Home News ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ, ಶಾಂತಿಯುತ ಮತದಾನ

ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ, ಶಾಂತಿಯುತ ಮತದಾನ

0

Sidlaghatta : ಸರ್ಕಾರಿ ನೌಕರರ ಸಂಘದ ತಾಲ್ಲೂಕು ಮತ್ತು ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣೆ ಮತದಾನವು ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಶಾಂತಿಯುತವಾಗಿ ನಡೆಯಿತು. 33 ಸ್ಥಾನಗಳು ಪೈಕಿ ಈಗಾಗಲೇ 30 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಪ್ರಾಥಮಿಕ ಶಾಲಾ ಇಲಾಖೆಯಿಂದ ಆಯ್ಕೆಯಾಗಬೇಕಾಗಿದ್ದ 3 ಸ್ಥಾನಗಳಿಗೆ 8 ಮಂದಿ ಅಂತಿಮ ಕಣದಲ್ಲಿದ್ದರು.

ಬೆಳಿಗ್ಗೆ 9 ಗಂಟೆಯಿಂದಲೇ ಮತದಾನವು ನಿಧಾನಗತಿಯಲ್ಲಿ ಆರಂಭವಾದರೂ ಮಧ್ಯಾಹ್ನ ವೇಳೆಗೆ ಚುರುಕಾಯಿತು. ಮತದಾನ ಮಾಡಲು ಶಿಕ್ಷಕರಿಗೆ ಎರಡು ಗಂಟೆ ವಿಶೇಷ ಅನುಮತಿ ಇದ್ದುದರಿಂದ ಶಾಲಾ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕಾರ್ಯ ಹಂಚಿಕೆ ಮತ್ತು ಸಮಯ ಹೊಂದಾಣಿಕೆ ಯೊಂದಿಗೆ ತಂಡಗಳಲ್ಲಿ ಆಗಮಿಸಿ ಬಂದು ಮತದಾನ ಮಾಡಿದ ದೃಶ್ಯ ಕಂಡುಬಂತು.

ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರ ದಿಂದ ಒಟ್ಟು 583 ಮತದಾರರಿದ್ದು, ಸಂಜೆ 4 ಗಂಟೆಗೆ ಮತದಾನದ ಅಂತ್ಯದ ವೇಳೆಗೆ, ಒಟ್ಟು 286 ಪುರುಷ ಮತದಾರರ ಪೈಕಿ 281 ಮಂದಿ, 297 ಮಹಿಳಾ ಮತದಾರರ ಪೈಕಿ 278 ಮಂದಿ ಮತ ಚಲಾಯಿಸಿದರು. ಒಟ್ಟಾಗಿ 583 ಮತಗಳಲ್ಲಿ 559 ಮತಗಳು ಚಲಾವಣೆ ಗೊಂಡಿದ್ದು ಶೇ. 95.9 ರಷ್ಟು ಮತದಾನವಾಗಿದೆ.

ಸ್ಥಳಕ್ಕೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರುದ್ರೇಶ ಮೂರ್ತಿ, ಇಲಾಖಾ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version