ಇಡೀ ವಿಶ್ವವನ್ನೇ ಆವರಿಸಿಕೊಂಡಿರುವ ಕೊರೊನಾ ಸಂಕಷ್ಟಕಾಲದಲ್ಲಿ ಕೋವಿಡ್-19 ಕುರಿತು ಜಾಗೃತಿಮೂಡಿಸುವಲ್ಲಿ ಶಿಕ್ಷಕರ ಸೇವೆಯೂ ಅನನ್ಯವಾದುದು ಎಂದು ಬೆಂಗಳೂರಿನ ಗಾಂಧಿಭವನದ ಕರ್ನಾಟಕ ಗಾಂಧಿಸ್ಮಾರಕ ನಿಧಿಯ ಗೌರವಕಾರ್ಯದರ್ಶಿ ಇಂದಿರಾಕೃಷ್ಣಪ್ಪ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಭೇಟಿನೀಡಿ, ಕೊರೋನಾ ಜಾಗೃತಿ ಕುರಿತು ರಚಿಸಿರುವ ಗೋಡೆಬರಹವನ್ನು ವೀಕ್ಷಿಸಿ, ಶಿಕ್ಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಕರೂ ಮನೆಮನೆ ಸಮೀಕ್ಷೆ, ಸೋಂಕಿತರ ಸಂಪರ್ಕಿತರ ಮಾಹಿತಿ ಪಡೆದು ಪಟ್ಟಿ ತಯಾರಿಸಿ ಕೊರೊನಾ ತಡೆಯಲ್ಲಿ ಶ್ರಮಿಸುತ್ತಿದ್ದಾರೆ. 15 ವರ್ಷದೊಳಗಿನ ಎಲ್ಲಾ ಮಕ್ಕಳು ಶಾಲೆಯಲ್ಲಿಯೇ ಕಲಿಯುತ್ತಿರುವುದರಿಂದ ಕಳೆದ ಮಾರ್ಚಿಯ ವೇಳೆಗೆ ಕೊರೊನಾ ಕುರಿತು ಶಿಕ್ಷಕರು ಮಕ್ಕಳಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ. ಅದರಿಂದಾಗಿ ಮನೆ, ಕುಟುಂಬದ ಸದಸ್ಯರಿಗೂ ಕೊರೊನಾ ನಿಯಂತ್ರಣ ಕುರಿತ ಅರಿವು ಎಲ್ಲರಲ್ಲಿಯೂ ಹರಡಿದೆ. ಇದರಿಂದಾಗಿ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯುವುದರಲ್ಲಿ ಶಿಕ್ಷಕರ ಶ್ರಮ ಅಧಿಕವಾಗಿದೆ ಎಂದರು.
ವಠಾರಶಾಲೆಗೆ ದೂರದರ್ಶಿತ್ವವಿದೆ : ಸರ್ಕಾರ, ಶಿಕ್ಷಣ ಇಲಾಖೆಯು ಇಂತಹ ಸಂಕಷ್ಟಪರಿಸ್ಥಿತಿಯಲ್ಲಿ ಶಿಕ್ಷಣ, ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳಲು ಜಾರಿಗೊಳಿಸಿರುವ ವಿದ್ಯಾಗಮ-ವಠಾರಶಾಲೆಯ ಯೋಜನೆಯು ದೂರದರ್ಶಿತ್ವವನ್ನು ಹೊಂದಿದೆ. ಗ್ರಾಮಾಂತರ ಪ್ರದೇಶದಲ್ಲಿನ ಮಕ್ಕಳ ಕಲಿಕೆಗೆ ವಠಾರಶಾಲೆಯು ಪ್ರಯೋಜನಕಾರಿಯಾಗಿದ್ದು, ಮಾಮೂಲಿನ ಶಿಕ್ಷಣದಂತೆಯೇ ಶೈಕ್ಷಣಿಕಚಟುವಟಿಕೆಗಳನ್ನು ದೈಹಿಕ ದೂರವಿರಿಸಿ ಮಾಡಬಹುದಾಗಿದೆ ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಕಳೆದ ನಾಲ್ಕೈದು ತಿಂಗಳಿಂದಲೂ ಕೊರೋನಾ ಜಾಗೃತಿ ಮೂಡಿಸುವುದು, ನಿರಂತರವಾಗಿ ಮಕ್ಕಳಿಗೆ ದಿನಸಿ ವಿತರಣೆ, ಅಂಗವಿಕಲ ಮಕ್ಕಳಿಗೆ ಆಹಾರ ಮತ್ತು ಔಷಧಿಕಿಟ್ ವಿತರಣೆ, ಮಾಸ್ಕ್‌ಗಳ ವಿತರಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಉಚಿತ ಪಠ್ಯಪುಸ್ತಕಗಳನ್ನು ವಿತರಿಸಿದ್ದು, ವಠಾರಶಾಲೆ ಯೋಜನೆಯಡಿ ಈಗಾಗಲೇ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಾಗಿದೆ ಎಂದರು.
ರಾಷ್ಟ್ರೀಯ ಯುವಯೋಜನೆ ರಾಜ್ಯ ಸಂಯೋಜಕ ವಿ.ಪ್ರಶಾಂತ್, ಎಸ್‌ಡಿಎಂಸಿ ಸದಸ್ಯೆ ಕೆ.ವಿನುತಾ, ಮುಖ್ಯಶಿಕ್ಷಕಿ ಎಂ.ಉಮಾದೇವಿ, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಎನ್‌ಎಸ್‌ಎಸ್ ಸ್ವಯಂಸೇವಕ ವರುಣ್, ಗಾಂಧಿಭವನದ ಮೆಹಬೂಬ್ ಹಾಜರಿದ್ದರು.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi