21.1 C
Sidlaghatta
Saturday, July 27, 2024

ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ

ಉಚಿತ ಪಠ್ಯಪುಸ್ತಕ, ಸವಲತ್ತುಗಳ ವಿತರಣೆ

- Advertisement -
- Advertisement -

Sidlaghatta : ತಾಲ್ಲೂಕಿನೆಲ್ಲೆಡೆ ಸರ್ಕಾರಿ ಶಾಲೆಗಳ ಪ್ರಾರಂಭೋತ್ಸವಕ್ಕೆ ಸಕಲಸಿದ್ಧತೆ ನಡೆದಿದೆ. ಈಗಾಗಲೇ ಮೇ 29 ರಿಂದಲೇ ಶಾಲೆಗಳು ಆರಂಭಗೊಂಡಿದ್ದು ಸ್ವಚ್ಚತೆ, ಪೂರ್ವಸಿದ್ಧತೆ ಕಾರ್ಯಗಳು ಪೂರ್ಣಗೊಂಡು ಉತ್ತಮ ಕಲಿಕಾ ಪರಿಸರವನ್ನು ಪುನರ್ ಸೃಷ್ಟಿಸಿಕೊಂಡು ವಿದ್ಯಾರ್ಥಿಗಳನ್ನು ಕೈಬೀಸಿಕರೆಯುವಂತಿವೆ.

ಮೇ 31 ರಂದು ಬೆಳಿಗ್ಗೆಯಿಂದಲೇ ಅಧಿಕೃತವಾಗಿ ಪ್ರಾರಂಭೋತ್ಸವಕ್ಕೆ ಶಾಲೆಗಳನ್ನು ಮಾವಿನ ಸೊಪ್ಪು ತೋರಣ, ಬಾಳೆಕಂದುಗಳಿಂದ ಅಲಂಕರಿಸುತ್ತಿದ್ದು ವಿದ್ಯಾರ್ಥಿಗಳನ್ನು ಗುಲಾಬಿ, ಸಿಹಿತಿಂಡಿ ನೀಡಿ ಸ್ವಾಗತಿಸಲಾಗುವುದು. ನಂತರ ನಡೆಯುವ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಎಸ್‌.ಡಿ.ಎಂ.ಸಿ ಪದಾಧಿಕಾರಿಗಳು, ಗ್ರಾಮಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿ ಉಚಿತ ಸಮವಸ್ತ್ರ, ಪಠ್ಯಪುಸ್ತಕಗಳಲ್ಲದೇ ದಾನಿಗಳಿಂದ ನೋಟ್‌ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಲು ಶಾಲೆಗಳಲ್ಲಿ ವ್ಯವಸ್ಥೆ ಮಾಡಿಕೊಳ್ಲಲಾಗಿದೆ ಎಂದು ತಿಳಿದುಬಂದಿದೆ.

ಶೈಕ್ಷಣಿಕ ಬಲವರ್ಧನೆ ವರ್ಷ: ಇಲಾಖೆಯು ಈ ವರ್ಷವನ್ನು ಶೈಕ್ಷಣಿಕ ಬಲವರ್ಧನೆ ವರ್ಷವೆಂದು ಘೋಷಿಸಿದ್ದು, ಸರ್ಕಾರಿ ಶಾಲಾ ಮುಖ್ಯಶಿಕ್ಷಕರಿಗೆ ಈಗಾಗಲೇ ಒಂದು ದಿನದ ಕಾರ್ಯಾಗಾರ ಮಾಡಿ ದಾಖಲಾತಿ ಹೆಚ್ಚಳ, ವರ್ಷಪೂರ್ತಿ ಗುಣಾತ್ಮಕ ಶಿಕ್ಷಣ ನೀಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತರಬೇತಿ ನೀಡಲಾಗಿದೆ. ಅದೇ ನೆಲೆಗಟ್ಟಿನಲ್ಲಿ ಶಾಲೆಗಳಲ್ಲಿ ಈಗಾಗಲೇ ಶೈಕ್ಷಣಿಕ ಅಭಿವೃದ್ಧಿ ಯೋಜನೆ, ಕ್ರಿಯಾಯೋಜನೆ, ವೇಳಾಪಟ್ಟಿ ಮತ್ತಿತರ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಈಗಾಗಲೇ ಒಂದೆರಡು ಶೀರ್ಷಿಕೆ ಹೊರತುಪಡಿಸಿ ಇನ್ನುಳಿದ ಬಹುತೇಕ ಪಠ್ಯಪುಸ್ತಕಗಳು ಶಾಲೆಗಳಿಗೆ ಸರಬರಾಜಾಗಿದ್ದು ಆರಂಭದಿಂದಲೇ ಪೂರ್ವಪರೀಕ್ಷೆ, ನೈದಾನಿಕ ಪರಿಹಾರ ಬೋಧನೆ, ಸಾಫಲ್ಯಪರೀಕ್ಷೆ, ಪಠ್ಯಬೋಧನೆ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಲಾಗಿದೆ. ಪ್ರತಿ ವಿದ್ಯಾರ್ಥಿಗೆ ಎರಡು ಜೊತೆ ಸಮವಸ್ತ್ರಗಳನ್ನು ಈಗಾಗಲೇ ವಿತರಿಸಿದ್ದು ನಾಳೆಯಿಂದಲೇ ಹೊಸಸಮವಸ್ತ್ರ ಧರಿಸಿ ವಿದ್ಯಾಥಿಗಳ ಆಗಮನವಾಗುವ ನಿರೀಕ್ಷೆ ಹೊಂದಲಾಗಿದೆ.

ಮಿಂಚಿನ ಸಂಚಾರ: ಶಾಲೆಗಳಲ್ಲಿ ಹೊಸ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಚುರುಕುಗೊಳಿಸಿ ಮಾರ್ಗದರ್ಶನ ನೀಡಲು ತಾಲ್ಲೂಕಿನಲ್ಲಿ ಸಿ.ಆರ್‌.ಪಿ, ಬಿ.ಆರ್‌.ಪಿ, ಇಸಿಒಗಳನ್ನೊಳಗೊಂಡ ತಂಡಗಳನ್ನು ರಚಿಸಿದ್ದು, ಜೂನ್-3 ರಿಂದ ಎಲ್ಲಾ ಶಾಲೆಗಳಿಗೆ ಮಿಂಚಿನ ಸಂಚಾರದ ಮೂಲಕ ಭೇಟಿನೀಡಿ ಸಿದ್ಧತೆಗಳನ್ನು ಪರಿಶೀಲಿಸಿ ಮಾರ್ಗದರ್ಶನ ಮಾಡುವ ಬಗ್ಗೆ ಕ್ರಮವಹಿಸಲಾಗಿದೆ.

ಮನೆಮನೆ ಭೇಟಿ: ಮೇ 29 ರಿಂದಲೇ ಶಾಲೆಗಳು ತೆರೆದಿದ್ದರೂ ಇನ್ನೂ ಶಾಲೆಗೆ ಬಾರದೆ ಇರುವ ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರ ತಂಡವು ಭೇಟಿನೀಡಿ ಮನವೊಲಿಸಿ ಶಾಲೆಗೆ ಕರೆತರುವ ಪ್ರಯತ್ನ ನಡೆದಿದೆ. ಅಂತೆಯೇ ಅರ್ಹ ವಯಸ್ಸಿನ ಯಾವೊಬ್ಬ ವಿದ್ಯಾರ್ಥಿಯೂ ಶಾಲೆಶಿಕ್ಷಣದಿಂದ ಹೊರಗುಳಿಯದಂತೆ ನೋಡಿಕೊಳ್ಳಲು ದಾಖಲಾತಿ ಆಂದೋಲನ ನಡೆಯುತ್ತಿದೆ.

For Daily Updates WhatsApp ‘HI’ to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!