Varadanayakanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ 13ನೇ ವರ್ಷದ ಶ್ರೀ ಭಕ್ತಾಂಜನೇಯಸ್ವಾಮಿ ದೇವಾಲಯದ ವಾರ್ಷಿಕೋತ್ಸವದಲ್ಲಿ ವರದನಾಯಕನಹಳ್ಳಿ, ಹನುಮಂತಪುರ, ಶಿಡ್ಲಘಟ್ಟ ಮತ್ತು ಚೀಮನಹಳ್ಳಿಗೆ ಸೇರಿದ ಸುಮಾರು ಇಪ್ಪತ್ತು ಜನರು ಕೋಲಾಟದ ಗುರುಗಳಾದ ಹಾರೋಹಳ್ಳಿ ಇ. ಮುನಿಶಾಮಪ್ಪ ಮತ್ತು ಎಚ್.ಎನ್ ಸುಬ್ಬರಾಯಪ್ಪ ಅವರಿಂದ ಕೋಲಾಟ ಕಲಿತು ಪ್ರದರ್ಶನ ನೀಡಿದರು.
ಜನಪದ ಕಲಾವಿದ ಈ ಧರೆ ಪ್ರಕಾಶ್ ಮಾತನಾಡಿ, ಗ್ರಾಮೀಣ ಜನರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳು ಮುಗಿಸಿ ಸಂಜೆ ವೇಳೆ ಜನಪದ ಕಲೆಗಳನ್ನು ಪ್ರದರ್ಶಿಸುತ್ತಿದ್ದರು. ಕಲೆಗಳು ಮರೆಯಾಗುತ್ತಿರುವ ದಿನಗಳಲ್ಲಿ ಮತ್ತೆ ನಮ್ಮ ಗ್ರಾಮದಲ್ಲಿ ಕೋಲಾಟ ಕಲೆ ಮರುಕಳಿಸಿದೆ. ನಾನು ಸಹ ಅವರೊಂದಿಗೆ ಕೋಲಾಟ ಕಲಿತು ಪ್ರದರ್ಶನ ನೀಡಿದ್ದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಹನುಮಂತಪುರ ಗ್ರಾಮದ ಶ್ರೀಕೃಷ್ಣಸ್ವಾಮಿ ದೇವಾಲಯದ ಬಳಿ ಕಳೆದ ಒಂದು ತಿಂಗಳಿನಿಂದ ತರಬೇತಿ ಪಡೆದು ಮೊದಲ ಬಾರಿಗೆ ಕೋಲಾಟ ಪ್ರದರ್ಶನ ನೀಡಲಾಯಿತು.
ಕೋಲಾಟ ತರಬೇತಿ ಪಡೆದು ಪ್ರದರ್ಶನ ನೀಡಿದ ಹನುಮಂತಪುರ ಗಾಯಿತ್ರಮ್ಮ, ಹನುಮಂತರೆಡ್ಡಿ, ವಿಮಲಮ್ಮ, ನಾಗಮ್ಮ, ಭವ್ಯಶ್ರಿ, ಆರ್ಮೋನಿಯಂ ಕಲಾವಿದ ಮುನಿರೆಡ್ಡಿ, ವರದನಾಯಕನಹಳ್ಳಿ ಪ್ರಭಾಕರ್, ದ್ಯಾವಣ್ಣ, ನೇತ್ರ, ಇನಿ, ವಿಟಿ, ಜವನಿ ವಿ.ಟಿ, ಚೀಮನಹಳ್ಳಿ ಭಾಗ್ಯಮ್ಮ, ರಾಧಮ್ಮ, ಶಾಮಲಮ್ಮ, ಮಂಜಮ್ಮ, ತಬಲಾ ಕಲಾವಿದ ರಮೇಶ್, ಶಿಡ್ಲಘಟ್ಟ ನಗರದ ಮಂಗಳ, ಕನ್ಯಪ್ಪ, ಗಿರಿಜಮ್ಮ, ಗೀತಾ ಹಾಜರಿದ್ದರು.








