Home News ಹಿರಿಯ ವಕೀಲರ ಮೇಲಿನ ಹಲ್ಲೆ : ವಕೀಲರ ಸಂಘದಿಂದ ಖಂಡನೆ

ಹಿರಿಯ ವಕೀಲರ ಮೇಲಿನ ಹಲ್ಲೆ : ವಕೀಲರ ಸಂಘದಿಂದ ಖಂಡನೆ

0
Sidlaghatta Lawyer Assault Protest

Sidlaghatta : ನಗರದ ಸರ್ಕಾರಿ ಆಸ್ಪತ್ರೆ (Government Hospital) ಆವರಣದಲ್ಲಿ ಮಂಗಳವಾರ ಹಲ್ಲೆಗೊಳಗಾಗಿ (Assault) ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ವಕೀಲ (Lawyer) ಈ.ನಾರಾಯಣಪ್ಪ ಅವರ ಯೋಗಕ್ಷೇಮವನ್ನು ವಿಚಾರಿಸಿ, ತಾಲ್ಲೂಕು ವಕೀಲರ ಸಂಘದ ಸದಸ್ಯರೊಂದಿಗೆ ಅವರಿಗೆ ಬೆಂಬಲ ವ್ಯಕ್ತಪಡಿಸಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರ ಗೌಡ ಮಾತನಾಡಿದರು.

ಬುದ್ಧಿಮಾತು ಹೇಳಲು ಹೋದ ಹಿರಿಯ ವಕೀಲ ಈ.ನಾರಾಯಣಪ್ಪ ಅವರು ಹಾಗೂ ಅವರ ಕುಟುಂಬದ ಸದಸ್ಯರ ಮೇಲಿನ ಹಲ್ಲೆಯನ್ನು ತೀವ್ರವಾಗಿ ವಕೀಲರ ಸಂಘ ಖಂಡಿಸುತ್ತದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಹಿರಿಯ ವಕೀಲರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ವೃತ್ತಿಯನ್ನು ಸಹ ನಿಂದಿಸಿ,ಕೈ ತಿರುಚಿ, ಹೆಂಗಸರ ಮೇಲೆ ಕೂಡ ಹಲ್ಲೆ ಮಾಡಿರುವುದು ತಪ್ಪು. ಈಗಾಗಲೇ ವಕೀಲರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಎಲ್ಲವನ್ನೂ ಸಂಪೂರ್ಣವಾಗಿ ಪರಿಶೀಲಿಸಿ ಪೊಲೀಸರು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಬಂಧಿಸಬೇಕು. ಹಿರಿಯ ಸಹೋದ್ಯೋಗಿ ವಕೀಲರ ಬೆನ್ನೆಲುಬಾಗಿ ವೃತ್ತಿಬಾಂಧವರು ಇದ್ದೇವೆ. ವಕೀಲ ವೃತ್ತಿಯನ್ನು ಯಾರೇ ಅಗೌರವವಾಗಿ ಕಂಡರೂ ಸಹಿಸುವುದಿಲ್ಲ ಎಂದರು.

ಪಿಂಡಿಪಾಪನಹಳ್ಳಿ ನರಸಿಂಹಮೂರ್ತಿ ಮಾತನಾಡಿ, ಇದು ಗ್ರಾಮಕ್ಕೆ ಇರುವ ಸಂಪರ್ಕ ರಸ್ತೆಯ ಸಮಸ್ಯೆ. ಈ ಹಿಂದೆ ಹಿರಿಯ ವಕೀಲರ ವಂಶಸ್ಥರು ಜನರು ಓಡಾಡಲೆಂದು ರಸ್ತೆಯನ್ನು ಬಿಟ್ಟಿದ್ದರು. ಇದೀಗ ಅವರು ಇದು ನಮಗೆ ಸೇರಿದ್ದೆಂದು ರಸ್ತೆಯನ್ನು ಜೆಸಿಬಿ ತಂದು ಮುಚ್ಚಲು ಹೋದಾಗ ಗ್ರಾಮದ ಕೃಷ್ಣಾರೆಡ್ಡಿ ಎಂಬುವವರು ತಡೆದಿದ್ದಾರೆ. 76 ವರ್ಷ ವಯಸ್ಸಿನ ಅವರನ್ನು ವಕೀಲ ಈ.ನಾರಾಯಣಪ್ಪ ಅವರ ಮಕ್ಕಳು ಹೊಡೆದಿದ್ದಾರೆ. ಪೊಲೀಸರು ಸತ್ಯಾಸತ್ಯತೆಯನ್ನು ಪರಿಶೀಲಿಸಲಿ. ಹಿರಿಯ ಅಧಿಕಾರಿಗಳು ಬಂದು ಗ್ರಾಮಕ್ಕೆ ರಸ್ತೆ ಬಿಡಿಸಲಿ ಎಂದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version