22.1 C
Sidlaghatta
Thursday, October 6, 2022

ಶುದ್ಧ ನೀರಿನ ಘಟಕದ ಕಾಯಿನ್ ಬಾಕ್ಸ್ ಕಳವು

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿಯ ರಾಚಹಳ್ಳಿ ಗ್ರಾಮದಲ್ಲಿನ ಶುದ್ಧ ನೀರಿನ ಘಟಕದಲ್ಲಿ ನೀರು ಹಿಡಿಯಲು ಅಳವಡಿಸಿದ್ದ 5 ರೂ ಕಾಯಿನ್ ಹಾಕುವ ಬಾಕ್ಸನ್ನು ಕಳ್ಳರು ಕದ್ದೊಯ್ದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ರಾಚಹಳ್ಳಿ ಗ್ರಾಮದಲ್ಲಿ ಜನ ಸಂಚಾರ ಇರುವ ಕಡೆ ಈ ಶುದ್ದ ಕುಡಿಯುವ ನೀರಿನ ಘಟಕವಿದ್ದು ಕುಡಿಯುವ ನೀರಿನ ಒಂದು ಕ್ಯಾನ್ ಹಿಡಿದುಕೊಳ್ಳಲು ಕಾಯಿನ್ ಬಾಕ್ಸ್ ಗೆ ಐದು ರೂ ಗಳ ಕಾಯಿನ್ ಹಾಕಬೇಕಿತ್ತು. ಕಳೆದ 8 ತಿಂಗಳಿಂದಲೂ ಕಾಯಿನ್‌ಗಳು ಸಂಗ್ರಹವಾಗಿತ್ತು ಎನ್ನಲಾಗಿದೆ.

ರಾತ್ರಿ ಯಾರೋ ದುಷ್ಕರ್ಮಿಗಳು ಕಾಯಿನ್ ಬಾಕ್ಸನ್ನು ಕದ್ದೊಯ್ದಿದ್ದು ಸಮೀಪವೇ ಬಯಲಲ್ಲಿ ಬಾಕ್ಸ್ ನ್ನು ಹೊಡೆದು ಅದರಲ್ಲಿನ ಹಣ ತೆಗೆದುಕೊಂಡು ಖಾಲಿ ಬಾಕ್ಸನ್ನು ಅಲ್ಲಿ ಬಿಸಾಡಿ ಹೋಗಿದ್ದಾರೆ. ಗ್ರಾಮಸ್ಥರು ಇದೀಗ ಶುದ್ಧ ನೀರಿಲ್ಲದೆ ಪರದಾಡುವಂತಾಗಿದೆ. ದಿಬ್ಬೂರಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here