Home News ಶಿಡ್ಲಘಟ್ಟ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರ ಆಯ್ಕೆ

ಶಿಡ್ಲಘಟ್ಟ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರ ಆಯ್ಕೆ

0
Sidlaghatta Lions club President

Sidlaghatta : ನಾವು ಬದುಕುವ ಜತೆಗೆ ನಮ್ಮ ಜತೆಯಲ್ಲಿ ಇರುವವರನ್ನು ಕೂಡ ಜತೆಗೂಡಿಸಿಕೊಂಡು ಬದುಕುವುದೆ ಉತ್ತಮ ಬದುಕು ಎಂದು ಶಿಡ್ಲಘಟ್ಟ ಲಯನ್ಸ್ ಕ್ಲಬ್‌ನ ನಿರ್ಗಮಿತ ಅಧ್ಯಕ್ಷ ಫುಡ್ ಮನೋಹರ್ ಅಭಿಪ್ರಾಯಪಟ್ಟರು.

ನಗರದಲ್ಲಿನ ಲಯನ್ಸ್ ಕ್ಲಬ್‌ನ ಕಚೇರಿಯಲ್ಲಿ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿ ಮಾತನಾಡಿದರು.

ನಾನು ಅಧ್ಯಕ್ಷನಾದ ನಂತರ ನನ್ನ ಕ್ಲಬ್‌ನ ಸದಸ್ಯರ ಜತೆಗೂಡಿ ಅನೇಕ ಸೇವಾ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ವಾರದ ಸಂತೆಯಲ್ಲಿನ ಬಡ ವ್ಯಾಪಾರಿಗಳಿಗೆ ಮದ್ಯಾಹ್ನ ಊಟ ವಿತರಣೆ, ಹೆಣ್ಣು ಮಕ್ಕಳಿಗೆ ಟೈಲರಿಂಗ್ ತರಬೇತಿ ನೀಡಲಾಗಿದೆ ಎಂದರು.

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಕೆಲ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸಲಾಗಿದೆ. ಮುಖ್ಯವಾಗಿ ಶಾಲೆಗಳಲ್ಲಿ ಮಕ್ಕಳ ಕಣ್ಣಿನ ಪರೀಕ್ಷೆ ಮಾಡಿ ಅಂಧತ್ವದ ಬಾಲಕಿ ಬಾಲಕಿಯರಿಗೆ ಸಲಕರಣೆಗಳ ವಿತರಣೆ ಮಾಡುವಂತ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು ತೃಪ್ತಿ ತಂದಿದೆ ಎಂದು ಹೇಳಿದರು.

ಹಾಗೆಯೆ ಮುಂದೆ ಅಧ್ಯಕ್ಷರಾಗುವವರು ಕೂಡ ಈ ಎಲ್ಲಾ ಸೇವಾ ಕಾರ್ಯಗಳನ್ನು ಮುಂದುವರೆಸಬೇಕು ಮತ್ತು ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲು ನಮ್ಮೆಲ್ಲರ ಬೆಂಬಲ ಇರುತ್ತದೆ ಎಂದು ವಿವರಿಸಿದರು.

ಮೊಹಮ್ಮದ್ ಅಮಾನುಲ್ಲಾ ಅವರನ್ನು ಲಯನ್ಸ್ ಶಿಡ್ಲಘಟ್ಟ ಕ್ಲಬ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಅಧಿಕಾರ ಹಸ್ತಾಂತರಿಸಲಾಯಿತು. ನೂತನ ಅಧ್ಯಕ್ಷ ಮೊಹಮ್ಮದ್ ಅಮಾನುಲ್ಲಾ ತನ್ನ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಎಲ್ಲರ ಸಹಕಾರ ಕೋರಿದರು.

ಲಯನ್ಸ್ ಕ್ಲಬ್‌ನ ಯುವ ಅಭಿವೃದ್ದಿ ಘಟಕದ ಜಿಲ್ಲಾಧ್ಯಕ್ಷ ಅಜಯ್ ಕೀರ್ತಿ, ಉಪಾಧ್ಯಕ್ಷ ಅನಿಲ್ ಕುಮಾರ್, ಸದಸ್ಯ ಎಸ್.ವಿಜಯ್ ಕುಮಾರ್, ಎಸ್.ಎಂ.ಮಂಜುನಾಥ್, ಅಪ್ಪಿ, ಮಂಜುನಾಥ್ ಇನ್ನಿತರರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version