ್.ಎಸ್.ಎಸ್ ಘಟಕ ಅಧಿಕಾರಿ ಆದಿನಾರಾಯಣಪ್ಪ ಮಾತನಾಡಿ, ಕಾಲೇಜಿನ ಬಹುತೇಕ ಹೆಣ್ಣುಮಕ್ಕಳು ಗ್ರಾಮೀಣ ಪ್ರದೇಶದಿಂದ ಬರುತ್ತಾರೆ. ಈ ರಕ್ತದಾನ ಶಿಬಿರದಲ್ಲಿ ಅವರ ರಕ್ತ ಪರೀಕ್ಷೆ ನಡೆಸಿ, ಹೀಮೋಗ್ಲೋಬಿನ್ ಕೊರತೆ ಇರುವವರಿಗೆ ವೈದ್ಯರಿಂದ ಅವರಿಗೆ ರಕ್ತಹೀನತೆಯನ್ನು ಸರಿಪಡಿಸಿಕೊಳ್ಳಲು ಮಾಹಿತಿ ಕೊಡಲಾಗುವುದು. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸರಿಯಾದ ಪ್ರಮಾಣದಲ್ಲಿ ಕಬ್ಬಿಣದಂಶದ ಅಗತ್ಯವಿದೆ. ದೇಹದಲ್ಲಿ ಕಬ್ಬಿಣದ ಕೊರತೆಯಿದ್ದರೆ ದೇಹವು ಸಾಕಷ್ಟು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದಿಲ್ಲ ಎಂಬ ವಿಚಾರವನ್ನು ವೈದ್ಯರ ಮೂಲಕ ವಿದ್ಯಾರ್ಥಿನಿಯರಿಗೆ ತಿಳಿಸಿಕೊಡಲಾಗುವುದು ಎಂದರು.

ಕನ್ನಡ ಉಪನ್ಯಾಸಕ ವಿಜಯೇಂದ್ರ ಹಾಗೂ ಅಧ್ಯಾಪಕ ವರ್ಗದವರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version