34.1 C
Sidlaghatta
Friday, March 29, 2024

ಶಿಡ್ಲಘಟ್ಟಕ್ಕೆ ಬರಲಿದೆ ISRO ಸಂಸ್ಥೆಯ “Space on Wheels”

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾಲ್ಪಿನ್ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ISRO) “Space on Wheels” ವೋಲ್ವೋ ಬಸ್ ನವೆಂಬರ್ 4 ರ ಶುಕ್ರವಾರ ಬೆಳಗ್ಗೆ 9-30 ಗಂಟೆಗೆ , ಶಿಡ್ಲಘಟ್ಟದ ಡಾಲ್ಪಿನ್ ವಿದ್ಯಾ ಸಂಸ್ಥೆಗೆ ಬರಲಿದೆ.

1969 ರಲ್ಲಿ ಸ್ಥಾಪನೆಯಾದ ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ, ಅಲ್ಲಿಂದ ಇಲ್ಲಿಯವರೆಗೆ ತಾನು ಮಾಡಿದ ಸಾಧನೆಗಳನ್ನು ಭಾರತದಲ್ಲಿ ವಿಧ್ಯಾರ್ಥಿಗಳು, ಸಾರ್ವಜನಿಕರಿಗೆ ತಿಳಿಯಪಡಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಹೆಚ್ಚಿನ ರೀತಿಯಲ್ಲಿ ಅರಿವನ್ನು ಮೂಡಿಸಬೇಕು ಎಂಬ ಧ್ಯೇಯವನ್ನು ಹೊಂದಿದೆ.

ಮಂಗಳಯಾನ, ಚಂದ್ರಯಾನ, ರಾಕೆಟ್ ತಂತ್ರ ಜ್ಞಾನ, ಉಪಗ್ರಹ, ಉಪಗ್ರಹ ಉಡಾವಣೆ ಇನ್ನೂ ಮುಂತಾದ ವಿಷಯಗಳ ಕುರಿತು ಮಾಡಲ್ ಗಳನ್ನು ತಯಾರಿಸಿ ಅದರ ಬಗ್ಗೆ ಮಾಹಿತಿಯನ್ನು ಒದಗಿಸಿ “ಸ್ಪೇಸ್ ಆನ್ ವೀಲ್ಸ್” ಬಸ್ ನಲ್ಲಿ ಅಳವಡಿಸಿದ್ದಾರೆ.

“ಸ್ಪೇಸ್ ಆನ್‌ ವೀಲ್ಸ್” ನಲ್ಲಿರುವ ‌ಪ್ರದರ್ಶನ ಮತ್ತು ಮಾಹಿತಿ ವಿಧ್ಯಾರ್ಥಿಗಳಿಗೆ ಹೆಚ್ಚಿನ ಅರಿವನ್ನು ‌ಮೂಡಿಸಿ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಕುತೂಹಲ ಉಂಟು ಮಾಡುತ್ತದೆ.

ಸರ್ಕಾರಿ, ಅನುದಾನಿತ, ಅನುದಾನ ರಹಿತ, ಪ್ರೌಢಶಾಲೆಯ ಹತ್ತನೆಯ ತರಗತಿಯ‌ ವಿಧ್ಯಾರ್ಥಿಗಳು, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪದವಿ ಕಾಲೇಜಿ‌ನ ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯೋಪಾಧ್ಯಾಯರು, ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದ್ದಾರೆ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!