Sidlaghatta : ತಾಲ್ಲೂಕಿನ ದೇವರಮಳ್ಳೂರು ಸಮೀಪದ ಗುಮ್ಮನಹಳ್ಳಿಯಲ್ಲಿ ಶ್ರೀ ಮುನೇಶ್ವರ ಸ್ವಾಮಿ ಪುನರ್ ಪ್ರತಿಷ್ಠಾಪನೆ ಹಾಗೂ ಮಹತ್ವದ ಧಾರ್ಮಿಕ ಕಾರ್ಯಕ್ರಮ ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ರಾತ್ರಿ ಹೋಮ-ಹವನಗಳು ನಡೆದಿದ್ದು, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮುನೇಶ್ವರ ಸ್ವಾಮಿಯ ಮೆರವಣಿಗೆ ನಡೆಸಲಾಯಿತು. ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ವಿಧಿಗಳು ನೆರವೇರಿದವು. ಗಂಗಾದೇವಿ ಹಾಗೂ ಮುನೇಶ್ವರ ಸ್ವಾಮಿಗೆ ಅಭಿಷೇಕ ನೆರವೇರಿಸಿ, ವಿಶೇಷ ಅಲಂಕಾರ ಮಾಡಲಾಯಿತು.
ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಅರ್ಚಕ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಗ್ರಾಮದ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
In English: A two-day re-consecration and religious programme for Sri Muneshwara Swamy was held with devotion at Gummanahalli, near Devaramallur in Sidlaghatta taluk. The event featured night homa-havanas and a procession of the deity through the village’s main streets, followed by a Ganapati homa and other rituals at dawn, with abhisheka and special decoration for Gangadevi and Muneshwara Swamy. Priest Krishnappa led the religious rites, after which theertha prasada was distributed to the large number of devotees and residents who took part.
ಇದೇ ಮುನೇಶ್ವರ ಸ್ವಾಮಿಗೆ ಸಂಬಂಧಿಸಿದ ಸಾಂಪ್ರದಾಯಿಕ ಆಚರಣೆಯ ಬಗ್ಗೆ ರೈತ ಸಂಪ್ರದಾಯದ ಮುನೀಶ್ವರಸ್ವಾಮಿ ಮತ್ತು ಅಕ್ಕಾಯಮ್ಮನವರ ಪೂಜೆ ಎಂಬ ಲೇಖನವನ್ನೂ ಓದಿ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ಇಂತಹುದೇ ಮತ್ತೊಂದು ಗ್ರಾಮ ದೇವತಾ ಉತ್ಸವದ ಬಗ್ಗೆ ಚೀಮಂಗಲ ಗ್ರಾಮದಲ್ಲಿ 9 ದಿನಗಳ ದೇವರುಗಳ ಉತ್ಸವಕ್ಕೆ ತೆರೆ ಎಂಬ ವರದಿಯನ್ನೂ ಓದಿ.








