Home News ಕಾಲ್ನಡಿಗೆಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಹೊರಟ ಭಕ್ತರು

ಕಾಲ್ನಡಿಗೆಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಹೊರಟ ಭಕ್ತರು

0

Sidlaghatta : ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿಂದ ತಿರುಪತಿ ತಿಮ್ಮಪ್ಪನ ಸನ್ನಿಧಾನದವರೆಗೆ ಪಾದಯಾತ್ರೆಯನ್ನು ಕೈಗೊಂಡಿರುವ ತಿಮ್ಮಪ್ಪನ ಭಕ್ತಾದಿಗಳು ಶನಿವಾರ ಮುಂಜಾನೆ ಶಿಡ್ಲಘಟ್ಟ ನಗರದ ರಾಷ್ಟ್ರೀಯ ಹೆದ್ದಾರಿ 234ರ ರಸ್ತೆ ಮೂಲಕ ನೆಡೆದುಕೊಂಡು, ತಿಮ್ಮಪ್ಪನ ದರ್ಶನಕ್ಕೆ ಭಕ್ತಾದಿಗಳು ಹೊರಟರು. ತಾಲ್ಲೂಕಿನ ವೈ.ಹುಣಸೇನಹಳ್ಳಿ ವೃತ್ತದಲ್ಲಿ ಸರ್ಕಾರಿ ಶಾಲೆಯ ಆವರಣದಲ್ಲಿ ಉಪಾಹಾರ ಸೇವಿಸಿ ಚಿಂತಾಮಣಿ ಕಡೆ ಹೊರಟರು.

ಸುಮಾರು 24 ವರ್ಷಗಳಿಂದ, ಪ್ರತಿ ವರ್ಷವೂ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಮಾರ್ಗದಲ್ಲಿ ಭಕ್ತಾದಿಗಳು ಪಾದಯಾತ್ರೆ ಕೈಗೊಳ್ಳುವ ಮೂಲಕ ಹಳೆಯ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿಯಿಂದ ಶ್ರೀಧರಾಚಾರ್ ಮತ್ತು ವಾಸುದೇವ ಆಚಾರ್ ಅಣ್ಣ-ತಮ್ಮಂದಿರು ಇಬ್ಬರಿಂದ ಪ್ರಾರಂಭವಾದ ಪಾದಯಾತ್ರೆ, ಈಗ 100ಕ್ಕೂ ಹೆಚ್ಚು ಜನ ತಿರುಪತಿಗೆ ಹೊರಡುವ ಕಾರ್ಯಕ್ರಮವನ್ನು ರೂಢಿಸಿಕೊಂಡಿದ್ದಾರೆ. ಪಾದಯಾತ್ರೆ ಹೋಗುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಬರುವ ಊರುಗಳಿಂದ ಭಕ್ತಾದಿಗಳು ಸೇರ್ಪಡೆಗೊಂಡು ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಾರೆ.

ಸರಿ ಸುಮಾರು 24 ವರ್ಷಗಳಿಂದ ತಿರುಪತಿಗೆ ಪಾದಯಾತ್ರೆ ಹೊರಡುವಂತಹ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಸುಮಾರು 7ರಿಂದ 8 ದಿನದ ಕಾಲ ಕಾಲ್ನಡಿಗೆಯಲ್ಲಿ ದೇವರ ನಾಮಗಳ ಭಜನೆಗಳು ಮಾಡುತ್ತಾ ಪಾದಯಾತ್ರೆ ಮಾಡುತ್ತೇವೆ. ನಮ್ಮ ಉದ್ದೇಶವೇನೆಂದರೆ ಎಲ್ಲರಿಗೂ ಒಳ್ಳೆಯದಾಗಲಿ, ಮಳೆ ಬೆಳೆ ಚೆನ್ನಾಗಿ ಆಗಲಿ, ಕೊರೊನಾದಂತಹ ಮಾರಿ ಬರದಿರಲಿ ಮತ್ತು ಲೋಕಕಲ್ಯಾಣಕ್ಕಾಗಿ ಈ ಪಾದಯಾತ್ರೆಯನ್ನು ಮಾಡುತ್ತಿದ್ದೇವೆ. ತಿರುಪತಿಯಲ್ಲಿ ವೈಕುಂಟ ಏಕಾದಶಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುತ್ತೇವೆ ಎಂದು ಪಾದಯಾತ್ರೆ ನೇತೃತ್ವ ವಹಿಸಿರುವ ಸುದರ್ಶನ ಸಮಿತಿ ಮುಖ್ಯಸ್ಥ ಶ್ರೀಧರಚಾರ್ ತಿಳಿಸಿದರು

ಪಾದಯಾತ್ರೆಯಲ್ಲಿ ಶ್ರೀಧರಾಚಾರ್, ವಿಜಯ ಶೇಖರ್ ರೆಡ್ಡಿ, ಸುಧಾಕರ್ ರೆಡ್ಡಿ, ಕೃಷ್ಣಮೂರ್ತಿ, ಮುರಳಿ, ನರಸಿಂಹಮೂರ್ತಿ, ಶ್ರೀರಾಮರೆಡ್ಡಿ, ಶಿವು, ಲಕ್ಷ್ಮೀಪತಿ, ಸಂತೋಷ್, ಸಿದ್ದು, ಆದಿ ನಾರಾಯಣ ಸ್ವಾಮಿ, ಶೇಷಗಿರಿ, ರಾಕೇಶ್ ರೆಡ್ಡಿ, ಸತೀಶ, ಅಶೋಕ, ಶ್ರೀನಾಥ್, ಶ್ರೀನಿವಾಸ್ ರೆಡ್ಡಿ ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version