Home News ಪಟಾಕಿಗಳನ್ನು ಸಿಡಿಸದೇ ದೀಪಾವಳಿ ಆಚರಿಸುವಂತೆ ಜನಜಾಗೃತಿ ಕಾರ್ಯಕ್ರಮ

ಪಟಾಕಿಗಳನ್ನು ಸಿಡಿಸದೇ ದೀಪಾವಳಿ ಆಚರಿಸುವಂತೆ ಜನಜಾಗೃತಿ ಕಾರ್ಯಕ್ರಮ

0
Sidlaghatta scouts and Guides cracker free deepavali diwali celebration

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಡ್ಲಘಟ್ಟ ಸ್ಥಳೀಯ ಸಂಸ್ಥೆಯ ವತಿಯಿಂದ ಶಿಡ್ಲಘಟ್ಟದ ಸ್ಥಳೀಯ ಸಂಸ್ಥೆಯ ಕಚೇರಿಯಲ್ಲಿ ದೀಪಗಳನ್ನು ಬೆಳಗುವ ಮೂಲಕ ದೀಪಾವಳಿಯನ್ನು ಆಚರಿಸುವ ಕಾರ್ಯಕ್ರಮಕ್ಕೆ ಚಾಲನೆಗೊಳಿಸಲಾಯಿತು.

ಶಿಡ್ಲಘಟ್ಟ ನಗರದ ಬೀದಿಗಳಲ್ಲಿ ಜಾಥಾ ವನ್ನು ಏರ್ಪಡಿಸಿ ಸಾರ್ವಜನಿಕರಲ್ಲಿ ಪಟಾಕಿಗಳನ್ನು ಸಿಡಿಸದೇ ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿಯನ್ನು ಆಚರಿಸಿ ಪರಿಸರವನ್ನು ರಕ್ಷಿಸುವಂತೆ ಜಾಗೃತಿ ಮೂಡಿಸಲಾಯಿತು.

 ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿಗಳಾದ ಸಿ ಬಿ ಪ್ರಕಾಶ್ ಹಾಗೂ ಶಿಡ್ಲಘಟ್ಟ ಸ್ಥಳೀಯ ಸಂಸ್ಥೆಯ ಸಹ ಕಾರ್ಯದರ್ಶಿ ನಾಗರಾಜು, ರೋವರ್ ಗಳಾದ ಪವನ್ ಕುಮಾರ್ ದೀಕ್ಷಿತ್, ಉಮೇಶ್ ಹಾಗೂ ರೇಂಜರ್ ಗಳಾದ ತೇಜಸ್ವಿನಿ ಹಾಗೂ ಮೀನಾಕ್ಷಿ ಸ್ಕೌಟ್ಸ್ ಪವನ್ ಕುಮಾರ್, ಕಬ್ ಆರ್ಯನ್ ಗೌಡ, ಬುಲ್ಬುಲ್ ಆಧ್ಯಾಗೌಡ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version