Home News ಲೋಕ ಕಲ್ಯಾಣಕ್ಕಾಗಿ ಗ್ರಾಮ ದೇವತೆಗಳ ಉತ್ಸವ

ಲೋಕ ಕಲ್ಯಾಣಕ್ಕಾಗಿ ಗ್ರಾಮ ದೇವತೆಗಳ ಉತ್ಸವ

0
Sidlaghatta Taluk Kakachokkandahalli Gods Pooja

ಶಿಡ್ಲಘಟ್ಟ ತಾಲ್ಲೂಕಿನ ಕಾಕಚೊಕ್ಕಂಡಹಳ್ಳಿಯಲ್ಲಿ ಲೋಕ ಕಲ್ಯಾಣ ಹಾಗೂ ರಾಸುಗಳ ಶ್ರೇಯಸ್ಸಿಗಾಗಿ ನಾನಾ ಗ್ರಾಮಗಳ ಗ್ರಾಮ ದೇವತೆಗಳ ಉತ್ಸವವನ್ನು ನಡೆಸಲಾಯಿತು.

ಜನ ಜಾನುವಾರು ರಕ್ಷಣೆ, ಗ್ರಾಮದಲ್ಲಿ ಶಾಂತಿ ಸುಖ ನೆಮ್ಮದಿ ನೆಲೆಸಲು ಗ್ರಾಮ ದೇವತೆಗಳಾದ ವೆಂಕಟರಮಣಸ್ವಾಮಿ, ಚನ್ನರಾಯಸ್ವಾಮಿ, ಭಕ್ತರಹಳ್ಳಿಯ ಸಪ್ಪಲಮ್ಮದೇವಿ, ದೊಡ್ಡಮ್ಮದೇವಿ, ಮಾರಮ್ಮದೇವಿ, ತಾತಹಳ್ಳಿಯ ಗಂಗಮ್ಮದೇವಿಯ ಉತ್ಸವ ನಡೆಸಲಾಯಿತು.

ಉತ್ಸವ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಅಲಂಕೃತ ವಾಹನಗಳಲ್ಲಿಟ್ಟು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಊರಿನ ಪ್ರತಿಯೊಬ್ಬರು ಮನೆ ಮನೆಗೂ ಉತ್ಸವ ಬಂದಾಗ ಪೂಜೆ ಸಲ್ಲಿಸಿ ನಮಿಸಿ ಇಷ್ಟಾರ್ಥಗಳು ಈಡೇರಲೆಂದು ಪ್ರಾರ್ಥಿಸಿದರು.  ನಾನಾ ಕಲಾ ತಂಡಗಳು, ಸೂಲಿಬೆಲೆಯ ನಾಗವಾರ ಗ್ರಾಮದ ಪಂಡರಿ ಭಜನೆ ಕಲಾ ತಂಡವು ಉತ್ಸವಕ್ಕೆ ಇನ್ನಷ್ಟು ಮೆರಗು ನೀಡಿತ್ತು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version