Home News ಸತತವಾಗಿ ಸುರಿದ ಮಳೆಯಿಂದ ಕುಸಿದು ಬಿದ್ದ ಹಳೆಯ ಮನೆಗಳು

ಸತತವಾಗಿ ಸುರಿದ ಮಳೆಯಿಂದ ಕುಸಿದು ಬಿದ್ದ ಹಳೆಯ ಮನೆಗಳು

0
Sidlaghatta Taluk Rain House Damages

ಶಿಡ್ಲಘಟ್ಟ ತಾಲ್ಲೂಕಿನೆಲ್ಲೆಡೆ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಹಳೆಯ ಮನೆಗಳು ಹಲವೆಡೆ ಕುಸಿದಿವೆ.

 ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಮೂರು ಮನೆಗಳು ಹಾನಿಯಾಗಿದ್ದರೆ, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 14 ಮನೆಗಳು, ಮೇಲೂರು ಗ್ರಾಮ ಪಂಚಾಯಿತಿಯ ಕಂಬದಹಳ್ಳಿಯಲ್ಲಿ ಒಂದು ಮನೆ, ಮಳಮಾಚನಹಳ್ಳಿಯಲ್ಲಿ ಒಂದು ಮನೆ ಹಾನಿಗೊಳಗಾಗಿದೆ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಹಾನಿಗೊಳಗಾದವರಿಗೆ ಪಿಡಿಒ ಗಳು ಗ್ರಾಮ ಪಂಚಾಯಿತಿ ವತಿಯಿಂದ ನೆರವನ್ನು ನೀಡಿದ್ದು, ತಾತ್ಕಾಲಿಕವಾಗಿ ವಸತಿ ಏರ್ಪಾಡನ್ನೂ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version