Home News ಶಾಲಾ ಮಕ್ಕಳೊಂದಿಗೆ ಆಪ್ತ ಸಮಾಲೋಚನೆ

ಶಾಲಾ ಮಕ್ಕಳೊಂದಿಗೆ ಆಪ್ತ ಸಮಾಲೋಚನೆ

0
sidlaghatta vasavi school students consultation

Sidlaghatta : ಶಿಡ್ಲಘಟ್ಟ ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿಗೆ ಒಂದು ದಿನದ ಆಪ್ತ ಸಮಾಲೋಚನ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಬೆಂಗಳೂರು ನಗರದ ಕರ್ನಾಟಕ ಹವ್ಯಾಸಿ ಆಪ್ತ ಸಮಾಲೋಚಕರ ವೇದಿಕೆಯ ವತಿಯಿಂದ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುವ, ಪರೀಕ್ಷಾ ಸಿದ್ಧತೆ ಹಾಗೂ ವಿದ್ಯಾರ್ಥಿಗಳಿಗೆ ದೈನಂದಿನ ಚಟುವಟಿಕೆಗಳನ್ನು ಅಳವಡಿಸಿ ಕೊಳ್ಳುವ ಬಗ್ಗೆ, ಶಾಲೆಯಲ್ಲಿ ನಡವಳಿಕೆಯ ಬಗ್ಗೆ ಪ್ರವಚನಗಳನ್ನು ನೀಡಲಾಯಿತು. ವಿಧ್ಯಾಭ್ಯಾಸದಲ್ಲಿ ಮಂದಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸಮಾಲೋಚನೆ ನಡೆಸಿ ಅವರ ಕುಟುಂಬದ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದು ಪರಿಹಾರ ಸೂಚಿಸಲಾಯಿತು.

ಸಂಸ್ಥೆಯ ಅಧ್ಯಕ್ಷೆ ಡಾ.ಸುವರ್ಣ ಅಮರನಾಥ್ ಮಾತನಾಡಿ, ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಭಾವನಾತ್ಮಕ ವಿಚಾರಗಳ ಕುರಿತು ಒತ್ತಡ ಹೇರಬೇಡಿ. ಸದಾಕಾಲವೂ ಅವರೊಂದಿಗೆ ಸಹಜವಾಗಿಯೇ ಆತ್ಮವಿಶ್ವಾಸವನ್ನು ತುಂಬುತ್ತಲಿರಬೇಕು. ವಿದ್ಯಾರ್ಥಿಗಳ ಆಂತರಿಕ ಸಮಸ್ಯೆಗಳನ್ನು ಕೇಳಿ ಅದಕ್ಕೆ ಸೂಕ್ತವಾದ ರೀತಿಯಲ್ಲಿ ಪರಿಹಾರ ಸೂಚಿಸಬೇಕಾಗಿದೆ ಎಂದರು.

ಪೋಷಕರು ಮಕ್ಕಳಿಗೆ ಕಷ್ಟ ನಷ್ಟಗಳನ್ನು ಹೇಗೆ ಎದುರಿಸಬೇಕೆಂದು ತಿಳಿಸಬೇಕು. ಶಾಲಾ ಕಾಲೇಜುಗಳಲ್ಲಿ ಸೋಲು ನಿರಾಸೆಗಳನ್ನು ಹೇಗೆ ನಿಭಾಯಿಸಬೇಕು, ಮಕ್ಕಳಲ್ಲಿನ ಖಿನ್ನತೆಯ ಬಗ್ಗೆ ಪೋಷಕರಷ್ಟೇ ಜವಾಬ್ದಾರಿ ಶಿಕ್ಷಕರಿಗೂ ಇದ್ದು ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ಗಮನ ಹರಿಸಬೇಕು ಎಂದರು.

ನಿಮ್ಹಾನ್ಸ್ ಆಸ್ಪತ್ರೆಯ ನಿವೃತ್ತ ಪ್ರಾಧ್ಯಾಪಕ ಡಾ.ಎನ್ ಗೋಪಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಮಾತುಗಳನ್ನು ಆಡಬೇಕು. ಹೆಚ್ಚಿನ ಆಸೆ ಆಕಾಂಕ್ಷೆಗಳನ್ನು ಹಾಗೂ ಮೊಬೈಲ್ ಬಳಕೆಯಿಂದಾಗಿ ಆಗುವ ಅನಾಹುತದ ಬಗ್ಗೆ ವಿವರಿಸಿದರು. ಯಾವುದೇ ಕಾರಣಕ್ಕೂ ಮಕ್ಕಳಲ್ಲಿ ಕೀಳರಿಮೆಗೆ ಅವಕಾಶ ಕೊಡಬಾರದು. ಮಕ್ಕಳ ಮನಸ್ಸನ್ನು ಅರಿತು ಅದಕ್ಕೆ ಪರಿಹಾರ ಸೂಚಿಸಬೇಕು. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳ ಅಭ್ಯಾಸದ ಬಗ್ಗೆ ಪರೀಕ್ಷೆಗಳಲ್ಲಿ ಬರೆಯಲು ಅನುಸರಿಸಬೇಕಾದ ವಿಧಾನವನ್ನು ತಿಳಿಸಿದರು.

ಶಾಲಾ ಮಕ್ಕಳೊಂದಿಗೆ ನಡೆದ ಪ್ರಶ್ನೋತ್ತರದಲ್ಲಿ ಮಕ್ಕಳ ಸಂಶಯ ಮತ್ತು ಇತರೆ ಪ್ರಶ್ನೆಗಳಿಗೆ ಸಮಾಲೋಚಕರು ಸಮಾಧಾನಕರ ಉತ್ತರಗಳನ್ನು ನೀಡಿದರು. ಪ್ರಾದ್ಯಾಪಕಿ ಗಾಯತ್ರಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಬಗ್ಗೆ ಹಾಗೂ ಶಿಕ್ಷಕರ ವಿದ್ಯಾರ್ಥಿಗಳ ಭಾಂದವ್ಯದ ಬಗ್ಗೆ ವಿವರಿಸಿದರು.

ಹವ್ಯಾಸಿ ಆಪ್ತ ಸಮಾಲೊಚಕರ ವೇದಿಕೆಯ ನಿರ್ದೇಶಕ ಪ್ರದೀಪ್, ಮಂಜುಳಾ, ಲಕ್ಷ್ಮಣ್ ರಾವ್, ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೂಪಸಿರಮೇಶ್, ಮುಖ್ಯ ಶಿಕ್ಷಕ ಶಿವಕುಮಾರ್, ಸಿ.ಕೆ.ರವಿ ಮತ್ತು ಶಿಕ್ಷಕರು ಕಾರ್ಯಾಗಾರದಲ್ಲಿ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version