Home News ಮಾತೃ ಪಕ್ಷಕ್ಕೆ ದ್ರೋಹ ಮಾಡಿರುವರು ಎಂದಿಗೂ ಕಾಂಗ್ರೆಸ್ ಪಕ್ಷದವರಾಗುವುದಿಲ್ಲ – ಕೆ.ಎಚ್.ಮುನಿಯಪ್ಪ

ಮಾತೃ ಪಕ್ಷಕ್ಕೆ ದ್ರೋಹ ಮಾಡಿರುವರು ಎಂದಿಗೂ ಕಾಂಗ್ರೆಸ್ ಪಕ್ಷದವರಾಗುವುದಿಲ್ಲ – ಕೆ.ಎಚ್.ಮುನಿಯಪ್ಪ

0
Sidlaghatta Congress Party K H Muniyappa Meeting

ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಬಾಲಾಜಿ ಕಲ್ಯಾಣಮಂಟಪದಲ್ಲಿ ಶನಿವಾರ ನಡೆದ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಅನುಭವಿದವರೇ ತಮ್ಮ ಬೆಂಬಲಿಗರಿಂದ ಬಿಜೆಪಿ ಪಕ್ಷಕ್ಕೆ ಮತಹಾಕಿಸಿದ್ದಾರೆ. ಮಾತೃ ಪಕ್ಷಕ್ಕೆ ದ್ರೋಹ ಮಾಡಿರುವರು ಎಂದಿಗೂ ಕಾಂಗ್ರೆಸ್ ಪಕ್ಷದವರಾಗುವುದಿಲ್ಲ. ಅವರನ್ನು ಎಂದಿಗೂ ದೇವರು ಕ್ಷಮಿಸುವುದಿಲ್ಲ. ಜನರು ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠಕಲಿಸುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ನಾನು ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದರೂ, ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನಮ್ಮ ಪಕ್ಷದವರೇ ದ್ರೋಹ ಬಗೆದಿದ್ದಾರೆ ಎಂದು ಅವರು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಈಗಿನಿಂದಲೇ ಪಕ್ಷವನ್ನು ಬಲ ಪಡಿಸಬೇಕು. ಸತ್ಯಕ್ಕೆ ಕಾಲ ಬರುತ್ತದೆ, ನಿಷ್ಠಾವಂತ ಕಾರ್ತಕರ್ತರಿಗೆ ನನ್ನ ಬೆಂಬಲ ಎಂದಿಗೂ ಇರುತ್ತದೆ. ಅಂತಹ  ಕಾರ್ಯಕರ್ತರನ್ನು ಗುರುತಿಸುವುದು ನನ್ನ ಕರ್ತವ್ಯ. ಅಂತಹವರಿಗೇ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೇಟ್ ದೊರೆಯಲಿದೆ ಎಂದರು.

ಭಾರತದ ಕಣಜ ಹರಿಯಾಣ ಮತ್ತು ಪಂಜಾಬ್‌ ನಲ್ಲಿದೆ. ಅಲ್ಲಿನ ರೈತರು ಕಾಯಿದೆ ವಾಪಸ್ ಪಡೆಯಿರಿ ಎಂದು ಒಟ್ಟಾಗಿ ಕಾನೂನು ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಈವರೆಗೆ ಅಲ್ಲಿ 200 ಮಂದಿ ಪ್ರಾಣ ತೆತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಕರುಣೆ ಇಲ್ಲ. ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಆದರೆ ಮೋದಿ ಕೇವಲ ಹದಿನೈದು ಶ್ರೀಮಂತರ ಪರವಾಗಿದ್ದಾರೆ ಎಂದು ಟೀಕಿಸಿದರು.

 ಕೆಪಿಸಿಸಿ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಕಾರ್ಯಕರ್ತರ ಸಭೆ ಮಾಡಬೇಕೆಂದು ಕಾಂಗ್ರೆಸ್ ಭವನವನ್ನು ಕೇಳಿದಾಗ ಅವರು ಅವಕಾಶ ನೀಡಲಿಲ್ಲ. ಆದ್ದರಿಂದ ಈ ಜಾಗದಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದೇವೆ. ಮುಂದೆ ಬರುವ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ನಿಷ್ಠಾವಂತರಿಗೆ ಆದ್ಯತೆ ನೀಡಬೇಕು. ಹಾಗೆಯೇ ಮುಂಬರುವ ವಿಧಾನಸಭಾ ಚುನವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ  ಯುವಕರಿಗೆ ಅವಕಾಶ ನೀಡಿ ಬೆಂಬಲಿಸಿ ಪಕ್ಶದ ವರ್ಚಸ್ಸನ್ನು ಹೆಚ್ಚಿಸಬೇಕು ಎಂದರು.

 ಈ ಸಂದರ್ಭದಲ್ಲಿ ಆಂಜಿನಪ್ಪ ಪುಟ್ಟು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಮಾಜ ಸೇವೆಯಲ್ಲಿ ನಿರತರಾಗಿರುವ ಕಾಂಗ್ರೆಸ್ ಮುಖಂಡ ಆಂಜಿನಪ್ಪ ಪುಟ್ಟು ಅವರಿಗೆ ಟಿಕೆಟ್ ಕೊಡಿಸಬೇಕೆಂದು ಒತ್ತಾಯಿಸಿದರು.

 ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಮ್ಮ, ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶ್ವತ್ಥನಾರಾಯಣರೆಡ್ಡಿ, ಮುಖಂಡರಾದ ಕಂಬದಹಳ್ಳಿ ಜಗದೀಶ್, ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ, ಎನ್.ಎಸ್.ಐ.ಯು ರಾಜ್ಯಸಂಚಾಲಕ ಮುನೀಂದ್ರ, ತಮ್ಮಣ್ಣ, ಕೆಂಪಣ್ಣ, ಹುಸೇನ್ ಸಾಬ್, ಗೋವಿಂದರಾಜು, ಸುಗಟುರು ದೇವರಾಜು, ಆನೂರು ದೇವರಾಜು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version