ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಗಸ್ಟ್ 29 ರಂದು ವಚನದಿನವನ್ನಾಗಿ ಆಚರಿಸುತ್ತಿದೆ. ಈ ಕಾರ್ಯಕ್ರಮದ ನಿಮಿತ್ತ ಚಿಕ್ಕಬಳ್ಳಾಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ನನ್ನ ಮೆಚ್ಚಿನ ಶರಣ” ಅಥವಾ “ಶರಣೆ” ಯರಲ್ಲಿ ಒಬ್ಬರನ್ನು ಕುರಿತು 3 ಪುಟಗಳಿಗೆ ಮೀರದಂತೆ ಪ್ರಬಂಧ ಬರೆಯುವ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ “ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಮತ್ತು ಅನುಷ್ಟಾನ” ಎಂಬುದರ ಬಗ್ಗೆ 4 ಪುಟಗಳಿಗೆ ಮೀರದಂತೆ ಪ್ರಬಂಧ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ.
ಆಸಕ್ತರು ಇಮೇಲ್, ವ್ಯಾಟ್ಸಪ್ ಅಥವಾ ವೈಯಕ್ತಿಕವಾಗಿ ಕೆಳಕಂಡ ವಿಳಾಸಕ್ಕೆ ಆಗಸ್ಟ್ 25 ರೊಳಗಾಗಿ ಕಳುಹಿಸಲು ಕೋರಲಾಗಿದೆ. ವಿಜೇತರನ್ನು ಆಗಸ್ಟ್ 29 ರಂದು ನಡೆಯುವ ವಚನದಿನದ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗುವುದು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಎನ್.ಅಮೃತ್ ಕುಮಾರ್ ತಿಳಿಸಿದ್ದಾರೆ.
ವಿಳಾಸ :
ಎಸ್.ಎನ್.ಅಮೃತ್ ಕುಮಾರ್,
ಶೆಟ್ಟಿಹಳ್ಳಿ ಬಡಾವಣೆ, ಮೊದಲನೇ ತಿರುವು,
ಸರ್ಕಾರಿ ಕಾಲೇಜು ಹಿಂಭಾಗ,
ಎಂ.ಜಿ.ರಸ್ತೆ, ಚಿಕ್ಕಬಳ್ಳಾಪುರ 562101.
ಇಮೇಲ್ : raagaamrutha@gmail.com. ಮೊಬೈಲ್ : 9448185215; 9886008478; 9964500991