Home News ಶಿಡ್ಲಘಟ್ಟ KSRTC ಬಸ್ ನಿಲ್ದಾಣ ಬಳಿ ಅರಳಿಮರದ ರೆಂಬೆ ಬಿದ್ದು ವ್ಯಕ್ತಿಗೆ ಗಾಯ

ಶಿಡ್ಲಘಟ್ಟ KSRTC ಬಸ್ ನಿಲ್ದಾಣ ಬಳಿ ಅರಳಿಮರದ ರೆಂಬೆ ಬಿದ್ದು ವ್ಯಕ್ತಿಗೆ ಗಾಯ

0
Sidlaghatta Tree Fall KSRTC Bus Stand

Sidlaghatta : ಶಿಡ್ಲಘಟ್ಟ ನಗರದ ಪ್ರಮುಖ ವ್ಯಾಪಾರ ಮತ್ತು ಸಂಚಾರದ ಪ್ರದೇಶವಾಗಿರುವ KSRTC ಬಸ್ ನಿಲ್ದಾಣದ ಬಳಿಯ ಸಲ್ಲಾಪುರಮ್ಮ ದೇವಸ್ಥಾನದ ಪಕ್ಕದಲ್ಲಿ ಬುಧವಾರ ಬೆಳಿಗ್ಗೆ ಅರಳಿಮರದ ಒಂದು ದೊಡ್ಡ ರೆಂಬೆ ಕೆಳಗೆ ಬಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು.

ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಆ ರೆಂಬೆ ಬಿದ್ದು ಗಾಯವಾಗಿದ್ದು, ಸ್ಥಳೀಯರು ಕೂಡಲೇ ಆತನಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಒದಗಿಸಿ ಆಸ್ಪತ್ರೆಗೆ ಕರೆದೊಯ್ದರು.

ಸ್ಥಳೀಯರು ಮಾತನಾಡಿ, ಇದು ಬಹುಜನ ಸಂಚಾರದ ಪ್ರದೇಶ. ಇಲ್ಲಿ ಕೆ.ಎಸ್‌.ಆರ್‌.ಟಿ.ಸಿ ಬಸ್ ನಿಲ್ದಾಣವಿದ್ದು, ಯಾವಾಗಲೂ ಜನ ಸೇರಿರುತ್ತಾರೆ. ಈ ರೀತಿಯಲ್ಲಿ ಮರದ ರೆಂಬೆ ಬಿದ್ದು ಅಪಾಯವಾಗಿರುವುದು ಭಯಹುಟ್ಟಿಸಿದೆ. ನಗರಸಭೆ , ಬೆಸ್ಕಾಂ ಅಧಿಕಾರಿಗಳು ಮರಗಳ ಪರಿಶೀಲನೆ ಮಾಡಿ, ಅವು ಸುರಕ್ಷಿತವಾಗಿಲ್ಲ ಎಂದರೆ ಮುಂಚಿತವಾಗಿ ತೆಗೆದು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ನಗರಸಭೆ ಹಾಗೂ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಇಂತಹ ಘಟನೆಗಳು ನಡೆಯದ ಹಾಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version