Home News ಶಿಡ್ಲಘಟ್ಟ ಪೊಲೀಸ್ ಠಾಣೆಯ ಬಳಿಯೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

ಶಿಡ್ಲಘಟ್ಟ ಪೊಲೀಸ್ ಠಾಣೆಯ ಬಳಿಯೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

0
Sidlaghatta Police station Murder

ನಗರದ ಪೊಲೀಸ್ ಠಾಣೆಯ ಬಳಿ ಮಧ್ಯಾಹ್ನ 2.50 ರ ಸಮಯದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಅಮ್ಜದ್ ಖಾನ್ (45) ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿದ್ದಾರೆ.

ಕೊಲೆಯಾದ ವ್ಯಕ್ತಿ ಅಮ್ಜದ್ ಖಾನ್ (45)

ನಗರ ಪೊಲೀಸ್ ಠಾಣೆಯ ಹತ್ತಿರದಲ್ಲಿಯೇ ಇರುವ ರೈಲ್ವೆ ಬ್ರಿಡ್ಜ್ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಅಮ್ಜದ್ ಖಾನ್ ನನ್ನು ಮಾರುತಿ ಓಮ್ನಿ ವಾಹನದಲ್ಲಿ ಬಂದ ದುಷ್ಕರ್ಮಿಗಳು ಡಿಕ್ಕಿ ಹೊಡೆದು ಬೀಳಿಸಿ, ನಂತರ ಲಾಂಗ್ ಗಳಿಂದ ಹಲ್ಲೆ ನಡೆಸಿದ್ದಾರೆ. ಜನರ ಕೂಗು ಕೇಳಿಸಿಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ದುಷ್ಕರ್ಮಿಗಳು ವಾಹನ ಹತ್ತಿ ಪರಾರಿಯಾಗಿದ್ದಾರೆ. ಪೇದೆಯೊಬ್ಬರು ಲಾಠಿ ಬೀಸಿ ಓಮ್ನಿ ವ್ಯಾನಿನ ಗಾಜು ಪುಡಿಯಾಗಿದೆ. ತಕ್ಷಣವೇ ಪೊಲೀಸರು ತಮ್ಮ ವಾಹನದಲ್ಲಿ ದುಷ್ಕರ್ಮಿಗಳನ್ನು ಹಿಂಬಾಲಿಸಿದಾದರೂ ಅವರು ತಪ್ಪಿಸಿಕೊಂಡಿದ್ದಾರೆ.

ಕೊಲೆಯಾದ ವ್ಯಕ್ತಿ ಅಮ್ಜದ್ ಖಾನ್ ಈ ಹಿಂದೆ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಎಂದು ತಿಳಿದುಬಂದಿದೆ.

ಕೊಲೆಯಾದ ವ್ಯಕ್ತಿಯ ದೇಹವನ್ನು ಶವಾಗಾರಕ್ಕೆ ಸಾಗಿಸದೆ ಹೊರಗಡೆಯಿಟ್ಟು ಗೋಳಾಡಲು ಮುಂದಾದ ಆತನ ಸಂಬಂಧಿಕರು ಹಾಗೂ ಆಪ್ತರಿಂದಾಗಿ ಕೆಲ ಕಾಲ ಆಸ್ಪತ್ರೆಯಲ್ಲಿ ಉದ್ರಿಕ್ತ ವಾತವರಣ ಉಂಟಾಗಿತ್ತು. ಪೊಲೀಸರು ಜನರನ್ನು ತಡೆಯಲು ಹರಸಾಹಸ ಪಡಬೇಕಾಯಿತು.

ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಎಸ್.ಪಿ ಮಾತನಾಡಿ, “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸುಳಿವುಗಳು ಸಿಕ್ಕಿದ್ದು, ಅತಿಶೀಘ್ರದಲ್ಲಿ ಕೊಲೆ ಮಾಡಿದವರನ್ನು ಬಂಧಿಸಲಾಗುವುದು” ಎಂದು ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version