PUC ತೃತೀಯ ರ‍್ಯಾಂಕ್ ಪಡೆದ ಚೈತ್ರಶ್ರೀಗೆ ಸನ್ಮಾನ

- Advertisement -
- Advertisement -

Sidlaghatta : ರಾಜ್ಯ PUC ಕಾಮರ್ಸ್ ವಿಭಾಗದಲ್ಲಿ ತೃತೀಯ ರ‍್ಯಾಂಕ್ ಪಡೆದು ಸಾಧನೆ ಮಾಡಿರುವ ಶಿಡ್ಲಘಟ್ಟದ ಅಕ್ಷರ ಪಿಯು ಕಾಲೇಜಿನ ವಿದ್ಯಾರ್ಥಿನಿ ಚೈತ್ರಶ್ರೀ ಅವರನ್ನು ನಗರದ ಮಯೂರ ಸರ್ಕಲ್‌ನ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಸನ್ಮಾನಿಸಲಾಯಿತು.

ನಗರದ ನಿವಾಸಿ ಜನಾರ್ದನ್ ಮತ್ತು ಕಾಂತಮ್ಮ ದಂಪತಿಯ ಪುತ್ರಿ ಚೈತ್ರಶ್ರೀ ಗೆ ಶಾಸಕ ಬಿ.ಎನ್. ರವಿಕುಮಾರ್ ಅವರ ಅಭಿಮಾನಿಗಳ ಬಳಗ ವತಿಯಿಂದ ವಿದ್ಯಾರ್ಥಿನಿಗೆ 5,000 ರೂಪಾಯಿಗಳ ನಗದು ಬಹುಮಾನವನ್ನು, ಶಿಡ್ಲಘಟ್ಟ ತಾಲ್ಲೂಕು ಕದಂಬ ಸೈನ್ಯ ಕನ್ನಡ ಸಂಘಟನೆಯ ವತಿಯಿಂದ ಚೈತ್ರಶ್ರೀ ಅವರಿಗೆ ಸನ್ಮಾನ ಮತ್ತು ಗೌರವಧನ ಸಮರ್ಪಿಸಲಾಯಿತು.

ಶಿಕ್ಷಕ ವಿ. ಕೃಷ್ಣ ಅವರು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆಯ ಅಧ್ಯಕ್ಷ ಹಾಗೂ ಕಲಾವಿದ ಸಿ.ಎನ್. ಮುನಿರಾಜ್, ಗೌರವಾಧ್ಯಕ್ಷ ಸ್ಪೋರ್ಟ್ಸ್ ಮುನಿರಾಜು, ಜಿಲ್ಲಾ ಸಮಿತಿ ಸದಸ್ಯ ಶ್ರೀನಿವಾಸ್ ವಿಶ್ವಕರ್ಮ, ಖಜಾಂಚಿ ಮುಖೇಶ್ ಸಿ., ಕೆ.ಟಿ. ಮುನಿರಾಜು, ಆಟೋ ಶ್ರೀಧರ್, ಕ್ರೀಡಾಪಟು ಮುನಿಕೃಷ್ಣ, ಗಗನ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!