Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು ಮ್ಯಾಪಿಂಗ್ ಮಾಡಿರುವ 2,09,793 ಮಂದಿ ಮತದಾರರ ಪೈಕಿ 2,06,963(ಎರಡು ಲಕ್ಷ ಆರು ಸಾವಿರದ ಒಂಬೈನೂರ ಅರವತ್ತ ಮೂರು) ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಮತದಾರ ನೋಂದಣಾಧಿಕಾರಿ ಎಸ್.ಎಸ್.ಅಬೀದ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜೂನ್ 16ಕ್ಕೆ ಅನ್ವಯವಾಗುವಂತೆ ಕ್ಷೇತ್ರದಲ್ಲಿ 2,09,793 ಮಂದಿ ಮತದಾರರಿದ್ದು ಈ ಪೈಕಿ 2,03,213 ಮಂದಿ ಮತದಾರ ಮ್ಯಾಪಿಂಗ್(ಶೇ 96.86) ಕಾರ್ಯ ಮಾಡಲಾಗಿದೆ. ಜೂನ್ 10 ರಂದು ಸಂಜೆ 6 ಗಂಟೆ ಸಮಯದ ಅಂಕಿ ಅಂಶಗಳಂತೆ 2,06,963 ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದೆ.
ಶೇ 98.67ರಷ್ಟು ಗಣತಿ ನಮೂನೆಗಳನ್ನು ಈಗಾಗಲೇ ವಿತರಿಸಿದ್ದು ಈ ಪೈಕಿ 75,931(ಶೇ36.20)ರಷ್ಟು ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸಂಬಂಧಿಸಿದ ಬಿ.ಎಲ್.ಓಗಳು ಕ್ರೂಡೀಕರಿಸಿದ್ದು ಗಣಕೀಕರಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಪೈಕಿ ಗಣತಿ ನಮೂನೆಗಳನ್ನು ಪಡೆಯದ, ಶಾಶ್ವತವಾಗಿ ಸ್ಥಳಾಂತರಗೊಂಡ, ಮೃತಪಟ್ಟ, ಹೆಚ್ಚು ಮತಗಟ್ಟೆಗಳಲ್ಲಿ ಮತದಾರರಾಗಿರುವ ಹಾಗೂ ಇತರೆ ಕಾರಣಗಳಿಗಾಗಿ 1151 ಮಂದಿ ಮತದಾರರನ್ನು ಅನರ್ಹ ಮತದಾರರೆಂದು ಗುರ್ತಿಸಲಾಗಿದೆ.
ಎಸ್.ಐ.ಆರ್ ಕಾರ್ಯ ಮುಗಿಯುವ ಅವಧಿಯೊಳಗೆ ಈ 1151 ಮಂದಿ ಮತದಾರ ವಾಸ್ತವ ಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮವಾಗಿ ಅನರ್ಹಗೊಳಿಸಲಾಗುವುದು. ಎಸ್.ಐ.ಆರ್ ಕಾರ್ಯವು ಜಿಲ್ಲೆ ಹಾಗೂ ಈ ಕ್ಷೇತ್ರದಲ್ಲಿ ಉತ್ತಮವಾಗಿ ನಡೆಯುತ್ತಿದ್ದು ಎಲ್ಲರೂ ಇನ್ನಷ್ಟು ಸಹಕಾರ ನೀಡಿ ಎಸ್.ಐ.ಆರ್ ಕಾರ್ಯವನ್ನು ಸುಸೂತ್ರವಾಗಿ ಯಶಸ್ವಿ ಮಾಡಲು ಅವರು ಕೋರಿದ್ದಾರೆ.
In English: Sidlaghatta Assembly constituency’s Special Intensive Revision (SIR) of the voter list has distributed enumeration forms to 2,06,963 of 2,09,793 mapped voters (98.67%), with 75,931 forms already filled and digitised. Electoral Registration Officer S.S. Abeed said 1,151 voters have been identified as ineligible (relocated, deceased, or duplicate registrations) and will be reviewed once more before final removal.
ಸಂಬಂಧಿತ ಸುದ್ದಿಗಾಗಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(SIR) ಕಾರ್ಯ ವೀಕ್ಷಿಸಿ.
FAQ
ಎಸ್.ಐ.ಆರ್ ಎಂದರೇನು?
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision) ಎಂದರೆ ಅನರ್ಹ, ಮೃತಪಟ್ಟ ಅಥವಾ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಿ ಪಟ್ಟಿ ಪರಿಷ್ಕರಿಸುವ ಪ್ರಕ್ರಿಯೆ.
1151 ಮಂದಿ ಮತದಾರರ ಮುಂದಿನ ಹಂತ ಏನು?
ಎಸ್.ಐ.ಆರ್ ಕಾರ್ಯ ಮುಗಿಯುವ ಅವಧಿಯೊಳಗೆ ಅವರ ವಾಸ್ತವ ಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮವಾಗಿ ಅನರ್ಹಗೊಳಿಸಲಾಗುವುದು.








