ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ ಅಧ್ಯಕ್ಷೆ, ಉಪಾಧ್ಯಕ್ಷೆ ಅವಿರೋಧ ಆಯ್ಕೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಎಸ್. ನಳಿನ ತಿಮ್ಮರಾಯಪ್ಪ ಹಾಗೂ ಉಪಾಧ್ಯಕ್ಷೆಯಾಗಿ ಮುನಿರತ್ನಮ್ಮ ರಾಮಚಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಂಡಿಗನಾಳದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್. ನಳಿನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮುನಿರತ್ನಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಘೋಷಿಸಿದರು.

ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಗೆ ಹೂಮಾಲೆ ಹಾಕಿ, ಸಿಹಿ ಹಂಚುವ ಮೂಲಕ ಅಭಿನಂದಿಸಲಾಯಿತು.

ಕಾಂಗ್ರೆಸ್ ಮುಖಂಡರು ಏನು ಹೇಳಿದರು?

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿ.ಎಂ. ಜಯರಾಂ, “ಹಂಡಿಗನಾಳದ ಮಹಿಳಾ ಸಹಕಾರ ಸಂಘವು ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾಲು ಶೇಖರಿಸುವ ಸಂಘಗಳಲ್ಲಿ ಒಂದಾಗಿದೆ. ಉತ್ತಮ ಆಡಳಿತದ ಮೂಲಕ ಸಂಘ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದರು.

ಸಂಘದ ನಿರ್ದೇಶಕರಾದ ಅನಸೂಯಮ್ಮ, ಮುನಿರತ್ನಮ್ಮ, ಪಾರ್ವತಮ್ಮ, ರತ್ನಮ್ಮ, ಕಾಂತಮ್ಮ, ಯಶೋಧಮ್ಮ, ಎನ್.ಜಿ. ಶಾಂತಮ್ಮ, ಅನಸೂಯಮ್ಮ, ಮುನಿರತ್ನಮ್ಮ ಹಾಗೂ ಶಾರದಮ್ಮ, ಕಾರ್ಯದರ್ಶಿ ರೂಪ, ಕಾಂಗ್ರೆಸ್ ಮುಖಂಡರಾದ ಅರುಣ್‌ಕುಮಾರ್, ನಾರಾಯಣಸ್ವಾಮಿ, ರಾಮಚಂದ್ರಪ್ಪ, ಗೋವಿಂದರಾಜು, ರಾಮಚಂದ್ರ, ಗಜೇಂದ್ರ, ರಕ್ಷಿತ್ ಇದ್ದರು.

In English: Congress-backed S. Nalina Thimmarayappa has been elected unopposed as president, and Muniratnamma Ramachandra as vice-president, of the Handiganala Women’s Milk Producers’ Cooperative Society, in an election held on Friday at the society hall; returning officer Manjunath announced the result as only one nomination was filed for each post. Congress leader B.M. Jayaram said the society is among the taluk’s top milk-collecting societies and runs profitably through good administration.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -