Home News ಅಂಗಾಂಗ ವೈಫಲ್ಯಕ್ಕೊಳಗಾಗಿರುವ ಯುವಕನ ತಾಯಿಗೆ ತಾಲ್ಲೂಕು ಕಚೇರಿ ಸಿಬ್ಬಂದಿ ನೆರವು

ಅಂಗಾಂಗ ವೈಫಲ್ಯಕ್ಕೊಳಗಾಗಿರುವ ಯುವಕನ ತಾಯಿಗೆ ತಾಲ್ಲೂಕು ಕಚೇರಿ ಸಿಬ್ಬಂದಿ ನೆರವು

0
Sidlaghatta Taluk Office Staff Help

ಶಿಡ್ಲಘಟ್ಟ ತಾಲ್ಲೂಕು ಕಚೇರಿಯಲ್ಲಿ ಅಂಗಾಂಗ ವೈಫಲ್ಯಕ್ಕೊಳಗಾಗಿರುವ ನವೀನ್ ಕುಮಾರ್ ರವರ ತಾಯಿಯವರಿಗೆ ತಾಲ್ಲೂಕು ಕಚೇರಿ ಸಿಬ್ಬಂದಿ ರೇಷನ್ ಹಾಗೂ ಆರ್ಥಿಕ ಸಹಾಯ ನೀಡಿದರು.

ಅಂಗಾಂಗ ವೈಫಲ್ಯದಿಂದ ನರಳುತ್ತಿರುವ ನಗರದ ಕದ್ರಿ ಪಾಳ್ಯದ 13 ನೇ ವಾರ್ಡ್‍ನ ನವೀನ್ ಕುಮಾರ್ ರವರ ತಾಯಿಗೆ ಮಗನ ಚಿಕಿತ್ಸೆಗೆ ಸರ್ಕಾರದಿಂದ ಹಾಗೂ ವೈಯಕ್ತಿತವಾಗಿ ಕೈಲಾದಷ್ಟು ಸಹಾಯ ಮಾಡುವುದಾಗಿ ತಹಶೀಲ್ದಾರ್ ಡಿ.ಎಸ್.ರಾಜೀವ್ ಭರವಸೆ ನೀಡಿದರು

ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಕೈಲಾದಷ್ಟು ಸಹಾಯ ನೀಡಿ ಅವರನ್ನೂ ಸಮಾಜದಲ್ಲಿ ಜೀವನ ಮಾಡಲು ಅನುವು ಮಾಡಿಕೊಡಬೇಕು ಎಂದರು.

ತಾಲ್ಲೂಕು ಕಚೇರಿ ಸಿಬ್ಬಂದಿ ಎಲ್ಲ ಒಗ್ಗೂಡಿ ಅಕ್ಕಿ, ಗೋದಿ, ಗೋದಿಹಿಟ್ಟು, ಬೇಳೆ, ಎಣ್ಣೆ, ಸೇರಿದಂತೆ ದಿನಸಿ ಸಾಮಾಗ್ರಿಗಳನ್ನು ಸಂಗ್ರಹಿಸಿ ಹಾಗೂ ಆರ್ಥಿಕ ಸಹಾಯವನ್ನು ನವೀನ್ ಕುಮಾರ್ ತಾಯಿಗೆ ನೀಡಿದ್ದಾರೆ.

ತಾಲ್ಲೂಕು ಕಚೇರಿ ಆರ್.ಆರ್.ಟಿ. ಶಿರಸ್ತೆದಾರ ಮಂಜುನಾಥ್, ಪುಡ್ ಶಿರಸ್ತೆದಾರ್ ಧನಲಕ್ಷ್ಮಿ, ರಾಮಪ್ರಸಾದ್, ಮಂಜುನಾಥ್, ಅಮರೇಶ್, ಭವ್ಯ, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

Follow ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Twitter: https://twitter.com/hisidlaghatta

Instagram: https://www.instagram.com/sidlaghatta

Telegram: https://t.me/Sidlaghatta

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version