Home News ತಾಲ್ಲೂಕು ಆಡಳಿತದಿಂದ ಕಾಟಾಚಾರಕ್ಕೆ ನಡೆದ ತತ್ವಜ್ಞಾನಿಗಳ ದಿನಾಚರಣೆ

ತಾಲ್ಲೂಕು ಆಡಳಿತದಿಂದ ಕಾಟಾಚಾರಕ್ಕೆ ನಡೆದ ತತ್ವಜ್ಞಾನಿಗಳ ದಿನಾಚರಣೆ

0

Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆದ ಶ್ರೀ ಶಂಕರಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮವು ಆಡಳಿತದ ನಿರ್ಲಕ್ಷ್ಯ ಮತ್ತು ಅನುಪಸ್ಥಿತಿಯಿಂದ ಅಸಮಾಧಾನ ಮೂಡಿಸುವಂತೆ ನಡೆಯಿತು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗೈರುಹಾಜರಿನಿಂದ ಸಮುದಾಯದ ಮುಖಂಡರು ಅಸಹನೆ ವ್ಯಕ್ತಪಡಿಸಿದರು. ಪೂಜೆಗಾಗಿ ದೇವಸ್ಥಾನಕ್ಕೆ ತೆರಳಬೇಕಿದ್ದ ಅವರು ಕಾರ್ಯಕ್ರಮದ ವಿಳಂಬದಿಂದ ಕಾದು ಕುಳಿತ ಸಂದರ್ಭವೂ ಉಂಟಾಯಿತು.

ಜಯಂತ್ಯುತ್ಸವದ ಆಯೋಜನೆಗೆ ಜವಾಬ್ದಾರಿ ನೀಡಿದ್ದ ತಹಶೀಲ್ದಾರ್ ಅವರು ತುರ್ತು ಸಭೆಯಲ್ಲಿ ನಿರತರಾಗಿದ್ದ ಕಾರಣ, ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಹೊಣೆ ವಹಿಸಲಾಗಿದೆ. ಆದರೆ ಅವರು ಕೂಡ ಕಾರ್ಯಕ್ರಮಕ್ಕೆ ಹಾಜರಾಗದೇ ನಿರ್ಲಕ್ಷ್ಯ ತೋರಿದುದರಿಂದ, ಅನೇಕ ಇಲಾಖೆಗಳ ಅಧಿಕಾರಿಗಳಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು.

“ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾವು ನಮ್ಮ ಕೈಯಲ್ಲಿಯೇ ಮಕ್ಕಳಿಗೆ ಶಾಲು, ಹಾರ ನೀಡಿ ಪುರಸ್ಕಾರ ಮಾಡಬೇಕಾಯಿತು. ಶಾಸಕರು ಸಹ ಹಾಜರಾಗದೇ ನಮ್ಮನ್ನು ಕಡೆಗಣಿಸಿದ್ದಾರೆ. ಹಲವಾರು ಜಯಂತಿಗಳಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳು ಈ ಕಾರ್ಯಕ್ರಮವನ್ನು ಬದಿಗೊತ್ತಿದ್ದಾರೆ. ಈ ರೀತಿ ನಡೆಯುವುದು ಬೇಸರವನ್ನುಂಟುಮಾಡುತ್ತದೆ.” ಎಂದು ತಾಲ್ಲೂಕು ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಎನ್.ಜಿ. ಮಂಜುನಾಥ್ ಮತ್ತು ಕಾರ್ಯದರ್ಶಿ ಕೆ. ಮಂಜುನಾಥ್ ಹೇಳಿದರು.

ತಾಲ್ಲೂಕು ಗ್ರೇಡ್ 2 ತಹಶೀಲ್ದಾರ್ ಪೂರ್ಣಿಮಾ ಅವರು ನಂತರ ಸ್ಥಳಕ್ಕೆ ಆಗಮಿಸಿ ಕ್ಷಮೆ ಯಾಚಿಸಿ ಕಾರ್ಯಕ್ರಮ ನಡೆಸಿದರು. ಆದರೆ ಅವರ ಭಾಷಣದಲ್ಲಿ ಶಂಕರಾಚಾರ್ಯರ ಬಗ್ಗೆ ತಪ್ಪಾದ ಮಾಹಿತಿ ನೀಡಿದದ್ದು ಮತ್ತೆ ವಿವಾದಕ್ಕೆ ಕಾರಣವಾಯಿತು.

ಈ ಸಂದರ್ಭದಲ್ಲಿ ಶಂಕರ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಆರ್. ಶ್ರೀನಿವಾಸಮೂರ್ತಿ, ಬ್ರಾಹ್ಮಣ ಮಹಾಸಭಾ ಖಜಾಂಚಿ ಎಸ್.ಆರ್. ಶ್ರೀನಾಥ್, ಡಾ. ಡಿ.ಟಿ. ಸತ್ಯನಾರಾಯಣರಾವ್, ಜಿಲ್ಲಾ ವಿಪ್ರ ಪುರೋಹಿತರ ಮತ್ತು ಆಗಮಿಕರ ವಿಶ್ವಸ್ಥ ಮಂಡಳಿ ಅಧ್ಯಕ್ಷ ವಿ.ಎನ್. ರಾಮಮೋಹನ ಶಾಸ್ತ್ರಿ, ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ, ವಿ. ಕೃಷ್ಣ ಹಾಗೂ ಮೇಲೂರು ಮಂಜುನಾಥ್ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version