Home News ಹಲ್ಲೆ ಖಂಡಿಸಿ ವಕೀಲರ ಸಂಘದಿಂದ ಪ್ರತಿಭಟನೆ

ಹಲ್ಲೆ ಖಂಡಿಸಿ ವಕೀಲರ ಸಂಘದಿಂದ ಪ್ರತಿಭಟನೆ

0
Sidlaghatta Lawyers Protest

Sidlaghatta : ಚಿಂತಾಮಣಿಯ ಕರ್ತವ್ಯನಿರತ ವಕೀಲರೊಬ್ಬರ ಮೇಲೆ ಪ್ರಕರಣವೊಂದರ ಎದುರುದಾರರು ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಹೇಳಿದರು.

ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳಿಂದ ಮಂಗಳವಾರ ನಗರದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಪಕ್ಕದ ಚಿಂತಾಮಣಿ ತಾಲ್ಲೂಕಿನ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಕರ್ತವ್ಯ ನಿರ್ವಹಿಸುತ್ತಿರುವ ಭಾಸ್ಕರಗೌಡ ಎಂಬ ವಕೀಲರ ಮೇಲೆ ಪ್ರಕರಣವೊಂದರ ಎದುರುದಾರರು ಪೊಲೀಸ್ ಹಾಗು ಇತರೆ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹಲ್ಲೆ ಮಾಡಿರುವುದನ್ನು ತಾಲ್ಲೂಕು ವಕೀಲರ ಸಂಘ ಖಂಡಿಸುತ್ತದೆ ಎಂದರು.

ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲರಾದ ಬೈರಾರೆಡ್ಡಿ, ಮಂಜುನಾಥ್, ಶ್ರೀನಿವಾಸ್, ಜಿ.ಸಿ.ಚಂದ್ರ, ದ್ಯಾವಪ್ಪ, ವೆಂಕಟರೆಡ್ಡಿ, ಭಾಸ್ಕರ್, ವೀರಕುಮಾರ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version