Home News ಶಿಡ್ಲಘಟ್ಟದಲ್ಲಿ ಶ್ರೀ ವಾಸವಿ ಜಯಂತಿ ಆಚರಣೆ

ಶಿಡ್ಲಘಟ್ಟದಲ್ಲಿ ಶ್ರೀ ವಾಸವಿ ಜಯಂತಿ ಆಚರಣೆ

0
Sidlaghatta Vasavi Jayanti Celebration

Sidlaghatta : ಶಿಡ್ಲಘಟ್ಟ ನಗರದಲ್ಲಿ ಆರ್ಯವೈಶ್ಯ ಮಂಡಳಿ ಹಾಗೂ ಸಂಬಂಧಿತ ಸಹಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಶ್ರೀ ವಾಸವಿ ಜಯಂತಿಯನ್ನು ವೈಭವದಿಂದ ಆಚರಿಸಲಾಯಿತು. ವಾಸವಿ ಮಹಿಳಾ ಮಂಡಳಿ ಮತ್ತು ಭಜನಾ ಮಂಡಳಿಯ ಸದಸ್ಯೆಯರು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಾಗವಹಿಸಿದರು.

ಆರಂಭದಲ್ಲಿ ಆರು ತಿಂಗಳ ಮಗುವಿನಿಂದ ಎಂಟು ವರ್ಷವರೆಗೆ ಇರುವ ಬಾಲಿಕೆಯರಿಗೆ ಕನ್ಯಕಾ ಪೂಜೆ ನೆರವೇರಿಸಲಾಯಿತು. ವಾಸವಿ ಮಾತೆಯ ಚರಿತ್ರೆಯ ಪಠಣ, ಉಯ್ಯಾಲೆ ಉತ್ಸವ, ಪಂಚಾರತಿ ಕಾರ್ಯಕ್ರಮಗಳು ಭಕ್ತಿಭಾವದಿಂದ ತುಂಬಿದ್ದವು. ವಾಸವಿ ಮಾತೆಗೆ ನಾಣ್ಯದ ತುಲಾಭಾರ ಕೂಡ ನಡೆಸಲಾಯಿತು.

ವಾಸವಿ ಯುವಜನ ಸಂಘದ ವತಿಯಿಂದ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಆಯೋಜಿಸಲಾಗಿದ್ದು, ರಾಮಾಯಣ ಮತ್ತು ಮಹಾಭಾರತದ ದೃಶ್ಯಾವಳಿಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ವಾಸವಿ ವಿದ್ಯಾಸಂಸ್ಥೆಯ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ ನಡೆಯಿತು. ದೇವಿಯ ಅಲಂಕಾರ ವಿಶೇಷ ಆಕರ್ಷಣೆಯಾಗಿ ಕಂಗೊಳಿಸಿತು.

ಸಂಜೆಯ ವೇಳೆ ಮುತ್ತಿನ ಪಲ್ಲಕ್ಕಿ ಉತ್ಸವವು ಭಕ್ತರ ಆನಂದವನ್ನು ಮತ್ತಷ್ಟು ಹೆಚ್ಚಿಸಿತು. ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಮಹೇಶ್ ಬಾಬು, ಕಾರ್ಯದರ್ಶಿ ರೂಪಸಿ ರಮೇಶ್, ಅರವಿಂದ್, ಜಯಶ್ರೀ ಕೇದಾರನಾಥ್, ಶರತ್ ಬಾಬು, ಸಂದೀಪ್ ರಾಜ್, ಮಮತಾ ಮಂಜುನಾಥ್, ಟಿ.ಎ.ಕೆ. ಶೆಟ್ಟಿ ಮತ್ತು ಗಜಲಕ್ಷ್ಮಿ ನಾಗಭೂಷಣ್ ಅವರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version